ETV Bharat / state

ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜ ಬಳಕೆ: ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ - National Flag on govt cars

ಪ್ರಧಾನಮಂತ್ರಿ, ಸಿಎಂ, ಜಡ್ಜ್​​ಗಳು ಸೇರಿ ಗಣ್ಯರ ಅಧಿಕೃತ ಕಾರಿನ ಮೇಲೆ ರಾಷ್ಟ್ರಧ್ವಜ ಬಳಕೆಗೆ ಅವಕಾಶ ನೀಡಲಾಗಿದೆ.

ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜ ಬಳಕೆ
ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜ ಬಳಕೆ (ETV Bharat)
author img

By ETV Bharat Karnataka Team

Published : Jul 11, 2024, 8:20 PM IST

ಬೆಂಗಳೂರು: ರಾಜ್ಯದಲ್ಲಿ ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಬಳಕೆ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದ ಬೆನ್ನಲ್ಲೇ, ರಾಜ್ಯ ಸರ್ಕಾರವೂ ಈ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಿದೆ. ಈ ಮೂಲಕ ಗಣ್ಯರ ಕಾರಿನ ಮೇಲೆ ಧ್ವಜ ಇರುವ ಹಾಗೆ ಸೂಕ್ತ ಕ್ರಮ ವಹಿಸಲು ಎಲ್ಲಾ ಜಿಲ್ಲಾಧಿಕಾರಿಗಳು, ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಲಾಗಿದೆ.

ರಾಷ್ಟ್ರಧ್ವಜ ಬಳಕೆ ಬಗ್ಗೆ ಕೇಂದ್ರದ ಗೃಹ ಸಚಿವಾಲಯ ಈಚೆಗೆ ಧ್ವಜ ಸಂಹಿತೆ-2002 ರ ಪ್ರಕಾರ ಅವಕಾಶ ನೀಡಿ ಆದೇಶ ಹೊರಡಿಸಿದೆ. ಧ್ವಜ ಸಂಹಿತೆಯ ಸೆಕ್ಷನ್ IX ರ ಕಂಡಿಕೆ ಸಂ.3.44 ಮತ್ತು 3.45 ರ ಅನ್ವಯ ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಬಳಕೆ ಮಾಡುವ ಅವಕಾಶದ ಕುರಿತು ವಿವರಿಸಿದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್​ಗಳು, ವಿದೇಶದಲ್ಲಿ ದೇಶವನ್ನು ಅಧಿಕೃತವಾಗಿ ಪ್ರತಿನಿಧಿಸುವ ಧೂತವಾಸಗಳ ರಾಯಭಾರಿಗಳು, ಪ್ರಧಾನ ಮಂತ್ರಿ, ಕೇಂದ್ರ ಸಚಿವರು, ಕೇಂದ್ರ ರಾಜ್ಯಖಾತೆ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರು, ಲೋಕಸಭೆ ಸ್ಪೀಕರ್, ಡೆಪ್ಯೂಟಿ ಸ್ಪೀಕರ್, ರಾಜ್ಯಸಭೆ ಡೆಪ್ಯೂಟಿ ಚೇರ್ಮನ್, ರಾಜ್ಯಗಳ ವಿಧಾನಸಭೆ ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು, ವಿಧಾನ ಪರಿಷತ್ತಿನ ಸಭಾಪತಿ, ಉಪ ಸಭಾಪತಿಗಳು, ಸುಪ್ರೀಂ ಕೋರ್ಟ್ ಮುಖ್ಯ ನಾಯ್ಯಮೂರ್ತಿಗಳು, ನ್ಯಾಯಮೂರ್ತಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳು ತಮ್ಮ ಅಧಿಕೃತ ಸರ್ಕಾರಿ ಕಾರಿನಲ್ಲಿ ರಾಷ್ಟ್ರಧ್ವಜವನ್ನು ಬಳಕೆ ಮಾಡಬಹುದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ನಿರ್ದಿಷ್ಟಪಡಿಸಿರುವ ರಾಜ್ಯದ ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಅಳವಡಿಸುವಾಗ ಧ್ವಜ ಸಂಹಿತೆ, 2002ರ ಇತರ ಎಲ್ಲಾ ಉಪಬಂಧಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಕ್ತ ಕ್ರಮ ವಹಿಸುವಂತೆ ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಬರುವ ಸಂಬಂಧಪಟ್ಟವರಿಗೆ ಸೂಚನೆಗಳನ್ನು ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ಕಾವೇರಿ ನೀರು ಬಿಡಲು ಕರ್ನಾಟಕಕ್ಕೆ ಸಿಡಬ್ಲ್ಯುಆರ್​ಸಿ ಶಿಫಾರಸು - Cauvery water

ETV Bharat Logo

Copyright © 2024 Ushodaya Enterprises Pvt. Ltd., All Rights Reserved.