ETV Bharat / state

ನಾಮಿನೇಷನ್ ಫೈಲ್​ಗೆ ಕರೆಯುತ್ತೇನೆ ಬನ್ನಿ: ಸಂಸದ ಪ್ರತಾಪ್ ಸಿಂಹ - ಮೈಸೂರು

ಈ ಬಾರಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ನಾಮಿನೇಷನ್ ಸಲ್ಲಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
author img

By ETV Bharat Karnataka Team

Published : Mar 4, 2024, 3:18 PM IST

Updated : Mar 4, 2024, 3:57 PM IST

ಸಂಸದ ಪ್ರತಾಪ್ ಸಿಂಹ

ಮೈಸೂರು : ಈ ಬಾರಿ ನಿಮಗೆ ಟಿಕೆಟ್ ಸಿಗಲಿದೆಯೇ ಎಂಬ ಈ ಟಿವಿ ಭಾರತ್ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ, ಮೀಡಿಯಾದವರು ಇನ್ನೂ ಒಂದು ನಾಲ್ಕೈದು ದಿನ ಇದೇ ತರಹ ಕೆಲಸ ಮಾಡುತ್ತಾ ಇರಿ. ನಾಮಿನೇಷನ್ ಫೈಲ್ ಮಾಡುವಾಗ ಎಲ್ಲರನ್ನೂ ಕರೆಯುತ್ತೇನೆ ಎಂದಿದ್ದಾರೆ. ಈ ಬಾರಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ನಾಮಿನೇಷನ್ ಸಲ್ಲಿಸುತ್ತೇನೆ, ಹ್ಯಾಟ್ರಿಕ್ ಗೆಲುವು ಸಾಧಿಸುತ್ತೇನೆ ಎಂದು ಸಂದರ್ಶನದಲ್ಲಿ ಅವರು ವಿವರಿಸಿದರು.

ಕೇವಲ 10 ವರ್ಷಗಳಲ್ಲಿ ಮಾಡಿದ ಸಾಧನೆಗಳ ಬಗ್ಗೆ ಮಾತ್ರ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದಿರುವ ಅವರು, ಕ್ಷೇತ್ರದಲ್ಲಿ ಎಲ್ಲ ಅಭಿವೃದ್ಧಿ ಕೆಲಸವನ್ನು ಮಾಡಲಾಗಿದೆ. ಇನ್ಯಾವ ಅಭಿವೃದ್ಧಿ ಕೆಲಸವೂ ಬಾಕಿ ಇಲ್ಲ. ಬಾಕಿ ಇದ್ದರೆ ನೀವೇ ಹೇಳಿ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಹತ್ತು ವರ್ಷಗಳಲ್ಲಿ ಸಂಸದ ಪ್ರತಾಪ್ ಸಿಂಹ ಮಾಡಿದ ಅಭಿವೃದ್ಧಿ ಕೆಲಸಗಳು: ಬೆಂಗಳೂರು - ಮೈಸೂರು ಹೈವೇ, ಮೈಸೂರು-ಕುಶಾಲನಗರ ಹೈವೇ, ರಿಂಗ್ ರೋಡ್​ಗೆ ಲೈಟ್ ಹಾಕಿಸಿದ್ದು, ಏರ್​ಪೋರ್ಟ್ ಅನ್ನು ಫಂಕ್ಷನಲ್ ಆಗಿ ಮಾಡಿದ್ದು, ಮತ್ತು ಏರ್​ಪೋರ್ಟ್​ನ ಎಕ್ಸ್​ಸೆಪ್ಷನಲ್ ಮಾಡಿದ್ದು, 390 ಕೋಟಿ ವೆಚ್ಚದಲ್ಲಿ ಲ್ಯಾಂಡ್ ಅಕ್ವಿಸಿಷನ್, 1 ಸಾವಿರ ಕೋಟಿಯನ್ನ ಅದಕ್ಕೆ ಇನ್ವೆಸ್ಟ್ ಮಾಡಿದ್ದೇವೆ. ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ನಿರ್ಮಾಣ, 12 ಹೊಸ ಟ್ರೈನ್​ಗಳನ್ನು ತಂದಿದ್ದೇನೆ. ಅಶೋಕ ಪುರಂ ರೈಲ್ವೆ ನಿಲ್ದಾಣವನ್ನು ಎರಡನೇ ರೈಲ್ವೆ ನಿಲ್ದಾಣವಾಗಿ ಡೆವಲಪ್​ ಮಾಡುತ್ತಿದ್ದೇವೆ. ಟಿಪ್ಪು ಅರಮನೆ ಶಿಫ್ಟ್ ಮಾಡಿಸಿದ್ದೇವೆ.

ಮೈಸೂರು ರೈಲ್ವೆ ಸ್ಟೇಷನ್​ಗೆ 12 ಸ್ಟೆಬಲಿಂಗ್ ಲೈನ್, ಫಿಟ್ ಲೈನ್, ಪ್ಲಾಟ್ ಫಾರಂಗಳನ್ನು ಮಾಡಿಸುತ್ತಿದ್ದೇವೆ. ಪಾಸ್ ಪೋರ್ಟ್ ಸೇವಾಕೇಂದ್ರ, ಇನ್ ಲ್ಯಾಂಡ್ ಕಂಟೇನರ್ ಡಿಪೋ ತಂದಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಅಮೃತ್ ಕುಡಿಯುವ ನೀರಿನ ಯೋಜನೆಯಲ್ಲಿ ಎಲ್ಲರ ಮನೆಗೆ ನೀರು ಕೊಟ್ಟಿದ್ದೇವೆ. ನಾಲ್ಕು ಪಟ್ಟಣ ಪಂಚಾಯತ್, ಶ್ರೀ ರಾಂಪೂರ, ರಮ್ಮನಹಳ್ಳಿ ,ಕಡಕೋಳ ಪಟ್ಟಣ ಪಂಚಾಯತ್ ಮತ್ತು ಹೂಟಗಳ್ಳಿ ನಗರಸಭೆಗೆ ಕುಡಿಯುವ ನೀರಿಗಾಗಿ 360 ಕೋಟಿ ರೂಪಾಯಿ ತಂದಿದ್ದೇನೆ ಎಂದರು.

ಪಿರಿಯಾಪಟ್ಟಣದ 303 ಗ್ರಾಮಗಳಿಗೆ ಕುಡಿಯುವ ನೀರಿಗೆ 339 ಕೋಟಿ ಪ್ರಾಜೆಕ್ಟ್ ತಂದು ಕೆಲಸ ಮಾಡಿಸುತ್ತಿದ್ದೇನೆ. ಹುಣಸೂರು 294 ಗ್ರಾಮಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುತ್ತಿದ್ದೇನೆ. ಹುಣಸೂರಿನ 49 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 85 ಕೋಟಿ ರೂಪಾಯಿ ಪ್ರಾಜೆಕ್ಟ್ ತಂದಿದ್ದೇನೆ. ಇನ್ನೂ ಯಾವುದಾದರೂ ಕೆಲಸ ಬಾಕಿ ಇದ್ದರೆ ಹೇಳಿ ಮಾಡುತ್ತೇನೆ ಎಂದು ಈಟಿವಿ ಭಾರತ್ ಸಂದರ್ಶನದಲ್ಲಿ ತಿಳಿಸಿದರು.

ಇದನ್ನೂ ಓದಿ : ಈ ಬಾರಿಯೂ ನನಗೆ ಟಿಕೆಟ್ ಸಿಗಲಿದೆ: ಸಂಸದ ಪ್ರತಾಪ್ ಸಿಂಹ

Last Updated : Mar 4, 2024, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.