ETV Bharat / state

ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ ತಿರುಚುವ ಯತ್ನ ನಡೆದಿತ್ತು: ಆರ್​. ಅಶೋಕ್ ಆರೋಪ - Rameshwar Cafe Blast - RAMESHWAR CAFE BLAST

ಬೆಂಗಳೂರಿನ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್​ಐಎ ಪಾತ್ರ ದೊಡ್ಡದಿದೆ. ಅವರ ಸಾಹಸಕ್ಕೆ ವಿಪಕ್ಷ ನಾಯಕ ಆರ್​.ಅಶೋಕ್​​ ಅಭಿನಂದನೆ ಸಲ್ಲಿಸಿದ್ದಾರೆ.

ಆರ್​. ಅಶೋಕ್ ಆರೋಪ
ಆರ್​. ಅಶೋಕ್ ಆರೋಪ
author img

By ETV Bharat Karnataka Team

Published : Apr 13, 2024, 2:35 PM IST

Updated : Apr 13, 2024, 3:25 PM IST

ಬೆಂಗಳೂರು: ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಭಯೋತ್ಪಾದನೆ ಚಟುವಟಿಕೆ ಹತ್ತಿಕ್ಕುವಲ್ಲಿ ಮಹತ್ವದ ಸಾಧನೆ ಮಾಡಿದೆ. ಬಾಂಬ್​ ಇಟ್ಟವರ ಬಂಧನದಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು (ಶನಿವಾರ) ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಮೇಶ್ವರ ಕೆಫೆ ಸ್ಫೋಟ ಪ್ರಕರಣವನ್ನು ತಿರುಚುವ ಯತ್ನ ನಡೆಯಿತು ಎಂದು ಆರೋಪಿಸಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತನಿಖೆಗೂ ಮೊದಲೇ ದಾರಿ ತಪ್ಪಿಸುವ ಕೆಲಸ ಮಾಡಿದರು. ಅಲ್ಪಸಂಖ್ಯಾತರಿಗೆ ನೋವಾಗಬಾರದು ಎಂಬುದು ಕಾಂಗ್ರೆಸ್​ನ ಮನಸ್ಥಿತಿ ಎಂದು ಟೀಕಿಸಿದರು.

ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್​ನ ಆಪ್ತರು. ಅವರ ರಾಜ್ಯದಲ್ಲೇ ಆರೋಪಿಗಳು ಸಿಕ್ಕಿದ್ದಾರೆ. ಇಲ್ಲಿ 'ಬ್ರದರ್ಸ್' ಆಯ್ತು, ಈಗ 'ಸಿಸ್ಟರ್' ಊರಲ್ಲಿ ಉಗ್ರರನ್ನು ಬಂಧಿಸಲಾಗಿದೆ. ಸೇಫ್​ ಎಂಬ ಕಾರಣಕ್ಕಾಗಿ ಬೇರೆ ರಾಜ್ಯಗಳ ಬದಲಿಗೆ ಬಂಗಾಳವನ್ನೇ ಉಗ್ರರು ಆಯ್ಕೆ ಮಾಡಿಕೊಂಡಿದ್ದಾರೆ. ಎನ್ಐಎ ದಾಳಿಗೆ ಅಲ್ಲಿನ ಪೊಲೀಸರು ಸಹಕಾರ ನೀಡಿದ್ದಾರೆ ಅಷ್ಟೆ. ಕಾಮನ್​ಸೆನ್ಸ್​ ಇಲ್ಲದೆ ಯಾವುದೇ ಮಂತ್ರಿಗಳು ಮಾತನಾಡಬಾರದು ಎಂದು ಟಾಂಗ್​ ನೀಡಿದರು.

ಪಾಕಿಸ್ತಾನ ಪರ ಘೋಷಣೆ: ವಿಧಾನಸೌಧದಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದನ್ನು ಕಾಂಗ್ರೆಸ್​ ನಾಯಕರು ನಿರಾಕರಿಸಿದರು. ಪೊಲೀಸರ ಎಫ್​ಎಸ್​ಎಲ್​ ವರದಿ ಬಳಿಕ ಅದು ನಿಜವಾಯಿತು. ನಮ್ಮನ್ನೇ ಕಾಮಾಲೆ ಕಣ್ಣಿನವರು ಎಂದು ಟೀಕಿಸಿದರು. ಈಗ ಯಾರಿಗೆ ಕಾಮಾಲೆಯಾಗಿದೆ ಎಂಬುದುನ್ನು ಹೇಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರ್​ ಅಶೋಕ್​ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಎಂದು ಜರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಚುನಾವಣಾ ಸಂದರ್ಭದಲ್ಲಿ ವ್ಯೆಯಕ್ತಿಕ ನಿಂದನೆ ಅಪರಾಧ. ಅದರಲ್ಲೂ ಹಿಟ್ಲರ್ ಹೆಸರೇಳಿ ಬಿಂಬಿಸುವುದು ದೊಡ್ಡ ಅಪರಾಧ. ಮೋದಿ ಅವರನ್ನು ಹಿಟ್ಲರ್ ಅನ್ನುವುದಕ್ಕೆ ಏನು ನೈತಿಕತೆ ಇದೆ. ಈ ದೇಶಕ್ಕೆ ರಿಯಲ್ ಹಿಟ್ಲರ್ ಅಂದರೆ ಅದು ಕಾಂಗ್ರೆಸ್. ನಾವು ಇವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದು ಅಶೋಕ್​ ಹೇಳಿದರು.

ಬಿಜೆಪಿಯವರು ಮಾನಗೆಟ್ಟವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಸಿಎಂ ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆ ಇದ್ದಿದ್ದರೆ, ಈ ಹಿಂದೆ ಯಾಕೆ ಜೆಡಿಎಸ್​ನವರ ಜೊತೆ ಹೊಂದಾಣಿಕೆ ಮಾಡಿಕೊಂಡರು. ದೇವೇಗೌಡರ ಮನೆಗೆ ಹೋಗಿ ನಿಂತಿದ್ದು ಯಾರು ಎಂದು ಪ್ರಶ್ನಿಸಿದರು.

ಕಟುಕರು ಮನೆಗೆ ಹೋಗ್ತಾರೆ: ಹೃದಯವಂತರು ಬಂದಾಗ ಹೃದಯಹೀನರು ಕಾಣೆಯಾಗ್ತಾರೆ. ಈ ಚುನಾವಣೆಯಲ್ಲಿ ಕಟುಕರು ಮನೆಗೆ ಹೋಗುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬಾಂಬ್ ಸ್ಫೋಟ ಪ್ರಕರಣ: ಬಂಧಿತರನ್ನ 10 ದಿನಗಳ ಕಾಲ ಎನ್​​ಐಎ ವಶಕ್ಕೆ ನೀಡಿದ ಕೋರ್ಟ್​ - Rameshwaram Cafe Blast

Last Updated : Apr 13, 2024, 3:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.