ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಬಜೆಟ್ನಲ್ಲಿ ಕೈಗಾರಿಕಾ ವಲಯಕ್ಕೆ ಸೂಕ್ತ ಅನುದಾನ ಒದಗಿಸಿಲ್ಲ ಎಂದು ಬಿಜೆಪಿ ಸದಸ್ಯ ರುದ್ರೇಗೌಡ ಅಸಮಾಧಾನ ವ್ಯಕ್ತಪಡಿಸಿ ದಿಡೀರ್ ಸದನದ ಬಾವಿಗಿಳಿದು ಕೆಲಕ್ಷಣ ಧರಣಿ ನಡೆಸಿದರು.
ಬಜೆಟ್ ಚರ್ಚೆ ವೇಳೆ ಮಾತನಾಡಿದ ರುದ್ರೇಗೌಡ ಅವರು, "ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೈಗಾರಿಕಾ ಕ್ಷೇತ್ರಕ್ಕೆ ಸೂಕ್ತ ಅನುದಾನ ಒದಗಿಸಿಲ್ಲ. ಕೈಗಾರಿಕಾ ವಲಯದಿಂದ ಪ್ರಾತಿನಿಧಿಕ ವ್ಯಕ್ತಿಯಾಗಿ ಇಲ್ಲಿಗೆ ಬಂದಿದ್ದೇನೆ. ಆದರೆ ಇದುವರೆಗೂ ಕೈಗಾರಿಕಾ ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ" ಎಂದು ಆರೋಪಿಸಿದರು.
"ಏಕಾಏಕಿ ಹೀಗೇಕೆ ಬಾವಿಗಿಳಿದಿದ್ದೀರಿ" ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದರು. "ಕೈಗಾರಿಕೆ ವಲಯಕ್ಕೆ ಬಜೆಟ್ನಲ್ಲಿ ಸೂಕ್ತ ಅನುದಾನ ಒದಗಿಸಿಲ್ಲ. ಹೀಗಾಗಿ ಧರಣಿ ನಡೆಸುತ್ತಿದ್ದೇನೆ" ಎಂದರು. "ಸರ್ಕಾರ ವತಿಯಿಂದ ಉತ್ತರ ಬರದಿದ್ದರೆ ರುದ್ರೇಗೌಡ ಅವರ ಧರಣಿ ಬೆಂಬಲಿಸುತ್ತೇನೆ" ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು. ಈ ಸಂಬಂಧ ಸರ್ಕಾರದಿಂದ ಉತ್ತರ ಒದಗಿಸುವುದಾಗಿ ಸಭಾಪತಿಯವರು ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆದರು.
ಇದನ್ನೂ ಓದಿ: ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆಗೆ ವಿರೋಧ, ಪರಿಶೀಲನಾ ಸಮಿತಿಗೆ ಒಪ್ಪಿಸಲು ನಿರ್ಣಯ