ETV Bharat / state

2 ಕೋಟಿ ವಾಹನಗಳ ಪೈಕಿ 37 ಲಕ್ಷ HSRP ಅಳವಡಿಕೆ; ಉಳಿದವರು ಇಷ್ಟು ದಂಡ ಕಟ್ಟಲು ಸಿದ್ಧರಾಗಿ! - HSRP - HSRP

ಎಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆಗೆ ವಾಹನ ಸವಾರರು ಹಿಂದೇಟು ಹಾಕುತ್ತಿದ್ದು, ಮೇ 31ಕ್ಕೆ ಗಡುವು ಅಂತ್ಯವಾಗಲಿದೆ. ಅಷ್ಟರಲ್ಲಿ ಅಳವಡಿಸದಿದ್ದರೆ ದಂಡ ಕಟ್ಟಬೇಕಿದೆ.

ಎಚ್ಎಸ್ಆರ್​ಪಿ ನಂಬರ್ ಪ್ಲೇಟ್
ಎಚ್ಎಸ್ಆರ್​ಪಿ ನಂಬರ್ ಪ್ಲೇಟ್ (ETV Bharat)
author img

By ETV Bharat Karnataka Team

Published : May 17, 2024, 1:03 PM IST

ಬೆಂಗಳೂರು: ದೇಶದ ಎಲ್ಲಾ ವಾಹನಗಳಿಗೆ ಒಂದೇ ಮಾದರಿಯ ನಾಮಫಲಕವಿರುವಂತೆ ಮಾಡಲು ಹಾಗೂ ಅಪರಾಧ ಪತ್ತೆ ಹಚ್ಚಲು‌ ನೆರವಾಗುವ ಅತ್ಯಂತ ಸುರಕ್ಷತಾ ನೋಂದಣಿ ನಾಮಫಲಕ (ಎಚ್ಎಸ್ಆರ್​ಪಿ) ಅಳವಡಿಸುವಂತೆ ಮೂರನೇ ಬಾರಿ ಗಡುವು ವಿಸ್ತರಿಸಿದರೂ ಸವಾರರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ‌.‌ ರಾಜ್ಯದ ವಾಹನ ಸವಾರರಿಗೆ ಎಚ್ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮೇ 31ರವರೆಗೆ ಗಡುವು ನೀಡಿ ಕಳೆದ ಫೆಬ್ರುವರಿಯಲ್ಲಿ ರಾಜ್ಯ ಸರ್ಕಾರ ಮೂರನೇ ಬಾರಿ ಆದೇಶ ಹೊರಡಿಸಿತ್ತು.

ಎಚ್ಎಸ್ಆರ್​ಪಿ ಅಳವಡಿಸಿರುವ ವಾಹನಗಳ ಸಂಖ್ಯೆ ಎಷ್ಟು?: 2019 ಏಪ್ರಿಲ್ 1ರ ಮುನ್ನ ನೋಂದಣಿಯಾದ ಎಲ್ಲಾ ಮಾದರಿಯ ವಾಹನಗಳು ಹೊಸದಾಗಿರುವ ಎಚ್ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ವಾಹನ ಸವಾರರಿಗೆ ಸೂಚಿಸಿತ್ತು‌. ಮಾಹಿತಿ ಕೊರತೆ, ವೆಬ್ ಪೋರ್ಟಲ್​ನಲ್ಲಿ ಸರ್ವರ್ ತೊಂದರೆ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಸರ್ಕಾರವು ಗಡುವು ವಿಸ್ತರಿಸಿತ್ತು. 2 ಕೋಟಿ ವಾಹನಗಳ ಪೈಕಿ ಕೇವಲ 37.5 ಲಕ್ಷ ವಾಹನಗಳು ಮಾತ್ರ ಎಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿವೆ.

ಸಾರಿಗೆ ಇಲಾಖೆ ಹೇಳಿದ್ದೇನು?: ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾದರೆ ಗದಗ, ಕೊಪ್ಪಳ, ಹಾವೇರಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಕಡಿಮೆ‌ ಸಂಖ್ಯೆಯಲ್ಲಿ ನಂಬರ್ ಪ್ಲೇಟ್ ನೋಂದಣಿಯಾಗಿವೆ. ಈ ಬಗ್ಗೆ ಸೂಕ್ತ ಮಾಹಿತಿ ಹಾಗೂ ತಿಳುವಳಿಕೆ‌ ಮೂಡಿಸಿದರೂ ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿಲ್ಲ. ಅಂತಿಮ ದಿನವಾದ ಮೇ 31ರ ಬಳಿಕ ಗಡುವು ವಿಸ್ತರಣೆ ಮುಂದುವರೆಸಿದರೆ ಇನ್ನಷ್ಟು ಜಾಗೃತಿ ಮೂಡಿಸುತ್ತೇವೆ.‌ ಒಂದು ವೇಳೆ‌ ಕಾಲಾವಕಾಶ ವಿಸ್ತರಿಸದಿದ್ದಲ್ಲಿ ದಂಡ ವಿಧಿಸುತ್ತೇವೆ ಎಂದು 'ಈಟಿವಿ ಭಾರತ್‌'ಗೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತೆ ಗಡುವು ವಿಸ್ತರಣೆ ಅನುಮಾನ: ನಂಬರ್ ಪ್ಲೇಟ್ ಅಳವಡಿಕೆ ವಿಚಾರವಾಗಿ ಮೂರು ಬಾರಿ ಗಡುವು ವಿಸ್ತರಿಸಿದರೂ ಗಂಭೀರವಾಗಿ ವಾಹನ ಸವಾರರು ಪರಿಗಣಿಸಿಲ್ಲ‌. ಸರ್ಕಾರಕ್ಕೆ‌ ಪತ್ರ ಬರೆದಿರುವ ಸಾರಿಗೆ ಇಲಾಖೆ, ಮೇ 31ರ ಬಳಿಕ ಕೈಗೊಳ್ಳಬೇಕಾದ ನಿಲುವಿನ ಬಗ್ಗೆ ತಿಳಿಸುವಂತೆ ಮನವಿ ಮಾಡಲಾಗಿದೆ. ಈ ಬಾರಿ ಗಡುವು ವಿಸ್ತರಣೆ ಮಾಡುವುದು ಬಹುತೇಕ ಅನುಮಾನ ಎನ್ನಲಾಗಿದೆ. ದಂಡ ಪ್ರಯೋಗ ಮಾಡಿದಾಗ ಮಾತ್ರ ಸವಾರರು ಎಚ್ಚೆತ್ತುಕೊಳ್ಳುವ ಆಶಾಭಾವನೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರಕ್ಕೆ ಪತ್ರ ಬರೆದ ಸಾರಿಗೆ ಇಲಾಖೆ: ಕೆಲ ಹಳೆಯ ವಾಹನ ಕಂಪೆನಿಗಳ ಅಲಭ್ಯತೆಯಿಂದ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತುಂಬಾ ಹಳೆಯದಾಗಿರುವ ಕಂಪನಿಗಳು ಇದೀಗ ಭಾರತದಲ್ಲಿ ನೆಲೆಯಿಲ್ಲದ ಕಾರಣ ನೋಂದಣಿಗೆ ಹಿನ್ನೆಡೆಯಾಗಿದೆ. ಹೀಗಾಗಿ ಇದನ್ನ ಗಮನದಲ್ಲಿಸಿಕೊಂಡು ಕೇಂದ್ರಕ್ಕೆ‌ ರಾಜ್ಯ ಸರ್ಕಾರ ಪತ್ರ ಬರೆದಿದೆ. ಆಯಾ ಜಿಲ್ಲಾ ಕೇಂದ್ರ ಹಾಗೂ ನಗರದಲ್ಲಿರುವ ವಾಹನ ಕಂಪನಿಗಳ ಜೊತೆ ಮುಂದಿನ ದಿನಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ಎಸ್ಆರ್​ಪಿ ಉಪಯೋಗವೇನು?: ಅಸಲಿ ಹಾಗೂ ನಕಲಿ ನಂಬರ್‌ ಪ್ಲೇಟ್​ಗಳನ್ನು ಸುಲಭವಾಗಿ ಗುರುತಿಸಲು ಸಹಕಾರಿಯಾಗಲಿದೆ. ವಾಹನ ಕಳ್ಳತನ ಹಾಗೂ ಅಪಘಾತ ಸಂದರ್ಭಗಳಲ್ಲಿ ಹೊಸದಾದ ನಂಬರ್ ಪ್ಲೇಟ್ ಅಳವಡಿಸಿಕೊಂಡರೆ ಅನುಕೂಲವಾಗಲಿದೆ. ಇವುಗಳನ್ನು ಬದಲಿಸಿ ವಿರೂಪಗೊಳಿಸುವುದು ಸಾಧ್ಯವಿಲ್ಲ. ದ್ವಿಚಕ್ರ ಅಥವಾ ಕಾರಿನ ನಾಮಫಲಕದ ಮೇಲೆ ನೋಂದಣಿ‌ ಸಂಖ್ಯೆ ಜೊತೆ ಲೇಸರ್ ಕೋಡ್ ಇರಲಿದೆ. ಇದರಲ್ಲಿ ಇಂಜಿನ್‌ ಸಂಖ್ಯೆ, ಚಾರ್ಸಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳು ಕೇಂದ್ರೀಯ ಡೇಟಾದಲ್ಲಿ ಅಡಕವಾಗಿರಲಿದೆ. ಈ ಮಾಹಿತಿ ಬಳಸಿಕೊಂಡು ವಾಹನ ಕಳ್ಳತನವಾದಾಗ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಖದೀಮರ ಕೈಗೆ ಸಿಕ್ಕಾಗ ವಿರೂಪಗೊಳಿಸಲು ಅಥವಾ ತಿದ್ದಲು ಸಾಧ್ಯವಿಲ್ಲ. ಭಯೋತ್ಪಾದಕ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳವುದನ್ನ ತಡೆಗಟ್ಟಬಹುದಾಗಿದೆ.

ಯಾವ ವಾಹನಕ್ಕೆ ಎಷ್ಟು ದರ?: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಲು ದ್ವಿಚಕ್ರ ವಾಹನಕ್ಕೆ 450 ರೂ., ತ್ರಿಚಕ್ರ ವಾಹನಗಳಿಗೆ 550 ರೂ., ಕಾರುಗಳಿಗೆ 650 ರೂ., ಇತರೆ ನಾಲ್ಕು ಚಕ್ರದ ವಾಹನಗಳಿಗೆ 780 ರೂ. ಹಾಗೂ ಭಾರೀ ವಾಹನಗಳು ಹಾಗೂ 10 ಚಕ್ರದ ವಾಹನಗಳಿಗೆ 650 ರಿಂದ 800 ರೂ ಶುಲ್ಕ ನಿಗದಿ ಮಾಡಲಾಗಿದೆ.

ದಂಡ ಎಷ್ಟು?: ಒಂದು ವೇಳೆ‌ ನಂಬರ್‌ ಪ್ಲೇಟ್ ಅಳವಡಿಸಿಕೊಳ್ಳದಿದ್ದರೆ 500ರಿಂದ 1 ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು https://transport.karnataka.gov.in/english ಅಥವಾ https://www.siam.in/ ಜಾಲತಾಣಕ್ಕೆ ಭೇಟಿ ನೀಡಿ.

ಇದನ್ನೂ ಓದಿ: ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಮೀಪಿಸುತ್ತಿದೆ ಗಡುವು; ತಪ್ಪಿದ್ರೆ ದಂಡ ಗ್ಯಾರಂಟಿ! - Deadline for HSRP

ETV Bharat Logo

Copyright © 2024 Ushodaya Enterprises Pvt. Ltd., All Rights Reserved.