ETV Bharat / state

ವಿಜಯಪುರ: ಶತಮಾನದ ಸರ್ಕಾರಿ ಶಾಲೆಗೆ ಕೊನೆಗೂ ಮರುಜೀವ - Vijayapura Govt School - VIJAYAPURA GOVT SCHOOL

ವಿಜಯಪುರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿಯ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾದ ಬಳಿಕ ಅಧಿಕಾರಿಗಳು ಶಾಲಾ ಕಟ್ಟಡದ ಪುನರುಜ್ಜೀವನಕ್ಕೆ ಮುಂದಾಗಿದ್ದಾರೆ.

ಎಚ್ಚೆತ್ತ ಅಧಿಕಾರಿಗಳಿಂದ ಸರ್ಕಾರಿ ಶಾಲೆಗೆ ಭೇಟಿ
ಶಾಲೆಗೆ ಅಧಿಕಾರಿಗಳ ಭೇಟಿ (ETV Bharat)
author img

By ETV Bharat Karnataka Team

Published : Jun 21, 2024, 7:23 PM IST

ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಹೇಳಿಕೆ (ETV Bharat)

ವಿಜಯಪುರ: ಜಿಲ್ಲೆಯಲ್ಲಿರುವ ಶತಮಾನದ ಸರ್ಕಾರಿ ಶಾಲೆಯೊಂದು ಶಿಥಿಲಾವಸ್ಥೆ ತಲುಪಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಇತ್ತೀಚೆಗಷ್ಟೇ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆ ನಡೆಸಿದ್ದರು. ಇದರ ಮಧ್ಯೆ ಅಧಿಕಾರಿಗಳು ಶಾಲೆಗೆ ದೌಡಾಯಿಸಿ ವೀಕ್ಷಣೆ ಮಾಡಿದ್ಧಾರೆ.

ವಿಜಯಪುರ ನಗರದ ಹೃದಯಭಾಗದಲ್ಲಿರುವ 'ನಮ್ಮ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ' ಬ್ರಿಟಿಷರ ಕಾಲದಲ್ಲಿ ಬಾಲಮಂದಿರವಾಗಿತ್ತು. ಬಾಲಾಪರಾಧಿಗಳಿಗೆ ಶಿಕ್ಷಣ ನೀಡುವುದಕ್ಕೆ ಈ ಕಟ್ಟಡವನ್ನು ಉಪಯೋಗಿಸಲಾಗುತ್ತಿತ್ತು. 1918ರಲ್ಲಿ ಶಾಲೆ ಆರಂಭವಾಗಿ ನಂತರದ ದಿನಗಳಲ್ಲಿ ಸರ್ಕಾರಿ ಶಾಲೆಯಾಗಿ ಮುಂದುವರೆದಿದೆ.

ಆದರೆ ಇದೀಗ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಈ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಒಂದರಿಂದ ಏಳನೇ ತರಗತಿವರೆಗೆ 225ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಂದೆರಡು ಕೊಠಡಿ ಮಾತ್ರ ಚೆನ್ನಾಗಿದೆ. ಇನ್ನುಳಿದ ಕೊಠಡಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರಿಸಲಾಗಿತ್ತು. ಜೂನ್‌ 15ರಂದು ನಡೆದ ಕೆಡಿಪಿ ಸಭೆಯಲ್ಲಿ ಡಿಡಿಪಿಐ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್​ ತರಾಟೆಗೆ ತೆಗೆದುಕೊಂಡಿದ್ದರು. ಸಿಇಒ ಅವರಿಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದರು.

ಇದಾದ ನಂತರ ಶಾಲೆಗೆ ಭೇಟಿ ನೀಡಿದ ಸಿಇಒ ರಿಷಿ ಆನಂದ, ಕೊಠಡಿಗಳ ಪರಿಶೀಲನೆ ನಡೆಸಿದ್ದು 15 ದಿನದಲ್ಲಿ‌ ಎಲ್ಲ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

"ಈ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳಿವೆ. ತರಗತಿಗಳನ್ನು ಅಲ್ಲಿಗೆ ಶಿಫ್ಟ್‌​ ಮಾಡಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ನನಗೆ ಕನಿಷ್ಠ 15 ದಿನಗಳಾದರೂ ಶಾಲೆಯ ವಾತಾವರಣ ಬದಲಾಯಿಸಲು ಸಮಯ ಬೇಕು. ಸ್ವಚ್ಛತೆಗೆ ಈಗಾಗಲೇ ಸೂಚಿಸಲಾಗಿದೆ. ಕೇವಲ ಸ್ವಚ್ಛತೆಯಲ್ಲ, ನಿರ್ವಹಣೆ ಮಾಡಬೇಕು. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚಿಸಲಾಗಿದೆ. ಯಾವ ಶಾಲೆಗಳಿಗೆ ಶೌಚಾಲಯ, ಕೊಠಡಿಗಳ ಅವಶ್ಯಕತೆ ಇದೆ ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ಪ್ರತಿ ಶಾಲೆಯಲ್ಲೂ ತಿಂಗಳ ಮೊದಲ ಶನಿವಾರವನ್ನು ಸ್ವಚ್ಛ ಶನಿವಾರವೆಂದು ಘೋಷಿಸಲು ತಿಳಿಸಲಾಗಿದೆ. ಆ ದಿನ ಇಡೀ ಶಾಲೆಯನ್ನು ಸ್ವಚ್ಛ ಮಾಡಬೇಕು. ಅದೇ ರೀತಿ ಆರೋಗ್ಯವೂ ಮುಖ್ಯ. ಡಿಹೆಚ್ಒ ಅವರಿಗೂ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡುವಂತೆ ತಿಳಿಸಲಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ತಮಿಳುನಾಡು ಕಳ್ಳಭಟ್ಟಿ ದುರಂತ: ಗಡಿಜಿಲ್ಲೆಯಲ್ಲಿ ಹಳೇ ಅಡ್ಡೆಗಳ ಮೇಲೆ ದಿಢೀರ್ ದಾಳಿ - Excise Police Sudden Raid

ETV Bharat Logo

Copyright © 2025 Ushodaya Enterprises Pvt. Ltd., All Rights Reserved.