ETV Bharat / state

ಚಿಂದಿ ಆಯುವವನ ಯಡವಟ್ಟು: ಬಾಕ್ಸ್​ ಕಂಡು ಬೆಚ್ಚಿಬಿದ್ದ ಸಾರ್ವಜನಿಕರು - Suspicious box

ಬೆಂಗಳೂರಿನ ಮಿನರ್ವ ಸರ್ಕಲ್ ಬಳಿ ಬಾಕ್ಸ್​ಗಳನ್ನು​ ಕಂಡು ಅನುಮಾನಗೊಂಡ ಜನರು ಕೆಲಕಾಲ ಭಯಭೀತರಾದ ಘಟನೆ ವರದಿಯಾಗಿದೆ.

people-scared-after-seeing-a-suspicious-box-in-bengaluru
ಚಿಂದಿ ಆಯುವವನ ಯಡವಟ್ಟು: ಬಾಕ್ಸ್​ ಕಂಡು ಬೆಚ್ಚಿಬಿದ್ದ ಸಾರ್ವಜನಿಕರುc
author img

By ETV Bharat Karnataka Team

Published : Feb 14, 2024, 11:21 AM IST

Updated : Feb 14, 2024, 11:55 AM IST

ಘಟನೆ ಬಗ್ಗೆ ಮಾಹಿತಿ ನೀಡಿದ ಎಟಿಎಂ ಸೆಕ್ಯೂರಿಟಿ ಗಾರ್ಡ್​​

ಬೆಂಗಳೂರು : ಚಿಂದಿ ಆಯುವವನ ಯಡವಟ್ಟಿನಿಂದಾಗಿ ಬಾಂಬ್ ನಿಷ್ಕ್ರಿಯದಳದವರು ಹಾಗೂ ಸಾರ್ವಜನಿಕರು ಹೈರಾಣಾದ ಘಟನೆ ಸೋಮವಾರ ಬೆಳಗ್ಗೆ ಮಿನರ್ವ ಸರ್ಕಲ್ ಬಳಿ ನಡೆದಿದೆ. ಖಾಸಗಿ ಬ್ಯಾಂಕಿನ ಎಟಿಎಂ ಪಕ್ಕದಲ್ಲಿ ಚಿಂದಿ ಆಯುವಾತ ಇಟ್ಟಿದ್ದ ಬಾಕ್ಸ್ ಕಂಡು ಗಾಬರಿಯಾದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸ್​​ ಹಾಗೂ ಬಾಂಬ್ ನಿಷ್ಕ್ರಿಯದಳದವರು ಬಂದು ತಪಾಸಣೆ ನಡೆಸಿದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.

ಎಟಿಎಂ ಹಣ ತುಂಬುವ ಬಾಕ್ಸ್: ಫೆಬ್ರವರಿ 12ರ ಬೆಳಗ್ಗೆ 8.30ರ ಸುಮಾರಿಗೆ ಜೆಸಿ ರಸ್ತೆಯ ಮಿನರ್ವ ಸರ್ಕಲ್ ಬಳಿಯಿರುವ ಖಾಸಗಿ ಬ್ಯಾಂಕಿನ ಎಟಿಎಂ ಸಮೀಪದಲ್ಲಿ ಎರಡ್ಮೂರು ಖಾಲಿ ಬಾಕ್ಸ್​ಗಳು ಪತ್ತೆಯಾಗಿದ್ದವು. ಅವುಗಳನ್ನ ಗಮನಿಸಿದ್ದ ಎಟಿಎಂ ಸೆಕ್ಯೂರಿಟಿ ಗಾರ್ಡ್ ಹತ್ತಿರ ಹೋಗಿ‌ ನೋಡಿದಾಗ ಇದೊಂದು ಎಟಿಎಂ ಮಷಿನ್​ನಲ್ಲಿ ಹಣ ತುಂಬುವ ಬಾಕ್ಸ್ ಎಂಬುದು ಗೊತ್ತಾಗಿತ್ತು. ತಕ್ಷಣ ಆತ ಕಲಾಸಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದ‌. ಸ್ಥಳಕ್ಕೆ ಬಂದ ಪೊಲೀಸರು ಅಕ್ಕಪಕ್ಕದ ಎಟಿಎಂ, ಬ್ಯಾಂಕ್​​ಗಳಲ್ಲಿ ಏನಾದರೂ ರಾಬರಿಯಾಗಿರಬಹುದಾ ಎಂದು ಪರಿಶೀಲನೆ ನಡೆಸಿದ್ದರು. ಅಷ್ಟೇ ಅಲ್ಲದೆ, ಬಾಂಬ್ ನಿಷ್ಕ್ರಿಯ ದಳವನ್ನು ಕರೆಯಿಸಿ ಪರಿಶೀಲಿಸಿದ್ದರು.‌ ಆದರೆ, ಬಾಕ್ಸ್ ತೆರೆಸಿದಾಗ ಅವು ಖಾಲಿ ಬಾಕ್ಸ್​ಗಳು ಎಂಬುದು ತಿಳಿದು ಬಂದಿತ್ತು.

ಅಕ್ಕಪಕ್ಕದ ಅಂಗಡಿಗಳ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದಾಗ, ಇದು‌ ಚಿಂದಿ ಆಯುವ ವ್ಯಕ್ತಿಯ ಕೆಲಸ ಎಂದು ತಿಳಿದು ಬಂದಿದೆ. ಸದ್ಯ ಕಲಾಸಿಪಾಳ್ಯ ಪೊಲೀಸರು ಖಾಲಿ ಬಾಕ್ಸ್​​ಗಳನ್ನು ವಶಕ್ಕೆ ಪಡೆದು, ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಶಸ್ತ್ರಾಗಾರಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ದಾಂಧಲೆ; ಎಫ್ಐಆರ್ ದಾಖಲು

ಶಾಲೆಗೆ ಹುಸಿ ಬಾಂಬ್​ ಸಂದೇಶ: ಇತ್ತೀಚಿಗೆ ಬೆಂಗಳೂರು ನಗರದ ಶಾಲೆಗಳಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ - ಮೇಲ್ ರವಾನಿಸುತ್ತಿರುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಇಲ್ಲಿನ ಕೇಂದ್ರೀಯ ವಿದ್ಯಾಲಯದ ಅಧಿಕೃತ ಇ-ಮೇಲ್ ಐಡಿಗೆ ಜನವರಿ 28 ರಂದು ಬೆಳಗ್ಗೆ 7.37 ರ ಸುಮಾರಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಶಾಲೆಯ ಒಳಗಡೆ ಒಂದು ಬಾಂಬ್ ಇಡಲಾಗಿದೆ. ಬೆಳಗ್ಗೆ 10:20ಕ್ಕೆ ಸ್ಫೋಟ ಆಗಲಿದೆ ಎಂದು ಹೇಳಲಾಗಿತ್ತು. ಇದನ್ನರಿತ ಶಾಲಾ ಆಡಳಿತ ಮಂಡಳಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿತ್ತು.

Last Updated : Feb 14, 2024, 11:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.