ETV Bharat / state

ಎರಡೂವರೆ ವರ್ಷಗಳ ಬಳಿಕ ಪೀಣ್ಯ ಫ್ಲೈಓವರ್‌ನಲ್ಲಿ ಭಾರೀ ವಾಹನ ಸಂಚಾರಕ್ಕೆ ಗ್ರೀನ್ ಸಿಗ್ನಲ್​ - Peenya Flyover Open

author img

By ETV Bharat Karnataka Team

Published : Jul 25, 2024, 2:30 PM IST

ಕೆನ್ನಮೆಟಲ್​ ಅಪ್ಪರ್​ ರ್‍ಯಾಂಪ್‌ನಿಂದ ಎಸ್.ಆರ್.ಎಸ್.ಡೌನ್ ರ್‍ಯಾಂಪ್‌ವರೆಗಿನ ಪ್ರೆಸ್ಟ್ರೆಸ್ಡ್ ಕೇಬಲ್‌ಗಳ ಬದಲಿ ಕಾಮಗಾರಿಯ ಕಾರಣದಿಂದ ಪೀಣ್ಯ ಫ್ಲೈಓವರ್‌ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿತ್ತು.

ಪೀಣ್ಯ ಫ್ಲೈಓವರ್ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್
ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ (ETV Bharat)

ಬೆಂಗಳೂರು: ಪೀಣ್ಯ ಫ್ಲೈಓವರ್​ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು, ಜುಲೈ 29ರಿಂದ ಎಲ್ಲಾ ವಾಹನಗಳ ಸಂಚಾರಕ್ಕೆ ಗ್ರೀನ್​​ ಸಿಗ್ನಲ್​ ನೀಡಲಾಗಿದೆ.

ಪೀಣ್ಯ ಫ್ಲೈಓವರ್‌ನ ಕೆನ್ನಮೆಟಲ್​ ಅಪ್ಪರ್​ ರ್‍ಯಾಂಪ್‌ನಿಂದ ಎಸ್.ಆರ್.ಎಸ್.ಡೌನ್ ರ್‍ಯಾಂಪ್‌ವರೆಗಿನ ಪ್ರೆಸ್ಟ್ರೆಸ್ಡ್ ಕೇಬಲ್‌ಗಳ ಬದಲಿ ಕಾಮಗಾರಿಯ ಕಾರಣದಿಂದ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ 2022ರ ಫೆಬ್ರವರಿಯಲ್ಲಿ ಆದೇಶಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗ್ರೀನ್​ ಸಿಗ್ನಲ್ ನೀಡಿದೆ. ಅದರನ್ವಯ ಜುಲೈ 29ರಿಂದ ಸಂಚಾರಕ್ಕೆ ಮುಕ್ತಗೊಳಿಸಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯಿಂದ ಆದೇಶಿಸಲಾಗಿದೆ.

ಗರಿಷ್ಠ ವೇಗ ಮಿತಿ: ನೂತನವಾಗಿ ಪ್ರೆಸ್ಟ್ರೆಸ್ಡ್‌ ಕೇಬಲ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರಿಂದ ಬೇಡಿಕೆ ಬಂದ ಕಾರಣ ಬೃಹತ್ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಗ್ರೌಟಿಂಗ್ ಕಾಮಗಾರಿಯ ಸಲುವಾಗಿ ಶುಕ್ರವಾರ ಮುಂಜಾನೆ 6 ರಿಂದ ಶನಿವಾರ ಮುಂಜಾನೆ 6 ಗಂಟೆಯವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ಭಾರಿ ವಾಹನಗಳಿಗೆ ಫ್ಲೈಓವರ್ ಮೇಲೆ ಗರಿಷ್ಠ ವೇಗದ ಮಿತಿಯನ್ನು 40 ಕಿ.ಮೀ.ಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: 2 ವರ್ಷದ ನಂತರ ಭರ್ತಿಯಾದ ಕನ್ನಂಬಾಡಿ ಅಣೆಕಟ್ಟು: ಕೆಆರ್​ಎಸ್​​ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಸಿಎಂ - KRS dam water filled

ETV Bharat Logo

Copyright © 2024 Ushodaya Enterprises Pvt. Ltd., All Rights Reserved.