ETV Bharat / state

ಇಂದು ಸಂಸದೆ ಸುಮಲತಾ ನಿರ್ಧಾರ ಪ್ರಕಟ: ಬಿಜೆಪಿ ಸೇರ್ತಾರಾ, ಪಕ್ಷೇತರವಾಗಿ ಕಣಕ್ಕಿಳಿಯಲಿದ್ದಾರಾ? - Sumalatha Ambareesh

ಮುಂದಿನ ರಾಜಕೀಯ ನಿರ್ಧಾರ ಕುರಿತಂತೆ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲಿ ಇಂದು ಬೆಳಗ್ಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಭೆ ನಡೆಸಲಿದ್ದಾರೆ.

mp-sumalatha-ambareesh-to-announce-next-political-decision-in-mandya
ಇಂದು ಸಂಸದೆ ಸುಮಲತಾ ನಿರ್ಧಾರ ಪ್ರಕಟ: ಬಿಜೆಪಿ ಸೇರ್ತಾರಾ, ಪಕ್ಷೇತರವಾಗಿ ಕಣಕ್ಕಿಳಿಯಲಿದ್ದಾರಾ?
author img

By ETV Bharat Karnataka Team

Published : Apr 3, 2024, 6:54 AM IST

ಬೆಂಗಳೂರು: ರಾಜಕೀಯ ಅನಿಶ್ಚಿತತೆಯಲ್ಲಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಇಂದು ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ಕೊಡಲಿದ್ದಾರಾ ಅಥವಾ ಕಳೆದ ಬಾರಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಾರಾ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.

ಬಿಜೆಪಿಯಿಂದ ಮಂಡ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಉತ್ಸಾಹದಲ್ಲಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ - ಜೆಡಿಎಸ್ ಮೈತ್ರಿಯಾಗಿದ್ದರಿಂದ ರಾಜಕೀಯ ಹಾದಿಯಲ್ಲಿ ಹೊಸ ಸವಾಲು ಎದುರಾಗಿದೆ. ಮಂಡ್ಯ ಜೆಡಿಎಸ್​​ಗೆ ಹಂಚಿಕೆಯಾಗಿ, ಕುಮಾರಸ್ವಾಮಿ ಅಭ್ಯರ್ಥಿ ಆದ ನಂತರ ಮುಂದೇನು ಮಾಡಬೇಕು ಎನ್ನುವ ಗೊಂದಲಕ್ಕೆ ಸುಮಲತಾ ಸಿಲುಕಿದ್ದಾರೆ.

ಈ ನಡುವೆ ಬಿಜೆಪಿ ಸೇರುವಂತೆ ಅಧಿಕೃತ ಆಹ್ವಾನ ಬಂದು ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಟಿಕೆಟ್ ಭರವಸೆ ನೀಡಿದರೂ ಒಪ್ಪದ ಸುಮಲತಾ, ಮಂಡ್ಯ ರಾಜಕಾರಣದಿಂದ ದೂರ ಉಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸುಮಲತಾ ನಿವಾಸಕ್ಕೆ ತೆರಳಿ ಬಿಜೆಪಿ ಹೈಕಮಾಂಡ್ ಸಂದೇಶವನ್ನು ತಿಳಿಸಿದ್ದರು. ಪರ್ಯಾಯ ಅವಕಾಶಗಳ ಕುರಿತು ಹೈಕಮಾಂಡ್ ಚಿಂತನೆ ಮಾಡಿರುವ ವಿಚಾರ ತಿಳಿಸಿ, ಬಿಜೆಪಿ ಸೇರಿ ಮೈತ್ರಿ ಅಭ್ಯರ್ಥಿ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದರು.

ಆದರೆ, ಯಾವುದೇ ಸ್ಪಷ್ಟ ಭರವಸೆ ನೀಡದ ಸುಮಲತಾ ಜೆಪಿನಗರ ನಿವಾಸದಲ್ಲಿ ಅಭಿಮಾನಿಗಳು, ಹಿತೈಷಿಗಳ ಸಭೆ ನಡೆಸಿ ಅಭಿಪ್ರಾಯ ಆಲಿಸಿದರು. ಎಲ್ಲರೂ ಪಕ್ಷೇತರವಾಗಿ ಸ್ಪರ್ಧೆ ಮಾಡಿ ನಿಮ್ಮ ಜೊತೆ ನಾವು ನಿಲ್ಲುತ್ತೇವೆ ಎನ್ನುವ ಅಭಯ ನೀಡಿದರು. ಅಭಿಮಾನಿಗಳ ಅಭಯಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ ಏಪ್ರಿಲ್ 3ರಂದು ಮಂಡ್ಯದಲ್ಲೇ ಕಾರ್ಯಕರ್ತರ ಸಮಾವೇಶ ನಡೆಸಿ ನಿರ್ಧಾರ ಪ್ರಕಟಿಸುದಾಗಿ ಘೋಷಿಸಿದ್ದರು.

ನಂತರ ಸುಮಲತಾ ನಿವಾಸಕ್ಕೆ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ತೆರಳಿ ಚುನಾವಣೆಯಲ್ಲಿ ಸಹಕಾರ ಕೋರಿದರು. ಅವರ ಜೊತೆ 30 ನಿಮಿಷ ಮಾತುಕತೆ ನಡೆಸಿದರು. ಕುಮಾರಸ್ವಾಮಿಗೂ ಕೂಡ ಕಾರ್ಯಕರ್ತರ ಅಭಿಪ್ರಾಯ ಪಡೆದೇ ನಿರ್ಧಾರ ಪ್ರಕಟಿಸುವ ನಿಲುವನ್ನು ಪುನರುಚ್ಚರಿಸಿದ್ದರು.

2019ರಲ್ಲಿಯೂ ಜನ ಹೇಳಿದಂತೆ ಕೇಳಿದ್ದೇನೆ, ಈಗಲೂ ಕೂಡ ಜನಾದೇಶವೇ ಮುಖ್ಯ ಆಗಲಿದೆ. ಹಾಗಾಗಿ ನಾನು ಮಂಡ್ಯ ಜನತೆಯನ್ನು ನೋಯಿಸುವ ನಿರ್ಧಾರ ಮಾಡಲ್ಲ. ಹಿಂದಿನ ಚುನಾವಣೆ ಎದುರಿಸಿದ್ದೂ ಕೂಡ ಜನರಿಗಾಗಿಯೇ? ಈಗಲೂ ಅವರ ಹಿತಕ್ಕೆ ತಕ್ಕ ನಿರ್ಧಾರ ಮಾಡಲಿದ್ದೇನೆ. ನನ್ನ ಜೊತೆಯಲ್ಲಿದ್ದವರ ಕೈಬಿಡುವ ಪ್ರಶ್ನೆಯೇ ಇಲ್ಲ. ಎಲ್ಲವನ್ನೂ ಗಮನಿಸಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದರು.

ಸಾಕಷ್ಟು ರಾಜಕೀಯ ಲೆಕ್ಕಾಚಾರದ ನಂತರ ಇಂದು ಸುಮಲತಾ ಅಂಬರೀಶ್ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ಮಂಡ್ಯದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕರ್ತರು, ಅಭಿಮಾನಿಗಳ ಸಭೆ ನಡೆಸಲಿರುವ ಸುಮಲತಾ ಅವರೆಲ್ಲರನ್ನೂ ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಕಾರ್ಯಕರ್ತರ ಅಭಿಪ್ರಾಯ ಆಲಿಸಿ, ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.

ನಟ ದರ್ಶನ್ ಈ ವೇಳೆ ಹಾಜರಿರಲಿದ್ದು, ಬಿಜೆಪಿ ಸೇರುವ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅಥವಾ ಈ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವ ಆಯ್ಕೆ ಸುಮಲತಾ ಮುಂದಿದೆ. ಯಾವ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಭವಿಷ್ಯದ ಭಾರತಕ್ಕಾಗಿ ಮೋದಿಯನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ: ಸಂಸದ ಪ್ರತಾಪ್ ಸಿಂಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.