ETV Bharat / state

ಸಿದ್ದರಾಮಯ್ಯಗೆ ಹೈಕಮಾಂಡ್ ಬೆಂಬಲವಿದೆ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಮಹದೇವಪ್ಪ - Leadership Changes

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸಚಿವ ಹೆಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.

mahadevappa
ಸಚಿವ ಹೆಚ್.ಸಿ. ಮಹದೇವಪ್ಪ (ETV Bharat)
author img

By ETV Bharat Karnataka Team

Published : Aug 25, 2024, 4:58 PM IST

ಬೆಂಗಳೂರು: ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಇಡೀ ಮಂತ್ರಿಮಂಡಲ, ಶಾಸಕರು, ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಇದ್ದಾರೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ಗೆ ನಮ್ಮ ಸಿಎಂ, ಕೆಪಿಸಿಸಿ ಅಧ್ಯಕರು ಪ್ರತ್ಯೇಕವಾಗಿ ಭೇಟಿಯಾಗಿ ಎಲ್ಲ ವಿಚಾರಗಳನ್ನೂ ವಿವರಿಸಿದ್ದಾರೆ. ರಾಜಭವನ ದುರ್ಬಳಕೆ ಮಾಡಿಕೊಳ್ಳುವ ಜೆಡಿಎಸ್, ಬಿಜೆಪಿ ಹುನ್ನಾರವು ಹೈಕಮಾಂಡ್‌ಗೆ ಅರ್ಥವಾಗಿದೆ. ಯಾವುದೇ ಹೋರಾಟ ಮಾಡಲು ಹಿಂಜರಿಯಬಾರದು. ಹೀಗಿರುವಾಗ ನಾಯಕತ್ವ ಬದಲಾವಣೆ ಪ್ರಶ್ನೆ ಎಲ್ಲಿಂದ ಬಂತು. ಜೆಡಿಎಸ್- ಬಿಜೆಪಿ ಷಡ್ಯಂತ್ರ ಭಗ್ನಗೊಳಿಸಲು ನಾವು ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ತಿಳಿಸಿದರು.

ಸಿಎಂ ಆರೋಗ್ಯಕರವಾಗಿದ್ದಾರೆ, ನಿತ್ಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಆಯಾಸ ಆಗುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲೇ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್​ ಸಿಂಗ್​ ಸುರ್ಜೆವಾಲ ಸಮ್ಮುಖದಲ್ಲಿಯೇ ನಾಯಕತ್ವದ ಬದಲಾವಣೆ ಇಲ್ಲ ಎಂದಾಗ, ಇದಕ್ಕೆಲ್ಲ ಅಂತ್ಯ ಇಲ್ವಾ?. ಸಿದ್ದರಾಮಯ್ಯ ಹಾಗೂ ನನ್ನ ಐಡಿಯಾಲಜಿ ಒಂದೇ. ನಾನು ಸಿದ್ದರಾಮಯ್ಯ ಅವರ ಪರವಾಗಿ ಇವತ್ತು, ನಿನ್ನೆಯಿಂದ ಅಲ್ಲ ಬಹಳ ವರ್ಷಗಳಿಂದಲೂ ಇದ್ದೇನೆ ಎಂದರು.

ರಾಜ್ಯಪಾಲರು 11 ವಿಧೇಯಕ ವಾಪಸ್ ಮಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ, ಹಲವು ಮಹತ್ವದ ಬಿಲ್​ಗಳು ವಾಪಸ್ ಬಂದಿವೆ. ಇಷ್ಟು ಬಿಲ್​ಗಳು ವಾಪಸ್ ಬಂದರೆ ಹೇಗೆ?. ಯಾವ ರಾಜ್ಯಪಾಲರೂ ಕೂಡ ಇಷ್ಟು ಬಿಲ್ ಕಳುಹಿಸಿರಲಿಲ್ಲ ಎಂದು ತಿಳಿಸಿದರು.

ದಲಿತ ಸಿಎಂ ವಿಚಾರವಾಗಿ ಮಾತನಾಡಿ, ಪ್ರತಿಯೊಂದು ಸಮುದಾಯಕ್ಕೆ ಅವಕಾಶ ಸಿಗಬೇಕು. ಆದರೆ ಅದಕ್ಕೆ ಕಾಲ ಬರಬೇಕು. ಈಗ ಸಿಎಂ ಇದ್ದಾರೆ, ಇನ್ನೊಬ್ಬ ಸಿಎಂ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಿಂದಾಲ್​ಗೆ ಭೂಮಿ ‌ಮಾರಾಟದಲ್ಲಿ ಕಿಕ್​ಬ್ಯಾಕ್ ಪಡೆದ ಆರೋಪ ವಿಚಾರವಾಗಿ ಮಾತನಾಡಿ, ಬಿಜೆಪಿಯ ನಿರಾಧಾರ ಆರೋಪ ಇದು. ಉದ್ಯೋಗ ಸೃಷ್ಟಿ ‌ಮಾಡಬೇಕಿದೆ. ನಾವು ಭೂಮಿ ‌ಕೊಡದೆ ಹೊದರೆ, ಬೇರೆ ರಾಜ್ಯದವರು ಕೊಡುತ್ತಾರೆ. ಅದಕ್ಕಾಗಿ ಕ್ಯಾಬಿನೆಟ್​ನಲ್ಲಿ ಒಮ್ಮತದ ನಿರ್ಧಾರ ಮಾಡಿದ್ದೇವೆ ಎಂದರು.

ಆಪರೇಷನ್ ಕಮಲಕ್ಕಾಗಿ, ಕಾಂಗ್ರೆಸ್ ಶಾಸಕರಿಗೆ ಆಮಿಷ ವಿಚಾರವಾಗಿ ಮಾತನಾಡಿ, ಇದೇನು ಹೊಸ ವಿಚಾರ ಅಲ್ಲ. ಬಿಜೆಪಿಗೆ ಯಾವತ್ತೂ ಜನರು ಮ್ಯಾಂಡೇಟ್ ಕೊಟ್ಟಿಲ್ಲ. ಸರ್ಕಾರವನ್ನು ಅತಂತ್ರಗೊಳಿಸಲು ಹೊರಟಿದ್ದಾರೆ. ಹಿಂದೆ ‌ಬೊಮ್ಮಾಯಿ‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಬಿಜೆಪಿ ಆಪರೇಷನ್ ಮಾಡಿ ಸರ್ಕಾರ ಮಾಡಿತ್ತು. ಆದರೆ, ಬಿಜೆಪಿ ಸರ್ಕಾರ ಸಕ್ಸಸ್ ಆಗಲಿಲ್ಲ. ಸರ್ಕಾರ ಹಗರಣದಲ್ಲಿ ಸಿಲುಕಿತು ಎಂದು ದೂರಿದರು.

ಇದನ್ನೂ ಓದಿ: ಬೆಳಗಾವಿಗೆ ನಾಳೆ ಸಿಎಂ ಸಿದ್ದರಾಮಯ್ಯ: ಜಾರಕಿಹೊಳಿ ಬ್ರದರ್ಸ್ ಭದ್ರಕೋಟೆಯಲ್ಲಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ - CM siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.