ETV Bharat / state

ಶಿವಮೊಗ್ಗ: ನಕ್ಸಲ್ ನಾಯಕ ಬಿ ಜಿ ಕೃಷ್ಣಮೂರ್ತಿ ಕೋರ್ಟ್​ಗೆ ಹಾಜರು - naxal leader

ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ನಕ್ಸಲ್ ನಾಯಕ ಬಿ ಜಿ ಕೃಷ್ಣಮೂರ್ತಿ ಅವರನ್ನು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

naxal-leader-bg-krishnamurthy-appeared-before-shivamogga-district-court
ಶಿವಮೊಗ್ಗ: ನಕ್ಸಲ್ ನಾಯಕ ಬಿ ಜಿ ಕೃಷ್ಣಮೂರ್ತಿ ಕೋರ್ಟ್​ಗೆ ಹಾಜರು
author img

By ETV Bharat Karnataka Team

Published : Jan 31, 2024, 5:28 PM IST

Updated : Jan 31, 2024, 5:41 PM IST

ವಕೀಲ ಶ್ರೀಪಾಲ್

ಶಿವಮೊಗ್ಗ: ನಕ್ಸಲ್ ನಾಯಕ ಬಿ ಜೆ ಕೃಷ್ಣಮೂರ್ತಿ ಅವರನ್ನು ಪೊಲೀಸರು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇಂದು ಬೆಳಗ್ಗೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸರು ನ್ಯಾಯಾಲಯಕ್ಕೆ ಕೃಷ್ಣಮೂರ್ತಿ ಅವರನ್ನು ಹಾಜರು ಪಡಿಸಿದರು. ಇವರ ಮೇಲೆ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಐದು ಪ್ರಕರಣಗಳಿವೆ. ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಎರಡು ಪ್ರಕರಣ ಹಾಗೂ ಶಿವಮೊಗ್ಗ ನ್ಯಾಯಾಲಯದಲ್ಲಿ ಮೂರು ಪ್ರಕರಣಗಳಿವೆ.

ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಕಾಡಿನಲ್ಲಿ ಅಕ್ರಮ ಓಡಾಟ, ಬೆದರಿಕೆ ಪ್ರಕರಣಗಳಿವೆ. ಶಿವಮೊಗ್ಗ ನ್ಯಾಯಾಲಯದಲ್ಲಿ ಆಗುಂಬೆ ಅರಣ್ಯ ಚೆಕ್ ಪೋಸ್ಟ್​ ಸುಟ್ಟು ಹಾಕಿದ ಪ್ರಕರಣ, ಎರಡನೇಯದು ಬಿದರಗೋಡಿನ ಅರುಣ್ ಮನೆ ದರೋಡೆ ಪ್ರಕರಣ ಹಾಗೂ ಹೊಸಗದ್ದೆ ಬಳಿ ಕೆಎಸ್​ಆರ್​ಟಿಸಿ ಬಸ್ ಸುಟ್ಟ ಪ್ರಕರಣಗಳು ಇವರ ಮೇಲಿವೆ. ಇಂದು ಚೆಕ್​ ಪೋಸ್ಟ್ ಸುಟ್ಟ ಪ್ರಕರಣ ಹಾಗೂ ದರೋಡೆ ಪ್ರಕರಣ ಸಂಬಂಧ ಅವರನ್ನು ನ್ಯಾಯಾಧೀಶ ಮಂಜುನಾಥ್ ರವರ ಮುಂದೆ ಹಾಜರು ಪಡಿಸಲಾಗಿಯಿತು.

ಈ ಕುರಿತು ಮಾತನಾಡಿದ ಬಿ ಜೆ ಕೃಷ್ಣಮೂರ್ತಿ ರವರ ಪರ ವಕೀಲ ಶ್ರೀಪಾಲ್, "ನಕ್ಸಲ್‌ ಆರೋಪ ಹೂತ್ತ ಬಿ ಜೆ ಕೃಷ್ಣಮೂರ್ತಿ ಅವರನ್ನು ಇಂದು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳ ಕುರಿತು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. 2007ರಲ್ಲಿ ಒಂದು ಪ್ರಕರಣ ಹಾಗೂ 2009 ರಲ್ಲಿ ಎರಡು ಪ್ರಕರಣಗಳು ನಡೆದಿದ್ದವು. ಈ ಪ್ರಕರಣಗಳಲ್ಲಿ ಈಗಾಗಲೇ ಇತರೆ ಆರೋಪಿಗಳ ವಿಚಾರಣೆ ಮುಗಿದು ಅವರು ಬಿಡುಗಡೆ ಆಗಿದ್ದಾರೆ" ಎಂದರು.

"ಬಿ ಜೆ ಕೃಷ್ಣಮೂರ್ತಿರವರು 2021ರ ನವೆಂಬರ್​ನಲ್ಲಿ ವೈಯನಾಡು ಪೊಲೀಸರಿಂದ ಅರೆಸ್ಟ್ ಆಗುತ್ತಾರೆ. ಇವರನ್ನು ಕೇರಳ ಜೈಲ್​ನಲ್ಲಿ ಇಡಲಾಗಿತ್ತು. ಆಗುಂಬೆ ಪೊಲೀಸ್ ಠಾಣೆಯ ಮೂರು ಪ್ರಕರಣಗಳಲ್ಲಿ ಇಂದು ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ಇಂದು ಎರಡು ಪ್ರಕರಣಗಳಲ್ಲಿ ಜಾರ್ಜ್ ಆಗಿದೆ. ಇನ್ನೂಂದು ಪ್ರಕರಣದಲ್ಲಿ ನಾಳೆ ಮತ್ತೆ ಕೋರ್ಟ್​ಗೆ ಹಾಜರಾಗಬೇಕಿದೆ. ಇದರಿಂದ ಇಂದು ಇವರನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗುತ್ತದೆ. ನಾಳೆ ಕೆಎಸ್​ಆರ್​ಟಿಸಿ ಬಸ್ ಸುಟ್ಟ ಪ್ರಕರಣ ಸಂಬಂಧ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ" ಎಂದು ತಿಳಿಸಿದರು.

ಹಿನ್ನೆಲೆ ಏನು?: ರಾಜ್ಯದಲ್ಲಿ ನಕ್ಸಲ್ ಚಳುವಳಿ ಹುಟ್ಟಿಕೊಂಡಾಗ ಇವರೆಲ್ಲರೂ ನಕ್ಸಲರಾಗಿ ಅರಣ್ಯ ಸೇರಿಕೊಂಡಿದ್ದರು. ಇವರು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉಡುಪಿ ಭಾಗದ ಅರಣ್ಯ ಭಾಗದಲ್ಲಿ ಸಂಚಾರ ನಡೆಸುತ್ತಾ,‌‌ ಸರ್ಕಾರಗಳ‌ ವಿರುದ್ಧ ಜನ ಸಂಘಟನೆಯನ್ನು ಮಾಡುತ್ತಿದ್ದರು. ಸರ್ಕಾರಕ್ಕ ಬೆದರಿಸುವ ಕೆಲಸವನ್ನು ಮಾಡುತ್ತಿದ್ದರು. ಮೂರು ಜಿಲ್ಲೆ ಗಡಿ ಭಾಗಗಳ ಅರಣ್ಯ ಪ್ರದೇಶದ ಅಂಚಿನ ಗ್ರಾಮಗಳಲ್ಲಿ ಕರಪತ್ರ ಹಂಚುವುದು, ಬ್ಯಾನರ್ ಕಟ್ಟುವುದು ಮಾಡುತ್ತಿದ್ದರು. ಸರ್ಕಾರ ಇವರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಂತೆ ಇವರು ಉಗ್ರ ಸ್ವರೂಪದ ಹೋರಾಟಕ್ಕೆ ಮುಂದಾದರು. ಇದರ ಪರಿಣಾಮವಾಗಿ ಆಗುಂಬೆ ಬಳಿಯ ಅರಣ್ಯ ಇಲಾಖೆ ಚೆಕ್ ಪೋಸ್ಟ್​ ಸುಟ್ಟ ಪ್ರಕರಣ ನಡೆದಿತ್ತು.

ಬಿದರಗೋಡಿನಲ್ಲಿ ಮನೆಯೊಂದರಲ್ಲಿ ದರೋಡೆ ನಡೆಸಿದ್ದರು. ಅಲ್ಲದೆ ಹೊಸಗದ್ದೆ ಬಳಿ ಕೆಎಸ್​ಆರ್​ಟಿಸಿ ಬಸ್ ಸುಟ್ಟ ಪ್ರಕರಣಗಳು ನಡೆದ್ದವು. ಈ ಮೂರು ಪ್ರಕರಣ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದವು. ಬಿ ಜಿ ಕೃಷ್ಣಮೂರ್ತಿ ಅವರು ಚಿಕ್ಕಮಗಳೂರು ಜಿಲ್ಲೆ ನೆಮ್ಮಾರು ಬುಕ್ಕಡಿಬೈಲ್ ಗ್ರಾಮದ ಮೂಲದವರಾಗಿದ್ದಾರೆ. ಇವರು ಸಾಂಕೇತ್ ರಾಜನ್ ರನ್ನು ಪೊಲೀಸರು ಶೂಟೌಟ್ ಮಾಡಿದ ಮೇಲೆ ರಾಜ್ಯದ ನಕ್ಸಲ್ ನೇತೃತ್ವವನ್ನು ವಹಿಸಿಕೊಂಡಿದ್ದರು. ನಿನ್ನೆ ರಾತ್ರಿ ಇವರನ್ನು ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಶಿವಮೊಗ್ಗಕ್ಕೆ ಕರೆತರಲಾಗಿತ್ತು.

ಬಿ ಜೆ ಕೃಷ್ಣಮೂರ್ತಿ ರವರ ಮೇಲೆ ರಾಜ್ಯಾದ್ಯಾಂತ 67 ಪ್ರಕರಣಗಳಿವೆ. ಇವರನ್ನು 2021 ರಲ್ಲಿ ಕೇರಳದ ವೈಯನಾಡು ಪೊಲೀಸರು ಬಂಧಿಸಿದ್ದರು. ನಂತರ ಇವರು ಅಲ್ಲಿನ ಜೈಲ್ ನಲ್ಲಿ ಬಂಧಿಯಾಗಿ ಇದ್ದಾರೆ. ಆಗುಂಬೆ ಪೊಲೀಸ್ ಠಾಣೆಯ ಪ್ರಕರಣ ಸಂಬಂಧ ಇವರನ್ನು ಪೊಲೀಸರು ಬಾಡಿ ವಾರೆಂಟ್ ಮೇಲೆ ಕರೆ ತಂದು ನ್ಯಾಯಾಲಯದ ಮುಂದೆ‌ ಹಾಜರು ಪಡಿಸಿದ್ದಾರೆ. ತೀರ್ಥಹಳ್ಳಿ ಡಿವೈಎಸ್​ಪಿ ಗಜಾನನ ರವರ ನೇತೃತ್ವದಲ್ಲಿ ತೀರ್ಥಹಳ್ಳಿ ಪಿಐ ಅಶ್ವಥ್ ಗೌಡ ಹಾಗೂ ಆಗುಂಬೆ ಪಿಎಸ್ಐ ರಂಗನಾಥ್ ಅಂತರಗಟ್ಟೆ ರವರು ನ್ಯಾಯಾಲಯದ ಮುಂದೆ ಬಿ‌ ಜೆ ಕೃಷ್ಣಮೂರ್ತಿ ಅವರನ್ನು ಹಾಜರು ಪಡಿಸಿದರು.

ಇದನ್ನೂ ಓದಿ: ಭದ್ರತಾಪಡೆಗಳು ನಕ್ಸಲರ ನಡುವೆ ಗುಂಡಿನ ಚಕಮಕಿ: ಮೂವರು ಮಾವೋವಾದಿಗಳ ಎನ್​ಕೌಂಟರ್​

Last Updated : Jan 31, 2024, 5:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.