ETV Bharat / state

ಮೈಸೂರು-ಬೆಂಗಳೂರು ಹೈವೇ: ಕಳೆದ 15 ದಿನಗಳಲ್ಲಿ 12,192 ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲು - Traffic Violation Cases - TRAFFIC VIOLATION CASES

ಮೈಸೂರು-ಬೆಂಗಳೂರು ಹೈವೇಯಲ್ಲಿ ಕಳೆದ 15 ದಿನಗಳಲ್ಲಿ 12,192 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು (ETV Bharat)
author img

By ETV Bharat Karnataka Team

Published : May 17, 2024, 2:02 PM IST

ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್ ಹೈವೇ​ನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಸವಾರರ ಮೇಲೆ‌ ಕಳೆದ‌ 15 ದಿನಗಳಲ್ಲಿ ಸಂಚಾರ ಪೊಲೀಸರು 12,192 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರ್ಟಿಫಿಯಲ್ ಇಂಟಲಿಜೆನ್ಸ್ (ಎಐ) ಎಎನ್​ಪಿಆರ್ ಕ್ಯಾಮರಾಗಳಲ್ಲಿ ಸಂಚಾರ ಉಲ್ಲಂಘನೆ ಫೋಟೋ ಹಿಡಿದು ಸಂಬಂಧಪಟ್ಟ ವಾಹನ ಸವಾರರಿಗೆ ಏಳು ದಿನಗಳಲ್ಲಿ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಅತಿ ವೇಗ, ಚಾಲಕರು ಸೀಟ್ ಬೆಲ್ಟ್ ಧರಿಸದೇ ಇರುವುದು, ವಾಹನ ಚಲಾಯಿಸುವ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಧರಿಸದಿರುವುದು ಕಂಡುಬಂದಿದೆ. ಸಂಚಾರಿ ಪೊಲೀಸರು ಕಳುಹಿಸಿದ ನೋಟಿಸ್ ತಲುಪಿದ 7 ದಿನದಲ್ಲಿ ಸಂಬಂಧಪಟ್ಟ ಸಂಚಾರಿ ಠಾಣೆಗೆ ಹೋಗಿ ದಂಡ ಪಾವತಿಸಬೇಕೆಂದು ನೋಟಿಸ್​ನಲ್ಲಿ ತಿಳಿಸಲಾಗಿದೆ‌. ಅಲ್ಲದೇ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಆರ್‌ಟಿಒ ಮೂಲಕ ಮೊಬೈಲ್‌ಗೆ ದಂಡ ಪಾವತಿಸುವಂತೆಯೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 2 ಕೋಟಿ ವಾಹನಗಳ ಪೈಕಿ 37 ಲಕ್ಷ HSRP ಅಳವಡಿಕೆ; ಉಳಿದವರು ಇಷ್ಟು ದಂಡ ಕಟ್ಟಲು ಸಿದ್ಧರಾಗಿ! - HSRP

ETV Bharat Logo

Copyright © 2024 Ushodaya Enterprises Pvt. Ltd., All Rights Reserved.