ETV Bharat / state

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿ: ಮಧು ಬಂಗಾರಪ್ಪ

author img

By ETV Bharat Karnataka Team

Published : Feb 9, 2024, 11:02 PM IST

ಈ ಬಾರಿ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ನಮ್ಮ ಪಕ್ಷ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಅವರು ತುಂಬಾ ಪರಿಚಯವಿರುವ ವ್ಯಕ್ತಿಯೇ ಆಗಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Minister Madhu Bangarappa
ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: "ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಅಚ್ಚರಿಯ ಅಭ್ಯರ್ಥಿಯನ್ನು ಶಿವಮೊಗ್ಗದಿಂದ ಕಣಕ್ಕೆ ಇಳಿಸಲಿದೆ. ಹೈಕಮಾಂಡ್​ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದೆ. ನಮ್ಮ ಪಕ್ಷದ ಅಭ್ಯರ್ಥಿ ಎಲ್ಲರಿಗೂ ತಿಳಿದಿರುವ ವ್ಯಕ್ತಿಯಾಗಿದ್ದಾರೆ. ಪಕ್ಷ ಅದಷ್ಟು ಬೇಗ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, "ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ಹೈಕಮಾಂಡ್‌ದೇ ಆಗಿರುತ್ತದೆ. ನನಗೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಗಳ ಜವಾಬ್ದಾರಿಯನ್ನು ನೀಡಲಾಗಿದೆ. ಅಲ್ಲದೆ ಉಡುಪಿ, ಕಾರವಾರ, ಚಿಕ್ಕಮಗಳೂರು ಜಿಲ್ಲೆಗಳನ್ನೂ ನೋಡಿಕೊಳ್ಳುವಂತೆ ಹೈಕಮಾಂಡ್​ ತಿಳಿಸಿದೆ" ಎಂದರು.

ನಟ ಶಿವ ರಾಜ್‌ಕುಮಾರ್ ಸ್ಪರ್ಧೆ ಕುರಿತು ಮಾತನಾಡಿದ ಅವರು, "ಅವರು ನಮ್ಮ ಸಮಾಜದ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್​ ಅವರು, ಶಿವಣ್ಣ ಅವರಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಹೇಳಿದರು. ಆಗ ಶಿವಣ್ಣ, ನಾವು ಬಣ್ಣ ಹಚ್ಚುವವರು, ರಾಜಕಾರಣ ನಮಗಲ್ಲ. ಗೀತಾ ಅವರು ಸ್ಪರ್ಧಿಸ್ತಾರಂದ್ರೆ, ಗಂಡನಾಗಿ ಅವರಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರ ಹಿಂದೆಯೂ ಅಭಿಮಾನಿಗಳಿದ್ದಾರೆ. ಹಾಗಾಗಿ ನಾವು ಶಿವಣ್ಣ ಅವರ ಮಾತುಗಳನ್ನು ಗೌರವಿಸುತ್ತೇವೆ" ಎಂದರು.

ಕೇಂದ್ರ ಸರ್ಕಾರ ರಾಜ್ಯಗಳ ತೆರಿಗೆಯಲ್ಲಿ ಉಸಿರಾಡುತ್ತಿದೆ: ಬಿಜೆಪಿಯವರು ರಾಜ್ಯದಲ್ಲಿ ಬರದ ಅಧ್ಯಯನ ಮಾಡಿ ವರದಿಯನ್ನು ಯಾರಿಗೆ ನೀಡಿದ್ದಾರೆ. ಸಂಸದರು ಯಾಕೆ ಆ ಬಗ್ಗೆ ಸದನದಲ್ಲಿ ಬಾಯಿ ಬಿಚ್ಚಲ್ಲ? ಕೇಂದ್ರ ರಾಜ್ಯದ ಪ್ರತಿ ಮಕ್ಕಳಿಗೆ 5 ರಿಂದ 6 ಸಾವಿರ ರೂ ನೀಡಬೇಕು, ಆದರೆ ಅದನ್ನು ಕೇಂದ್ರ ನೀಡಿಲ್ಲ. ಈ ಕುರಿತು ಮಾತನಾಡಲು ಮಂತ್ರಿಗಳು ಸಮಯವಕಾಶವನ್ನು ನೀಡುತ್ತಿಲ್ಲ. ನಮ್ಮ ರಾಜ್ಯ ನೀಡಿದ ತೆರಿಗೆಯಲ್ಲಿ ಕೇಂದ್ರ ಉಸಿರಾಡುತ್ತಿದೆ. ಅದನ್ನು ಕೆ.ಎಸ್.ಈಶ್ವರಪ್ಪ ನವರು ಅರಿಯಬೇಕು. ಅವರು ಸಹ ಆಡಳಿತ ಮಾಡಿದವರೆ, ಹೇಳಿಕೆಗಳಿಂದ ಏನೂ ಆಗುವುದಿಲ್ಲ. ಕೇಂದ್ರ ಸರ್ಕಾರ ಶೇ 100ಕ್ಕೆ ನೂರರಷ್ಟು ರಾಜ್ಯಕ್ಕೆ ಮೋಸ ಮಾಡಿದೆ ಎಂದರು.

ಹರೀಶ್ ಪೂಂಜಾ ಗ್ಯಾರಂಟಿ ಯೋಜನೆ ಬಳಸಿಕೊಳ್ಳಬೇಡಿ ಎಂದು ಹೇಳಲಿ: ಶಾಸಕ ಹರೀಶ್ ಪೂಂಜಾ ಅವರ ಹಿಂದೂಗಳ ತೆರಿಗೆಯನ್ನು ಹಿಂದೂಗಳಿಗೆ ಮಾತ್ರ ಖರ್ಚು ಮಾಡಿ ಎಂಬ ಹೇಳಿಕೆಯ ವಿರುದ್ಧ ಮಧು ಬಂಗಾರಪ್ಪ ಗರಂ ಆದರು. ಕೋವಿಡ್​ ಸಮಯದಲ್ಲಿ ಮುಸ್ಲಿಂರು ಸಾಕಷ್ಟು ಜನರನ್ನು ಮಣ್ಣು ಮಾಡಿ ಮಾನವಿಯತೆ ಮೆರೆದಿದ್ದಾರೆ. ಹಾಗಾದರೆ ನಿಮ್ಮ ಕ್ಷೇತ್ರದ ಜನರಿಗೆ ಗ್ಯಾರಂಟಿ ಲಾಭ ಪಡೆಯದಂತೆ ಹೇಳಲು ಧಮ್ ತಾಕತ್ತಿದೆಯಾ? ಎಂದು ಸವಾಲು ಹಾಕಿದರು.

ಇದನ್ನೂ ಓದಿ: ರಾಜ್ಯಕ್ಕಾಗಿರುವ ಅನ್ಯಾಯದ ಸತ್ಯಾಂಶವನ್ನು ಪೂಂಜಾ ಒಪ್ಪಿಕೊಳ್ಳಲಿ: ದಿನೇಶ್ ಗುಂಡೂರಾವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.