ETV Bharat / state

ಟ್ರಕ್ ಮೂಲಕ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಗಾಂಜಾ ಜಪ್ತಿ - NCB Seized Ganja - NCB SEIZED GANJA

ಟ್ರಕ್ ಮೂಲಕ ಸಾಗಿಸಲಾಗುತ್ತಿದ್ದ 1,591 ಕೆ.ಜಿ ಗಾಂಜಾವನ್ನು ಎನ್​ಸಿಬಿ ಅಧಿಕಾರಿಗಳು ಬೀದರ್​ನಲ್ಲಿ ವಶಪಡಿಸಿಕೊಂಡಿದ್ದಾರೆ.

ಟ್ರಕ್ ಮೂಲಕ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಗಾಂಜಾ ಜಪ್ತಿ
ಟ್ರಕ್ ಮೂಲಕ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಗಾಂಜಾ ಜಪ್ತಿ (Etv Bharat)
author img

By ETV Bharat Karnataka Team

Published : May 13, 2024, 8:08 PM IST

ಬೆಂಗಳೂರು: ಟ್ರಕ್‌ ಮೂಲಕ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಮಾದಕ ಪದಾರ್ಥವನ್ನ ಬೆಂಗಳೂರು ವಲಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 774 ಪೊಟ್ಟಣಗಳಲ್ಲಿ ತುಂಬಿದ್ದ 1591 ಕೆ.ಜಿ ತೂಕದ ಗಾಂಜಾವನ್ನ ಬೀದರ್ ಜಿಲ್ಲೆಯ ಔರಾದ್‌ನ ವನ್ಮಾರಪಲ್ಲಿ ಚೆಕ್​ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಿದ್ದ NCB ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ಟ್ರಕ್‌ ವಶಕ್ಕೆ ಪಡೆದಿದ್ದಾರೆ.

ಕಳೆದ 2 ತಿಂಗಳ ಅವಧಿಯಲ್ಲಿ ಜಪ್ತಿ ಮಾಡಲಾದ ಮಾದಕ ಪದಾರ್ಥಗಳ ಪೈಕಿ ಎರಡನೇ ಅತಿದೊಡ್ಡ ಕಾರ್ಯಾಚರಣೆ ಎಂದು NCB ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಆಂಧ್ರ - ಒಡಿಶಾ ಗಡಿ ಭಾಗದಲ್ಲಿ 1596.350 ಕೆ.ಜಿ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಗಾಂಜಾ ಮಾರಾಟ ದಂಧೆ: ಮಹಿಳೆ ಬಳಿ 4 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.