ETV Bharat / state

ದಾವಣಗೆರೆ: ಥಲಸ್ಸೆಮಿಯಾ ರೋಗಕ್ಕೆ ತುತ್ತಾದ ಕಂದಮ್ಮಗಳಿಗೆ ಬೇಕಿದೆ ಸಹೃದಯಿಗಳ ಸಹಾಯ ಹಸ್ತ - Thalassemia disease - THALASSEMIA DISEASE

ಬಡ ಕುಟುಂಬವೊಂದರ ಇಬ್ಬರು ಮಕ್ಕಳು ಥಲಸ್ಸೆಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಧನಸಹಾಯಕ್ಕೆ ಪೋಷಕರು ಅಂಗಲಾಚುತ್ತಿದ್ದಾರೆ. ಇರುವ ಇಬ್ಬರು ಕಂದಮ್ಮಗಳ ಜೀವ ಉಳಿಸಲು ಸಹೃದಯಿಗಳಿಗೆ ಸಹಾಕ್ಕಾಗಿ ಮೊರೆಇಟ್ಟಿದ್ದಾರೆ.

ಥಲಸ್ಸೆಮಿಯಾ ರೋಗಕ್ಕೆ ತುತ್ತಾದ ಮಕ್ಕಳ ಚಿಕಿತ್ಸೆಗೆ ಸಹಾಯದ ಮೊರೆ ಇಟ್ಟ ಪೋಷಕರು
ಥಲಸ್ಸೆಮಿಯಾ ರೋಗಕ್ಕೆ ತುತ್ತಾದ ಮಕ್ಕಳ ಚಿಕಿತ್ಸೆಗೆ ಸಹಾಯದ ಮೊರೆ ಇಟ್ಟ ಪೋಷಕರು (ETV Bharat)
author img

By ETV Bharat Karnataka Team

Published : Jul 1, 2024, 1:40 PM IST

ಥಲಸ್ಸೆಮಿಯಾ ರೋಗಕ್ಕೆ ತುತ್ತಾದ ಮಕ್ಕಳ ಪೋಷಕರ ಕಣ್ಣೀರು (ETV Bharat)

ದಾವಣಗೆರೆ: ಅವರದ್ದು ಪುಟ್ಟ ಕುಟುಂಬ, ಮನೆಯ ಯಜಮಾನ ಲಾರಿ ಓಡಿಸಿದರೆ ಮಾತ್ರ ಕುಟುಂಬದ ಬದುಕಿನ ಬಂಡಿ ಸಾಗುತ್ತದೆ‌. ಇಂತಹ ಪರಿಸ್ಥಿತಿಯಲ್ಲಿ ಮನೆಯ ಇಬ್ಬರು ಪುಟ್ಟ ಕಂದಮ್ಮಗಳು ಥಲಸ್ಸೆಮಿಯಾ ಎಂಬ ಕಾಯಿಲೆಗೆ ತುತ್ತಾಗಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಪೋಷಕರು ಮಕ್ಕಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ದಾವಣಗೆರೆ ತಾಲೂಕಿನ ಬಾತಿ ಗ್ರಾಮದ ನಿವಾಸಿಯಾದ ಗಿರೀಶ್ ಹಾಗೂ ಅನ್ನಪೂರ್ಣ ದಂಪತಿಯ ಇಬ್ಬರು ಪುಟ್ಟ ಪುತ್ರಿಯರು ಥಲಸ್ಸೆಮಿಯಾ ರೋಗಕ್ಕೆ ತುತ್ತಾಗಿದ್ದಾರೆ. ಇಲ್ಲಿಯವರೆಗೆ ಕಂದಮ್ಮಗಳಿಗೆ ಚಿಕಿತ್ಸೆ ಕೊಡಿಸಿ ತಂದೆ ಗಿರೀಶ್ ಹೈರಾಣಾಗಿದ್ದಾರೆ. ಆಸ್ತಿ ಮಾರಿ, ಸಾಲ ಮಾಡಿ ಇಲ್ಲಿತನಕ 50 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ.

ಚಿಕಿತ್ಸೆ ಕೊಡಿಸದಿದ್ದಲ್ಲಿ ಜೀವಕ್ಕೆ ಅಪಾಯ; ಜತೆಗೆ ತಿಂಗಳಿಗೆ ಎರಡು ಬಾರಿ ರಕ್ತ ಹಾಕಿಸುತ್ತಿದ್ದಾರೆ. ಮಕ್ಕಳಿಗೆ ಒಂದು ಬಾರಿ ರಕ್ತ ನೀಡಲು 30 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇದೀಗ ಹಣ ಇಲ್ಲದೆ ದಿಕ್ಕು ತೋಚದೆ ದಾನಿಗಳ ಬಳಿ ಗಿರೀಶ್ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಸರಿಯಾಗಿ ಚಿಕಿತ್ಸೆ ನೀಡದೇ ಇದ್ದಲ್ಲಿ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ ಎಂದು ಪೋಷಕರು ಅಳಲು ಆತಂಕ ವ್ಯಕ್ತಪಡಿಸಿದ್ದಾರೆ.

ಇಬ್ಬರೂ ಮಕ್ಕಳಿಗೆ ಆಪರೇಷನ್ ಮಾಡಿಸಲು ಬರೋಬ್ಬರಿ 30 ಲಕ್ಷ ಬೇಕಾಗುತ್ತದೆ. ತಮ್ಮ ಮಕ್ಕಳ ಪ್ರಾಣ ರಕ್ಷಣೆಗಾಗಿ ಇಲ್ಲಿವರೆಗೆ ದಾವಣಗೆರೆಯ ಬಾಪೂಜಿ, ಉಡುಪಿಯ ಮಣಿಪಾಲ್, ಎನಪೋಯ ಎಂಬ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ತಿರುಗಾಡಿದ್ದರೂ ಪರಿಹಾರ ದೊರಕಿಲ್ಲ. ಹೀಗಾಗಿ ಯಾರಾದರು ದಾನಿಗಳಿದ್ದರೆ ಸಹಾಯ ಮಾಡಬೇಕೆಂದು ಈ ಬಡ ಕುಟುಂಬ ಅಂಗಲಾಚುತ್ತಿದೆ‌.

"ಇಬ್ಬರು ಪುತ್ರಿಯರು ಥಲಸ್ಸೆಮಿಯಾ ರೋಗಕ್ಕೆ ತುತ್ತಾಗಿದ್ದಾರೆ‌. ಪ್ರತಿ ತಿಂಗಳು ರಕ್ತ ಹಾಕಿಸಲೇಬೇಕಾದ ಪರಿಸ್ಥಿತಿ ಇದೆ. ಆಪರೇಷನ್ ಮಾಡಿಸಲು 30 ಲಕ್ಷ ಬೇಕಾಗಿದೆ. ನಮ್ಮ ಬಳಿ ಹಣ ಇಲ್ಲದೆ ದಿಕ್ಕು ತೋಚದಂತಾಗಿದೆ. ನಮಗೆ ಸಹಾಯ ಮಾಡಿ" ಎಂದು ತಾಯಿ ಅನ್ನಪೂರ್ಣ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಹೆಚ್ಚಳ ; 500ರ ಗಡಿ ದಾಟಿದ ಪ್ರಕರಣ - Dengue cases

ETV Bharat Logo

Copyright © 2025 Ushodaya Enterprises Pvt. Ltd., All Rights Reserved.