ETV Bharat / state

ಮಾ.1ರಂದು ತೀಸ್ತಾ ಸೆಟಲ್ವಾಡ್ ಮೈಸೂರಿಗೆ; 'ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು' ಗೋಷ್ಠಿಯಲ್ಲಿ ಭಾಗಿ - ಮೈಸೂರು

ಮೈಸೂರಿನಲ್ಲಿ ಮಾರ್ಚ್ 1 ಮತ್ತು 2ರಂದು ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು ಎಂಬ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.

Eಮಾ.1ರಂದು ಸಾಮಾಜಿಕ‌ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮೈಸೂರಿಗೆ ಆಗಮನ
ಮಾ.1ರಂದು ಸಾಮಾಜಿಕ‌ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮೈಸೂರಿಗೆ ಆಗಮನ
author img

By ETV Bharat Karnataka Team

Published : Feb 27, 2024, 7:24 PM IST

ಮೈಸೂರು: ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ.ಮಲ್ಲೇಶ್-90 ನೆನಪಿನಲ್ಲಿ ಮಾರ್ಚ್ 1 ಮತ್ತು 2ರಂದು ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು ಎಂಬ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸರ್ವೋದಯ ಪಕ್ಷದ ಮೈಸೂರು ಘಟಕದ ಅಧ್ಯಕ್ಷ ಉಗ್ರ ನರಸಿಂಹೇಗೌಡ ತಿಳಿಸಿದರು.

ಕಲಾಮಂದಿರದಲ್ಲಿ ಮಾರ್ಚ್ 1ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಉದ್ಘಾಟಿಸಲಿದ್ದಾರೆ. ವಕೀಲ ಪ್ರೊ. ರವಿವರ್ಮ ಕುಮಾರ್ ಭಾಷಣ ಮಾಡಲಿದ್ದಾರೆ. ನಂತರ ನಡೆಯುವ ವಿಚಾರಗೋಷ್ಠಿಯಲ್ಲಿ ನಟ ಪ್ರಕಾಶ್ ರೈ ಹಾಗೂ ಅನ್ಶೂಲ್ ಅವಿಜಿತ್ ಅವರು 'ಜನತಂತ್ರದ ಆಶಯಗಳು', ಹಿರಿಯ ಪತ್ರಕರ್ತ ಪರನ್ ಜೋಯ್ ಗುಹಾ ಥಾಕುರ್ತಾ, ದಿನೇಶ್ ಅಮಿನ್‌ಮಟ್ಟು ಮತ್ತು ಜಗದೀಶ್ ಕೊಪ್ಪ ಅವರು 'ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು', ಶಿಕ್ಷಣ ತಜ್ಞರಾದ ಡಾ. ವಿ.ಪಿ. ನಿರಂಜನಾರಾಧ್ಯ, ಪ್ರೊ. ಘಿ. ಮುಜಾರ್ ಅಸ್ಸಾದಿ ಅವರು 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಯುವಜನತೆಯ ಭವಿಷ್ಯ', ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮತ್ತು ನಟ ಕಿಶೋರ್ ಕುಮಾರ್ ಅವರು 'ಕರಾಳ ಕೃಷಿ ಕಾನೂನುಗಳ ವಿರುದ್ಧದ ಹೋರಾಟ ಮತ್ತು ರೈತ ಚಳವಳಿ' ವಿಚಾರ ಮಂಡಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆಶಯ ನುಡಿ, ಶಾಸಕ ಬಿ.ಆರ್. ಪಾಟೀಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ 6.45ರಿಂದ ಜನಮನ ಸಾಂಸ್ಕೃತಿಕ ಸಂಘಟನೆಯಿಂದ ಅಂತಿಗೊನೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು. ಮಾರ್ಚ್ 2ರಂದು ಬೆಳಗ್ಗೆ 10.30ಕ್ಕೆ ಗೋಷ್ಠಿ ಆರಂಭವಾಗಲಿದ್ದು, ಪ್ರೊ ಘಿ.ರಾಜೇಂದ್ರ ಚೆನ್ನಿ ಅವರು 'ಕೋಮುವಾದದ ಸ್ವರೂಪಗಳು', ಚಿಂತಕ ಶಿವಸುಂದರ್ ಹಾಗೂ ಅರ್ಥಿಕ ತಜ್ಞ ಪ್ರೊ. ಘಿ.ಟಿ.ಆರ್. ಚಂದ್ರಶೇಖರ್ ಅವರು 'ಕಾರ್ಪೋರೇಟ್ ಜಗತ್ತಿನ ಸುಳಿಯಲ್ಲಿ ಭಾರತ', ಕಾರ್ಮಿಕ ಕಾನೂನು ತಜ್ಞ ಬಾಬು ಮ್ಯಾಥ್ಯೂ, ಹೋರಾಟಗಾರ ಸಿದ್ದನಗೌಡ ಪಾಟೀಲ, ಕೆ.ಸೋಮಶೇಖರ್ ಅವರು 'ಭಾರತದಲ್ಲಿ ಕಾರ್ಮಿಕ ಚಳವಳಿಯ ಭವಿಷ್ಯ', ಚಿಂತಕಿ ಬೃಂದಾ ಕಾರಟ್, ಬರಹಗಾರ ಸಬಿತಾ ಬನ್ನಾಡಿ, ಡಾ.ಆರ್.ಸುನಂದಮ್ಮ ಅವರು 'ಭಾರತದಲ್ಲಿ ಸಮಕಾಲೀನ ಮಹಿಳಾ ಚಳವಳಿಯ ಸವಾಲುಗಳು ಮತ್ತು ಸಾಧ್ಯತೆಗಳು', ಡಾ.ಎಸ್.ಚಂದ್ರಶೇಖರ್, ಡಾ.ಎಚ್.ಎಸ್.ಅನುಪಮಾ ಅವರು 'ಭಾರತೀಯ ಸಮಾಜದಲ್ಲಿ ಗಾಂಧಿ ಮತ್ತು ಅಂಬೇಡ್ಕರ್' ಕುರಿತು ವಿಚಾರ ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಸಂಜೆ 4.30ಕ್ಕೆ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ. ಹೈದರಾಬಾದಿನ ಬರಹಗಾರ ಕಾಂಚ ಐಲಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಶ್ರಾಂತ ಕುಲಪತಿ ಪ್ರೊ ಸಬಿಹ ಭೂಮಿ ಗೌಡ 'ಡಿಫೆರೆಂಟ್ ಟೆಲ್ಸ್ ', ಪುಸ್ತಕಗಳ ಬಿಡುಗಡೆ ಮಾಡಲಿದ್ದು, ಕೃತಿಯ ಕನ್ನಡ ಆವೃತ್ತಿಯ ಸಂಪಾದಕಿ ಸುಕನ್ಯಾ ಕನಾರಳ್ಳಿ ಪುಸ್ತಕ ಪರಿಚಯ ಮಾಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯರಾದ ಅಭಿರುಚಿ ಗಣೇಶ್, ಪ್ರೊ. ಕಾಳಚನ್ನೇಗೌಡ, ಜಿ.ಪಿ. ಬಸವರಾಜ್, ಸವಿತಾ ಪ. ಮಲ್ಲೇಶ್, ಹೊಸಕೋಟೆ ಬಸವರಾಜು, ಹರೀಶ್ ಇದ್ದರು.

ಇದನ್ನೂ ಓದಿ: ಫೆ.29ಕ್ಕೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.