ಹುಬ್ಬಳ್ಳಿ : ಅಂಜಲಿ ಕೊಲೆ ಪ್ರಕರಣ ಇಡೀ ವಾಣಿಜ್ಯ ನಗರಿ ಜನರ ಮನಕಲಕುವಂತೆ ಮಾಡಿದೆ. ಅಂಜಲಿ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅದರಲ್ಲೂ ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ತನ್ನ ಮಗಳನ್ನು ಕಳೆದುಕೊಂಡ ದುಃಖದಲ್ಲಿಯೂ ಅಂಜಲಿ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಸಹಾಯಧನ ನೀಡುವ ಮೂಲಕ ನಾನು ಕೊನೆವರೆಗೂ ನಿಮ್ಮ ಜೊತೆ ಇರುತ್ತೇನೆ ಎಂದು ಅಂಜಲಿ ಅಜ್ಜಿಗೆ ಧೈರ್ಯ ತುಂಬಿದ್ದಾರೆ.
ಅಂಜಲಿ ಕುಟುಂಬಕ್ಕೆ ಬಿಜೆಪಿ ಯುವ ಮುಖಂಡ ಅನೂಪ ನಿಜವಾಡ 50 ಸಾವಿರ ರೂ. ಚೆಕ್ ನೀಡುವ ಮೂಲಕ ಧೈರ್ಯ ತುಂಬಿದ್ದಾರೆ. ಅಂಜಲಿ ಅವರ ಅಜ್ಜಿ ಇಳಿ ವಯಸ್ಸಿನಲ್ಲಿ ತನ್ನ ಮೊಮ್ಮಕ್ಕಳನ್ನು ಬೇರೆ ಮನೆಯವರ ಕಸ ಮುಸುರಿ ತೊಳೆದು ಸಾಕಿ ಸಲುಹುತ್ತಿದ್ದರು. ಇದೀಗ ಅವರ ಕುಟುಂಬಕ್ಕೆ ವಾಣಿಜ್ಯ ನಗರಿ ಜನರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ಅಂಜಲಿ ಹತ್ಯೆಗೆ ಖಂಡನೆ: ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ನಲ್ಲಿ ಪ್ರತಿಭಟನೆ - Protest In Hubballi