ETV Bharat / state

ಬಿಆರ್​ಟಿಎಸ್ ಬಸ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವು: ಸಾರ್ವಜನಿಕರ ಪ್ರತಿಭಟನೆ - Road Accident - ROAD ACCIDENT

ಬಿಆರ್​ಟಿಎಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ನಗರದ ವಿದ್ಯಾ ನಗರದ ಗುರುದತ್ ಭವನದ ಬಳಿಯಲ್ಲಿ ನಡೆದಿದೆ. ವೃದ್ಧನ ಸಾವು ಖಂಡಿಸಿದ ಪ್ರತಿಭಟನಾಕಾರರು, ಬಿಆರ್​ಟಿ‌ಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

BRTS  Road Accident  Dharwad
ಬಿಆರ್​ಟಿಎಸ್ ಬಸ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವು: ಸಾರ್ವಜನಿಕರ ಪ್ರತಿಭಟನೆ (ETV Bharat)
author img

By ETV Bharat Karnataka Team

Published : Jul 3, 2024, 5:32 PM IST

ಬಿಆರ್​ಟಿಎಸ್ ಬಸ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವು: ಸಾರ್ವಜನಿಕರ ಪ್ರತಿಭಟನೆ (ETV Bharat)

ಹುಬ್ಬಳ್ಳಿ: ಬಿಆರ್​ಟಿಎಸ್ (ಚಿಗರಿ) ಬಸ್​ವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ವಿದ್ಯಾನಗರದ ಗುರುದತ್ ಭವನದ ಬಳಿ ನಡೆದಿದೆ. ನಗರದ ಗೋಕುಲ್ ರಸ್ತೆಯ ಮಂಜುನಾಥ ನಗರದ ವೃದ್ಧ ಗಂಗಾಧರ್ ಬಸವಂತಪ್ಪ ಮಮ್ಮಿಗಟ್ಟಿ (84) ಎಂಬುವರು ಸಾವನ್ನಪ್ಪಿದ್ದಾರೆ.

ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ದಾಟುತ್ತಿದ್ದ ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಹೋಗುತ್ತಿದ್ದ ಚಿಗರಿ ಬಸ್​ನಿಂದ ಈ ಅವಘಡ ಸಂಭವಿಸಿದೆ. ವೃದ್ಧನ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತಂತೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ.

ಪಾದಚಾರಿ ಸಾವು ಖಂಡಿಸಿ ಸಾರ್ವಜನಿಕರ ಪ್ರತಿಭಟನೆ: ಚಿಗರಿ ಬಸ್​ನ ಅತೀ ವೇಗವೇ ಈ ಅನಾಹುತಕ್ಕೆ ಕಾರಣವೆಂದು ಸಾರ್ವಜನಿಕರು ಆರೋಪಿಸಿದರು. ಅಲ್ಲದೆ, ಘಟನಾ ಸ್ಥಳದಲ್ಲಿಯೇ ವೃದ್ಧನ ಸಾವು ಖಂಡಿಸಿದ ಪ್ರತಿಭಟನಾಕಾರರು, ಬಿಆರ್​ಟಿ‌ಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪದೇ ಪದೇ ಚಿಗರಿ ಬಸ್​ನಿಂದಾಗಿ ಒಂದಿಲ್ಲ ಒಂದು ಅವಘಡಗಳು ಸಂಭವಿಸುತ್ತಿದ್ದು, ಬಿಆರ್​ಟಿಎಸ್​​ನಿಂದಾಗುವ ಅವಘಡಕ್ಕೆ ಬ್ರೇಕ್ ಹಾಕಬೇಕು. ಪಾದಚಾರಿಗಳ ಜೀವಕ್ಕೆ ಕುತ್ತು ಬಾರದ ರೀತಿಯಲ್ಲಿ ಬಿಆರ್​​ಟಿಎಸ್ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ: ಬೈಕ್​​ನಲ್ಲಿ ಹೋಗ್ತಿದ್ದ ವೇಳೆ ತುಂಡರಿಸಿ ಬಿದ್ದ ವಿದ್ಯುತ್ ತಂತಿ: ಸ್ಥಳದಲ್ಲೇ ಯುವ ರೈತ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.