ಹಾವೇರಿ: ರಾಜ್ಯದಲ್ಲಿ ಜನ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಟೀಕಿಸಿದರು. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರಲ್ಲಿ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಹತಾಶರಾಗಿದ್ದಾರೆ. ಸಿಎಂ ಬಳಿ ಹೋದ್ರೆ ಅವರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ, ಜನರ ಬಳಿ ಹೋಗಲೂ ಆಗುತ್ತಿಲ್ಲ. ರಾಜಕಾರಣ ಮತ್ತು ಜನರ ಕಾರಣದಿಂದ ಸರ್ಕಾರದ ಆಯುಷ್ಯ ಬಹಳ ಕಡಿಮೆ ಇದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ನವರು ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುವ ನಿರೀಕ್ಷೆ ಮಾಡಿದ್ದರು. ಅವರ ನಿರೀಕ್ಷೆಗೆ ತಕ್ಕಂತೆ ಜನ ಮತ ಹಾಕಿಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸರ್ಕಾರ ನಡೆಸಲು ಆಗುತ್ತಿಲ್ಲ. ಈ ಬರಗಾಲದಲ್ಲಿ ರೈತನ ಕಣ್ಣೀರೊರೆಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಇವಿಎಂ ಮಷಿನ್ ಹ್ಯಾಕ್ ಆಗಿದೆ ಎಂದು ಆರೋಪಿಸಿರುವ ವಿಚಾರವಾಗಿ ಮಾತನಾಡುತ್ತಾ, ಡಿಕೆಶಿ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಇವಿಎಂ ಬಗ್ಗೆ ಚರ್ಚೆ ಮಾಡಲು ಕಾನೂನು ಪ್ರಕಾರ ಅವಕಾಶ ಇದೆ, ಮಾಡಲಿ ಎಂದು ತಿಳಿಸಿದರು.
ತೈಲಬೆಲೆ ಏರಿಕೆ ಪರಿಣಾಮವನ್ನು ಬರುವ ದಿನಗಳಲ್ಲಿ ಅನುಭವಿಸುತ್ತಾರೆ. ಚುನಾವಣಾಪೂರ್ವದಲ್ಲಿ ಹೇಳೋದು ಬೇರೆ, ಈಗ ನಡವಳಿಕೆ ಬೇರೆಯಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ಶಿಕ್ಷಣ ಸಿಕ್ಕಿದ್ದರಿಂದ ಸಿಎಂ ಆದೆ, ಇಲ್ಲದಿದ್ದರೆ ಎಮ್ಮೆ ಮೇಯಿಸಬೇಕಿತ್ತು: ಸಿಎಂ ಸಿದ್ದರಾಮಯ್ಯ - CM Siddaramaiah