ಶಿರಸಿ(ಉತ್ತರ ಕನ್ನಡ): ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕದ ಶಂಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಬನವಾಸಿ ಮೂಲದ ವ್ಯಕ್ತಿಯನ್ನು ಎನ್ಐಎ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಐವರು ಅಧಿಕಾರಿಗಳಿರುವ ಎನ್ಐಎ ತಂಡ ಶಿರಸಿ ತಾಲೂಕಿನ ದಾಸನಕೊಪ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದಿದೆ.
ವಶಕ್ಕೆ ಪಡೆದಿರುವ ವ್ಯಕ್ತಿ ದುಬೈನಲ್ಲಿ ಕೆಲಸ ಮಾಡುತಿದ್ದ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಬಕ್ರೀದ್ ಆಚರಣೆಗಾಗಿ ಬನವಾಸಿಯ ದಾಸನಕೊಪ್ಪದ ನಿವಾಸಕ್ಕೆ ಆಗಮಿಸಿದ್ದ. ಈತನ ಮೇಲೆ ಆನ್ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ಪೋರ್ಟ್ನಲ್ಲಿ ನಕಲಿ ದಾಖಲೆ ನೀಡಿದ ಆರೋಪವಿದೆ. ಬನವಾಸಿ ಪೊಲೀಸರ ಸಹಕಾರ ಪಡೆದು ಎನ್ಐಎ ದಾಳಿ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಇನ್ನು, 2017 ರಲ್ಲಿಯೂ ಈತನನ್ನು ಎನ್ಐಎ ತಂಡ ವಿಚಾರಣೆ ನಡೆಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಐಸಿಸ್ ಮಾಡ್ಯೂಲ್: 7 ಮಂದಿ ಶಂಕಿತ ಉಗ್ರರ ವಿರುದ್ಧ ಎನ್ಐಎ ಚಾರ್ಜ್‌ಶೀಟ್ - Ballari ISIS Module Case