ETV Bharat / state

ಬೆಂಗಳೂರು : ಕುಡಿತದ ಮತ್ತಿನಲ್ಲಿ ಪಾನಿಪುರಿ ವ್ಯಾಪಾರಿ ಹತ್ಯೆ - PANIPURI MERCHANT MURDER

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಎಣ್ಣೆ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಪಾನಿಪುರಿ ವ್ಯಾಪಾರಿಯ ಹತ್ಯೆ ನಡೆದಿದೆ.

panipuri-merchant-killed
ಪಾನಿಪುರಿ ವ್ಯಾಪಾರಿ ಹತ್ಯೆ (ETV Bharat)
author img

By ETV Bharat Karnataka Team

Published : Oct 22, 2024, 1:14 PM IST

ಬೆಂಗಳೂರು : ಎಣ್ಣೆ ಮತ್ತಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಪಾನಿಪುರಿ ವ್ಯಾಪಾರಿಯನ್ನು ಕೊಲೆ ಮಾಡಿರುವ ಪ್ರಕರಣ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೃತನನ್ನು ಉತ್ತರ ಪ್ರದೇಶ ಮೂಲದ ಸರ್ವೇಶ್ ಎಂದು ಗುರುತಿಸಲಾಗಿದೆ.

ಕೊಲೆಗೈದು ರೂಂನಲ್ಲಿ ನಿದ್ರೆ ಮಾಡುತ್ತಿದ್ದ ಜಾರ್ಖಂಡ್‌ನ ರಾಹುಲ್ ಕುಮಾರ್ (27), ಸಹದೇವ್ ತುರಿ (45) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಮೊದಲಿಗೆ ಬಾರ್​ನಲ್ಲಿ ಗದ್ದಲದ ವಿಚಾರಕ್ಕೆ ಗಲಾಟೆ ಶುರುವಾಗಿತ್ತು. ನಂತರ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ವಿಪರೀತ ಮದ್ಯ ಸೇವಿಸಿದ್ದ ಆರೊಪಿಗಳು ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಸರ್ವೇಶ್, ವರ್ಷದ ಹಿಂದೆ ಪತ್ನಿ ಮತ್ತು ಮಗನ ಜೊತೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಕೋನಪ್ಪನ ಅಗ್ರಹಾರ ಪುರಸಭೆಯ ಬಳಿ ಪಾನಿಪುರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದ್ರೆ, ಕುಡಿತದ ಚಟದಿಂದ ಈತ ಬಲಿಯಾಗಿದ್ದಾನೆ. ಆರೋಪಿಗಳು ಪಾರ್ಕಿಂಗ್ ಟೈಲ್ಸ್​ನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಸರ್ವೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಪಾನಮತ್ತನಾಗಿ ಬಂದು ಗಲಾಟೆ ಮಾಡುತ್ತಿದ್ದ ಮಾಜಿ ಸಹೋದ್ಯೋಗಿ ಹತ್ಯೆ: ಇಬ್ಬರು ಸೆರೆ - Bengaluru Murder Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.