ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣದಿಂದ ಸರ್ಕಾರಕ್ಕೆ ತಲೆ ತಗ್ಗಿಸುವಂತಹ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣದ ಸಂಬಂಧ ಬಿ.ನಾಗೇಂದ್ರ ಮೇಲೆ ಇ.ಡಿ.ದಾಳಿಯಿಂದ ಸರ್ಕಾರಕ್ಕೆ ಮುಜುಗರ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಪ್ರಕರಣದಿಂದ ಸರ್ಕಾರಕ್ಕೆ ತಲೆ ತಗ್ಗಿಸುವಂತಹ ಪ್ರಶ್ನೆಯೇ ಬರೋದಿಲ್ಲ. ಅಧಿಕಾರಿಗಳು ಮಾತಾಡಿಕೊಂಡಿರೋದು ಬೆಳಕಿಗೆ ಬಂದಿದೆ. ನಾಗೇಂದ್ರ ವಿಚಾರದಲ್ಲಿ ಇ.ಡಿ ದಾಳಿ ಮಾಡಿದ್ದಾರೆ. ಅದನ್ನ ಕಾನೂನಾತ್ಮಕವಾಗಿ, ನಿಷ್ಪಕ್ಷಪಾತವಾಗಿ ತನಿಖೆ ಮಾಡಲಿ ಎಂದರು.
ಆದರೆ, ರಾಜಕೀಯ ಒತ್ತಡಗಳನ್ನ ಇಟ್ಟುಕೊಂಡು ದಾಳಿ ಮಾಡುವ ಅವಶ್ಯಕತೆ ಇಲ್ಲ. ಸತ್ಯಾಸತ್ಯತೆ ಹೊರಗೆ ಬರಲಿದೆ. ನಾಗೇಂದ್ರ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದು ಸಾಬೀತಾಗಬೇಕಲ್ಲವಾ?. ಅಧಿಕಾರಿಗಳ ಪಾತ್ರ ಇದೆಯಾ ಅನ್ನೋದು ಗೊತ್ತಾಗಬೇಕಲ್ಲವಾ?. ಈ ಹಿಂದೆಯೇ ಇ.ಡಿ. ದಾಳಿ ರಾಜಕೀಯ ಪ್ರೇರಿತ ಎಂಬುದು ಸಾಬೀತಾಗಿದೆ. ಎಲೆಕ್ಟ್ರೋಲ್ ಬಾಂಡ್ನಲ್ಲಿ ಅದು ಸಾಬೀತಾಗಿಲ್ಲವಾ?. ಸಿಬಿಐ, ಇಡಿ ದಾಳಿಯಾದವರು ಎಲೆಕ್ಟ್ರೋಲ್ ಬಾಂಡ್ ಖರೀದಿ ಮಾಡುತ್ತಾರೆ. ಇದನ್ನ ನಾನು ಹೇಳಬೇಕಿಲ್ಲ. ಈಗಾಗಲೇ ಅದೆಲ್ಲ ಜಗಜ್ಜಾಹೀರಾಗಿದೆ. ಮೂಡಾ ಪ್ರಕರಣ ಸಂಬಂಧ ಸಿಎಂ ಉತ್ತರ ಕೊಟ್ಟಿದ್ದಾರೆ. ಬಿ.ನಾಗೇಂದ್ರ ಅವರೂ ಕೂಡ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಬಜೆಟ್ ಯೋಜನೆಗಳಿಗೆ ಹಣದ ಕೊರತೆ ಇಲ್ಲ, ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ ಪುನರುಚ್ಚಾರ - CM Siddaramaiah