ಮೈಸೂರು: ಒಂದೇ ತಿಂಗಳಿನಲ್ಲಿ ದಕ್ಷಿಣಕಾಶಿ ಶ್ರೀ ನಂಜುಂಡೇಶ್ವರನಿಗೆ 1.72 ಕೋಟಿ ರೂಪಾಯಿ ಕಾಣಿಕೆಯನ್ನು ಭಕ್ತಾದಿಗಳು ಅರ್ಪಿಸಿದ್ದಾರೆ.
ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದ ಆವರಣದಲ್ಲಿ ಹುಂಡಿ ಎಣಿಕೆ ಮಾಡಲಾಯ್ತು. ಈ ವೇಳೆ 1,72,85,296 ರೂ. ಕಾಣಿಕೆ ಸಂಗ್ರಹವಾಗಿದ್ದು, ಇದರೊಂದಿಗೆ 92 ಗ್ರಾo ಚಿನ್ನಾಭರಣ, 3 ಕೆಜಿ 500 ಗ್ರಾಂ ಬೆಳ್ಳಿ, ಹಾಗೂ 33 ವಿದೇಶಿ ಕರೆನ್ಸಿಗಳು ಲಭ್ಯವಾಗಿವೆ. ಹುಣ್ಣಿಮೆ ಸೇರಿದಂತೆ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರಿಂದ ಹುಂಡಿಯಲ್ಲಿ ಈ ಪ್ರಮಾಣದ ಮೊತ್ತ ಸಂಗ್ರಹವಾಗಿದೆ.
ಎಣಿಕೆ ಕಾರ್ಯದಲ್ಲಿ ಶ್ರೀನಂಜುಂಡೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸತೀಶ್, ವೆಂಕಟೇಶ್ ಪ್ರಸಾದ್, ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ವಿದುಲತಾ, ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಕಾರ್ತಿಕ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.
ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ಹುಂಡಿ ಎಣಿಕೆ: 34 ದಿನದಲ್ಲಿ ಬರೋಬ್ಬರಿ 3 ಕೋಟಿ ರೂ. ಕಾಣಿಕೆ ಸಂಗ್ರಹ - HUNDI MONEY COUNTING