ಬಾಗಲಕೋಟೆ : ತಾಲೂಕಿನ ಶೀಗಿಕೇರಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಸತತ ಮಳೆಯಿಂದಾಗಿ ಈರುಳ್ಳಿ ಸೇರಿದಂತೆ ಪ್ರಮುಖ ಬೆಳೆಗಳು ಜಲಾವೃತಗೊಂಡಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾನೆ.
ಈ ಬಗ್ಗೆ ರೈತ ಹುಚ್ಚಪ್ಪ ಮಾತನಾಡಿ, ಲಕ್ಷಾಂತರ ರೂಪಾಯಿಗಳ ವೆಚ್ಚ ಮಾಡಿ, ಬೀಜ, ಗೊಬ್ಬರ ಸೇರಿದಂತೆ ಕೂಲಿ ಕಾರ್ಮಿಕರಿಗೆ ನೀಡಲಾಗಿದೆ. ಈ ಬಾರಿ ಈರುಳ್ಳಿ ಬೆಳೆಗೆ ಉತ್ತಮ ದರ ಬಂದಿತ್ತು. ಹೀಗಾಗಿ ರೈತರು ಅಧಿಕ ಲಾಭದ ಆಸೆಯಲ್ಲಿದ್ದರು. ಆದರೆ, ಅಧಿಕ ಮಳೆಯಿಂದಾಗಿ ರೈತರು ಕಣ್ಣೀರು ಬರಿಸುವಂತಾಗಿದೆ ಎಂದಿದ್ದಾರೆ.
ಈ ಬಗ್ಗೆ ರೈತ ಮಹಿಳೆ ಪದ್ಮಮ್ಮ ಮಾತನಾಡಿ, 'ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 600 ಹೆಕ್ಟೇರ್ಗೂ ಅಧಿಕ ಪ್ರದೇಶದ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ, ಜೋಳ, ಕಬ್ಬು ಹಾಗೂ ಈರುಳ್ಳಿ ಸೇರಿದಂತೆ ಇತರ ಪ್ರಮುಖ ಬೆಳೆ ಹಾಳಾಗಿದೆ. ಜಮೀನಿನಲ್ಲಿ ಬೆಳೆದ ಈರುಳ್ಳಿ ಮಳೆಯಿಂದಾಗಿ ಕೊಚ್ಚಿ ಹೋಗಿದೆ. ಕೊಚ್ಚಿ ಹೋಗಿರುವ ಈರುಳ್ಳಿಯನ್ನ ರೈತ ಕುಟುಂಬದವರು ಸಂಗ್ರಹಿಸಿದ್ದು, ಮರಳಿ ಒಣಗಿಸಿ ಮಾರಾಟಕ್ಕೆ ಅನುಕೂಲವಾಗುವಂತೆ ಮಾಡುತ್ತಿದ್ದಾರೆ. ಆದರೆ, ಮತ್ತೆ ಮಳೆಯಾದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಸರ್ಕಾರ ಪರಿಹಾರ ಧನ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಧಾರವಾಡ: ಮಳೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ಬೆಳೆ ಹಾನಿ