ETV Bharat / state

ಮೈಸೂರು ದಸರಾ: ಅಂಬಾರಿ ಕಟ್ಟುವ ಮುನ್ನ ಗಜಪಡೆಗೆ ನಡೆಯುವ ವಿಶೇಷ ಪೂಜೆ ಬಗ್ಗೆ ಗೊತ್ತೇ? - Mysuru Dasara Preparation

author img

By ETV Bharat Karnataka Team

Published : 2 hours ago

ದಸರಾ ಪೂರ್ವಭಾವಿಯಾಗಿ ಕ್ಯಾಪ್ಟನ್​​​ ಅಭಿಮನ್ಯು ನಿನ್ನೆ ಮರದ ಅಂಬಾರಿಯ ತಾಲೀಮು ನಡೆಸಿದ. ಇದಕ್ಕೂ ಮುನ್ನ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನಡೆಯಿತು. ಈ ವಿಶೇಷ ಪೂಜೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೈಸೂರು ದಸರಾ
ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆ (ETV Bharat)
ಗಜಪಡೆಗೆ ನಡೆದ ವಿಶೇಷ ಪೂಜೆ (ETV Bharat)

ಮೈಸೂರು: ಮುಂಬರುವ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಚಿನ್ನದ ಅಂಬಾರಿ ಹೊರಲಿರುವ ಆನೆ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಯತ್ತಿದೆ. ಆನೆಯ ತಾಲೀಮಿಗೂ ಮುನ್ನ 14 ಗಜಪಡೆಗೆ ವಿಶೇಷವಾಗಿ ಸಾಂಪ್ರದಾಯಕ ಪೂಜೆ ನಡೆಯುತ್ತದೆ.

ಗುರುವಾರ ಅರಮನೆ ಅಂಗಳದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಅಭಿಮನ್ಯುವಿನ ಹೆಗಲ ಮೇಲೆ ಗಾದಿ ಮತ್ತು ನಮ್ದ ಕಟ್ಟಲಾಯಿತು. ನಂತರ ಎಲ್ಲ ಆನೆಗಳನ್ನು ಸಾಲಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿವಾಸದ ಮುಂಭಾಗ ಮರದ ಅಂಬಾರಿ ಕಟ್ಟುವ ಜಾಗಕ್ಕೆ ಕರೆತರಲಾಯಿತು. ಅಂಬಾರಿ ಕಟ್ಟಿದ ನಂತರ​ ಅಭಿಮನ್ಯು ರಾಜಪಥದಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ.

ಇದಕ್ಕೂ ಮುನ್ನ, ಮರದ ಅಂಬಾರಿಗೆ ತಯಾರಿ ಮಾಡಿಕೊಂಡಿದ್ದ ಸಿಬ್ಬಂದಿ ಮತ್ತು ಅರಮನೆಯ ಅರ್ಚಕ ಪ್ರಹ್ಲಾದ್‌ ರಾವ್‌ ಅವರು ಮೊದಲು ಅಂಬಾರಿಗೆ ಹೂ ಇಟ್ಟು, ಅರಿಶಿನ, ಕುಂಕಮ ಹಚ್ಚಿ, ಆನೆಗಳ ಕಾಲಿಗೆ ನೀರು ಹಾಕಿ ತೊಳೆದು ಪಾದಪೂಜೆ ಮಾಡಿದರು. ಬಳಿಕ ಅರಿಶಿನ, ಕುಂಕುಮ ಹಚ್ಚಿ, ಗಂಧದಲ್ಲಿ ಓಂಕಾರ ಬರೆದು, ಬಾಳೆ ಹಣ್ಣು, ತೆಂಗಿನ ಕಾಯಿ, ವಿವಿಧ ತಿಂಡಿ ತಿನಿಸುಗಳನ್ನಿಟ್ಟರು. ಗಂಧದ ಕಡ್ಡಿ ಹಚ್ಚಿ ಅಂಬಾರಿ ಮೇಲೆ ಗಣೇಶ ವಿಗ್ರಹವಿಟ್ಟು ಗಣಪತಿ ಪೂಜೆ ನೆರವೇರಿಸಿದರು.

ಡಿಸಿಎಫ್​ ಪ್ರಭುಗೌಡ ಅವರು ಕುಂಬಳ ಕಾಯಿಯನ್ನು ಎಲ್ಲ ಆನೆಗಳಿಗೂ ಸುತ್ತು ತಂದು ಒಡೆದರು. ಮರದ ಅಂಬಾರಿಗೂ ಪೂಜೆ ಸಲ್ಲಿಸಿ ನೆರೆದಿದ್ದ ಎಲ್ಲರಿಗೂ ಮಂಗಳಾರತಿ ನೀಡಿದರು. ಇದಾದ ಬಳಿಕ ​ ಅಭಿಮನ್ಯುವಿನ ಬೆನ್ನಿನ ಮೇಲೆ ಕ್ರೇನ್‌ ಮೂಲಕ ಮರದ ಅಂಬಾರಿ ಕೂರಿಸಿ, ಮರಳು ಮೂಟೆಗಳನ್ನು ಇಡಲಾಯಿತು. ಕುಮ್ಕಿ ಆನೆಗಳಾದ ಲಕ್ಷ್ಮೀ ಹಾಗೂ ಹಿರಣ್ಯ ಆನೆಗಳ ಜೊತೆಯಲ್ಲಿ ಅಭಿಮನ್ಯು ರಾಜಬೀದಿಯಲ್ಲಿ ಹೆಜ್ಜೆ ಹಾಕಿದನು.

ಇದನ್ನೂ ಓದಿ: ಮೈಸೂರು ದಸರಾ ಸಿದ್ಧತೆ: 1,000 ಕೆಜಿ ಭಾರ ಹೊರಿಸಿ ಅಭಿಮನ್ಯು ಆನೆಗೆ ತಾಲೀಮು - Mysuru Dasara 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.