ETV Bharat / state

ನಡುರಾತ್ರಿ ಮನೆಯಂಗಳಕ್ಕೆ ಬಂತು ಜೀಪ್‌; ನಕ್ಸಲರೆಂದು ಭಾವಿಸಿ ಮನೆಮಂದಿ ಗಪ್‌ಚುಪ್‌ - Kadaba

ಕಡಬದ ಮನೆಯೊಂದಕ್ಕೆ ಮಧ್ಯರಾತ್ರಿ ವೇಳೆ ಕೇರಳ ನೋಂದಣಿಯ ಜೀಪ್ ಮೂಲಕ ಅಪರಿಚಿತರು ಆಗಮಿಸಿದ್ದರಿಂದ ಮನೆಮಂದಿ ಭಯಬೀತರಾಗಿದ್ದರು.

Kadaba Police Station
ಕಡಬ ಪೊಲೀಸ್ ಠಾಣೆ
author img

By ETV Bharat Karnataka Team

Published : Apr 8, 2024, 7:12 PM IST

ಕಡಬ: ತಾಲೂಕಿನ ಐತ್ತೂರು ಗ್ರಾಮದ ಅಮುಣಿಪಾಲ್‌ ಎಂಬಲ್ಲಿನ ಮನೆಯೊಂದರ ಅಂಗಳಕ್ಕೆ ಶನಿವಾರ ತಡರಾತ್ರಿ ಕೇರಳ ನೋಂದಣಿಯ ಜೀಪೊಂದರಲ್ಲಿ ಅಪರಿಚಿತ ವ್ಯಕ್ತಿಗಳು ಆಗಮಿಸಿದ್ದಾರೆ. ಈ ವ್ಯಕ್ತಿಗಳನ್ನು ಕಂಡು ನಕ್ಸಲರೆಂದು ಮನೆಮಂದಿ ಭಯಭೀತರಾಗಿದ್ದಾರೆ.

ರಾತ್ರಿ ಸುಮಾರು 1.30ರ ವೇಳೆಗೆ ಮನೆಯ ಹೊರಗಡೆ ವಾಹನದ ಹಾರ್ನ್ ಕೇಳಿ ನಿದ್ದೆಯಿಂದೆದ್ದು ಬಂದ ಮನೆ ಯಜಮಾನ, ವೃತ್ತಿಯಲ್ಲಿ ಜೀಪು ಚಾಲಕರಾಗಿರುವ ಕುಶಾಲಪ್ಪ ಗೌಡ ಬಾಗಿಲು ತೆರೆದಿದ್ದಾರೆ. ಅಂಗಳದಲ್ಲಿ ಸ್ವಲ್ಪ ದೂರದಲ್ಲಿ ಜೀಪು ನಿಂತಿರುವುದನ್ನು ಕಂಡು ಗಾಬರಿಯಿಂದ ವಾಪಸ್​ ಬಾಗಿಲು ಹಾಕಿಕೊಳ್ಳಲು ಮುಂದಾಗುವಷ್ಟರಲ್ಲಿ ಜೀಪಿನಿಂದ ಇಳಿದುಬಂದ ವ್ಯಕ್ತಿಯೊಬ್ಬ, ಮಲಯಾಳಂ ಭಾಷೆಯಲ್ಲಿ ಕೊಣಾಜೆಗೆ ಹೋಗುವ ದಾರಿ ಯಾವುದೆಂದು ಕೇಳಿದ್ದಾನೆ.

ಆಗ ಕುಶಾಲಪ್ಪ ಗೌಡರು, ಕೊಣಾಜೆಯಲ್ಲಿ ಎಲ್ಲಿಗೆ? ಎಂದು ಕೇಳಿದಾಗ, ಆತ ತನ್ನ ಮೊಬೈಲ್‌ನಲ್ಲಿ ಯಾರಿಗೋ ಕರೆ ಮಾಡಿ ಇವರಿಗೆ ಕೊಟ್ಟಿದ್ದಾನೆ. ಕರೆ ಸ್ವೀಕರಿಸಿದ ವ್ಯಕ್ತಿ ತುಳುವಿನಲ್ಲಿ ಮಾತನಾಡಲು ಆರಂಭಿಸಿದಾಗ ಕರೆ ಕಡಿತಗೊಂಡಿದೆ. ಬಳಿಕ ಜೀಪಿನಲ್ಲಿ ಬಂದವರು ಅಲ್ಲಿಂದ ಹೊರಟುಹೋಗಿದ್ದಾರೆ.

ಅಷ್ಟರಲ್ಲಿ ಕುಶಾಲಪ್ಪಗೌಡರ ಪುತ್ರ ಜೀಪಿನ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡಿದ್ದರು. ಜೀಪಿನಲ್ಲಿ ಪಾತ್ರೆಗಳು, ಮರ ಕತ್ತರಿಸುವ ಯಂತ್ರಗಳು ಸೇರಿದಂತೆ ಹಲವು ಸಾಮಗ್ರಿಗಳು ಇದ್ದುದನ್ನು ಕಂಡ ಕುಶಾಲಪ್ಪ ಗೌಡರು, ಅವರು ಎರಡು ದಿನ ಮುಂಚೆ ಬಿಳಿನೆಲೆ ಚೇರು ಭಾಗದಲ್ಲಿ ಕಂಡುಬಂದ ನಕ್ಸಲರಾಗಿರಬಹುದೇ? ಎನ್ನುವ ಸಂಶಯದಿಂದ ತನ್ನ ಪರಿಚಿತರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕಡಬ ಪೊಲೀಸರು ಜೀಪಿನ ನೋಂದಣಿ ಸಂಖ್ಯೆ ಆಧಾರದಲ್ಲಿ ಜೀಪಿನ ಮಾಲೀಕರ ವಿಳಾಸವನ್ನು ಮತ್ತು ಮೊಬೈಲ್ ಸಂಖ್ಯೆಯನ್ನು ಪತ್ತೆ ಮಾಡಿದಾಗ, ಅದು ಕಾಸರಗೋಡು ಮೂಲದ ಟೋಮಿ ಮ್ಯಾಥ್ಯು ಅವರಿಗೆ ಸೇರಿದ ವಾಹನ ಎಂದು ತಿಳಿದುಬಂದಿದೆ.

ಬಳಿಕ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ರಬ್ಬರ್ ತೋಟದ ಕಳೆ ಕತ್ತರಿಸುವ ಕೆಲಸಗಾರರನ್ನು ಕಡಬದ ಕೊಣಾಜೆಗೆ ಕರೆದೊಯುತ್ತಿದ್ದಾಗ ರಾತ್ರಿ ವೇಳೆ ದಾರಿತಪ್ಪಿದ್ದರಿಂದ, ದಾರಿ ಕೇಳುವುದಕ್ಕಾಗಿ ಮನೆಯವರನ್ನು ಎಬ್ಬಿಸಿದ್ದಾಗಿ ಕರೆ ಸ್ವೀಕರಿಸಿದಾತ ತಿಳಿಸಿದ್ದಾರೆ. ಕುಶಾಲಪ್ಪಗೌಡರು ಕೂಡ ರವಿವಾರ ಬೆಳಗ್ಗೆ ಕೊಣಾಜೆಯ ತನ್ನ ಪರಿಚಿತರಲ್ಲಿ ವಿಚಾರಿಸಿದಾಗ ರಾತ್ರಿ ವೇಳೆ ಕೇರಳದಿಂದ ರಬ್ಬರ್ ತೋಟದ ಕೆಲಸಕ್ಕೆ ಜನ ಬಂದಿರುವುದು ದೃಢಪಟ್ಟಿದೆ.

ಈ ಬಗ್ಗೆ 'ಈಟಿವಿ ಭಾರತ'ದ ಜತೆಗೆ ಮಾತನಾಡಿದ ಕುಶಾಲಪ್ಪಗೌಡರು, ನನಗೆ ಒಂದು ಜೀಪ್ ಇದೆ. ಈ ಹಿಂದೊಮ್ಮೆ ರಾತ್ರಿ ವೇಳೆ ಇದರ ಹಾರ್ನ್ ಶಾರ್ಟ್ ಆಗಿ ಸದ್ದು ಬಂದಿತ್ತು. ನಿನ್ನೆ ಬಂದವರು ಹಾರ್ನ್ ಹಾಕುವ ಸದ್ದು ಕೇಳಿದಾಗ ನನ್ನ ವಾಹನದಿಂದ ಬರುವ ಸದ್ದು ಎಂದು ತಿಳಿದು ಬಾಗಿಲು ತೆಗೆದು ಹೊರಗಡೆ ಬಂದಿದ್ದೇನೆ. ಆದರೆ ಹೊರಗಡೆ ಬೇರೆ ಜೀಪ್ ಒಂದು ನಿಂತಿತ್ತು. ಮಾತ್ರವಲ್ಲದೆ ಅದರಲ್ಲಿ ಹಲವು ಜನರು ಸೇರಿದಂತೆ ಪಾತ್ರೆಗಳು, ಮರ ಕತ್ತರಿಸುವ ಯಂತ್ರಗಳು ಸೇರಿದಂತೆ ಹಲವು ಸಾಮಗ್ರಿಗಳು ಕಂಡಿವೆ. ಈ ಕಾರಣದಿಂದಾಗಿ ಭಯ ಉಂಟಾಗಿದೆ. ಆದರೆ ನಂತರದಲ್ಲಿ ಮಾಹಿತಿ ತಿಳಿದು ಸಮಾಧಾನವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಬಿಜಾಪುರದಲ್ಲಿ ರಕ್ತಸಿಕ್ತ ಘಟನೆ : ಅಪರಿಚಿತ ದಾಳಿಕೋರರಿಂದ ಗ್ರಾಮಸ್ಥರ ಮೇಲೆ ಹಲ್ಲೆ; ಮೂವರ ಸಾವು - Unidentified Assailants Attacked

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.