ETV Bharat / state

ಡಾಂಬರ್ ಗುಂಡಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕುರಿಗಾಹಿಯ ರಕ್ಷಣೆ ಮಾಡಿದ ಎನ್​ಸಿಸಿ ತಂಡ - NCC team rescued a shepherd - NCC TEAM RESCUED A SHEPHERD

ತುಮಕೂರು ತಾಲೂಕಿನ ಹಿರೇಹಳ್ಳಿ ಬಳಿಯ ಮಂದಾರಗಿರಿ ಬೆಟ್ಟದ ಪಕ್ಕದಲ್ಲಿ ಡಾಂಬರ್ ಗುಂಡಿಗೆ ಬಿದ್ದಿದ್ದ ಕುರಿಗಾಯಿಯನ್ನು ಎನ್​ಸಿಸಿ ಕೆಡೆಟ್​ ರಕ್ಷಿಸಿದ್ದಾರೆ.

ncc-team-rescued-a-shepherd
ಕುರಿಗಾಹಿಯ ರಕ್ಷಣೆ ಮಾಡಿದ ಎನ್​ಸಿಸಿ ತಂಡ (ETV Bharat)
author img

By ETV Bharat Karnataka Team

Published : Jul 25, 2024, 10:57 PM IST

ಕುರಿಗಾಹಿಯ ರಕ್ಷಣೆ ಮಾಡಿದ ಎನ್​ಸಿಸಿ ತಂಡ (ETV Bharat)

ತುಮಕೂರು : ಮೈತುಂಬ ಡಾಂಬರ್ ಮೆತ್ತಿಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವ್ಯಕ್ತಿಯ ಜೀವವನ್ನು ಎನ್​ಸಿಸಿ ತಂಡದವರು ಉಳಿಸಿರುವ ಘಟನೆ ತುಮಕೂರು ತಾಲೂಕಿನ ಹಿರೇಹಳ್ಳಿ ಬಳಿಯ ಮಂದಾರಗಿರಿ ಬೆಟ್ಟದ ಪಕ್ಕದಲ್ಲಿ ನಡೆದಿದೆ.

ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಬಿದ್ದಿದ್ದ ಕುರಿಗಳನ್ನು ರಕ್ಷಿಸಲು ಹೋಗಿ, ಅದರೊಳಗೆ ಬಿದ್ದಿದ್ದ ವ್ಯಕ್ತಿಯನ್ನು ಎನ್​ಸಿಸಿ ಬೆಟಾಲಿಯನ್ ಕ್ಯಾಂಪ್ ಟೀಂನ ಸದಸ್ಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂದಾರಗಿರಿ ಬೆಟ್ಟದ ಬಳಿ ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಸುಮಾರು ಏಳೆಂಟು ಕುರಿಗಳು ಬಿದ್ದಿದ್ದವು. ಈ ಕುರಿಗಳನ್ನ ರಕ್ಷಿಸುವ ಭರದಲ್ಲಿ ಕುರಿಗಾಯಿ ಆಯತಪ್ಪಿ ಡಾಂಬರ್ ಗುಂಡಿಗೆ ಬಿದ್ದಿದ್ದಾನೆ.

ಸುಮಾರು ಎರಡು ಗಂಟೆಗಳ ಕಾಲ ಡಾಂಬರ್ ಗುಂಡಿಯಲ್ಲೇ ಕುರಿಗಾಯಿ ಬಿದ್ದಿದ್ದಾನೆ. ಅದೇ ಸಮಯಕ್ಕೆ ಎನ್​ಸಿಸಿ ಕ್ಯಾಂಪ್ ಗೆ ತೆರಳಿದ್ದ ಟೀಂ, ಫೈರಿಂಗ್ ತರಬೇತಿ ಪಡೆಯುವ ವೇಳೆ ಆತನನ್ನ ಗಮನಿಸಿದೆ. ಕೂಡಲೇ ಆತನನ್ನ ಗುಂಡಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದೆ.

ತುಮಕೂರಿನ ನಾಲ್ಕನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಟೀಂನಿಂದ ರಕ್ಷಣೆ ಮಾಡಲಾಗಿದ್ದು, ಎನ್​ಸಿಸಿ ಕ್ಯಾಂಪ್ ತರಬೇತಿಯಲ್ಲಿದ್ದ ಬಿ. ಹೆಚ್ ​ಎಂ ತಿಲಕ್ ರಾಜ್, ಕೆಡೆಟ್ ಮಹೇಶ್, ಜುಬೇದ್, ಮನೋಜ್, ದರ್ಶನ್​ರಿಂದ ರಕ್ಷಣೆ ಮಾಡಲಾಗಿದೆ. ಅಲ್ಲದೆ ಐದು ಕುರಿಗಳನ್ನು ಸಹ ರಕ್ಷಿಸಲಾಗಿದೆ.

ಇದನ್ನೂ ಓದಿ : Watch...ಭದ್ರಾ ನದಿ ಮಧ್ಯದಲ್ಲಿ ಸಿಲುಕಿದ್ದ 30ಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ - Cattle Rescue

ETV Bharat Logo

Copyright © 2024 Ushodaya Enterprises Pvt. Ltd., All Rights Reserved.