ETV Bharat / state

ಈ ಹಗರಣಗಳಿಂದ ಸಿಎಂ ಸಿದ್ದರಾಮಯ್ಯನವರ ಬಣ್ಣ ಬಯಲಾಗಿದೆ: ಶೆಟ್ಟರ್​ - Muda Scam

ಮುಡಾ ಹಗರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹಾಗೂ ಸಂಸದ ಜಗದೀಶ್​ ಶೆಟ್ಟರ್​ ತೀವ್ರವಾಗಿ ಹರಿಹಾಯ್ದಿದ್ದಾರೆ.

JAGADISH SHETTAR ON MUDA SCAM
ಸಂಸದ ಜಗದೀಶ್​ ಶೆಟ್ಟರ್ (ETV Bharat)
author img

By ETV Bharat Karnataka Team

Published : Jul 13, 2024, 8:53 PM IST

ಸಂಸದ ಜಗದೀಶ್​ ಶೆಟ್ಟರ್ (ETV Bharat)

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್​ ಶೆಟ್ಟರ್​ ವಾಗ್ದಾಳಿ ನಡೆಸಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಾವು ಪ್ರಾಮಾಣಿಕ ರಾಜಕಾರಣಿ, ಸಮಾಜವಾದಿ, ನನ್ನ ಮೇಲೆ ಯಾವುದೇ ಭ್ರಷ್ಟಾಚಾರದಂತಹ ಕಪ್ಪು ಚುಕ್ಕೆ ಇಲ್ಲ ಅಂತ ಹೇಳಿಕೊಂಡು ಬಂದಿದ್ದರು. ಇದೀಗ ಅವರ ಬಣ್ಣ ಬಯಲಾಗಿದೆ. ಮುಖವಾಡ ಕಳಚಿದೆ ಎಂದು ಟೀಕಿಸಿದರು.

ವಾಲ್ಮೀಕಿ ಹಗರಣದ ವಿಚಾರದಲ್ಲಿ ಏಕೆ ಸುಮ್ನೆ ಕೂತ್ರಿ? ಯಾವುದೋ ಒಂದು ಡಿಪಾರ್ಟ್ಮೆಂಟ್​​ನಲ್ಲಿ ವಿತ್ ಡ್ರಾ ಆಗುತ್ತೆ ಅಂದ್ರೆ ಹೇಗೆ? ಬೇರೆ ಖಾತೆಗೆ ಜಮಾ ಆಗುತ್ತೆ ಅಂದರೆ, ಅದೆಲ್ಲ ಫೈನಾನ್ಸ್ ಇಲಾಖೆಗೆ ಬಂದೇ ಬರುತ್ತೆ. ಏಕೆ ಇದನ್ನು ಪ್ರಶ್ನೆ ಮಾಡಲಿಲ್ಲ? ನಿಮ್ಮ ಇನ್ವಾಲ್ವ್ ಮತ್ತು ನಿಮ್ಮ ಗಮನಕ್ಕೆ ಬರದೇ ಇದೆಲ್ಲ ನಡಿಲಿಕ್ಕೆ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಆಗ ಎಲೆಕ್ಷನ್ ಬಂದಿತ್ತು. ಹಾಗಾಗಿ ಹಣ ಬೇಕಾಗಿತ್ತು. ಯಾರೋ ಮಂತ್ರಿಗಳು ಇಲ್ಲಿಂದ ಹಣ ಬರುತ್ತದೆ ಅಂತ ಹೇಳಿದರು, ತಕ್ಷಣ ಯಸ್ ನೀವು ಅಂತ ಒಪ್ಪಿಗೆ ಕೊಟ್ಟಿದ್ದೀರಿ. ಆಗ ಸುಮ್ಮನಿದ್ರಿ. ಮುಖ್ಯಮಂತ್ರಿ ಗಮನಕ್ಕೆ ಬರದೇ ಇದು ಆಗಲಿಕ್ಕೆ ಸಾಧ್ಯನೇ ಇಲ್ಲ. ಯಾವುದಾದರೊಂದು ಪ್ರಾಜೆಕ್ಟ್​​ಗೆ 10 ಕೋಟಿ ಬಿಡುಗಡೆ ಮಾಡಬೇಕು ಅಂದರೆ, ಹಣಕಾಸು ಇಲಾಖೆಗೆ 10 ಸಲ ನಾನೇ ತಿರುಗಿದ್ದೇನೆ. ಅಲ್ಲಿ ಒಪ್ಪಿಗೆ ಇಲ್ಲದೆ ಯಾವ 10 ಕೋಟಿ ಹಣವೂ ಬಿಡುಗಡೆ ಆಗಲ್ಲ. ಅಂತಹದನ್ನು ನೂರಾರು ಕೋಟಿ ಹಣ ಬಿಡುಗಡೆ ಆಗುತ್ತೆ, ಹಣಕಾಸು ಇಲಾಖೆ ಕೈಕಟ್ಟಿ ಕೂಡುತ್ತೆ ಅಂದ್ರೆ, ಇದರಲ್ಲಿ ಅವರದ್ದು ಇನ್ವಾಲ್ವ್​ಮೆಂಟ್ ಇದೆ ಎಂದು ಆರೋಪಿಸಿದರು.

ಭಂಡತನದ ರಾಜಕಾರಣ ಮಾಡಿದ್ರೆ ಯಾರೂ ಏನನ್ನೂ ಮಾಡಲಾಗುವುದಿಲ್ಲ. ಅದಕ್ಕಾಗಿ ಸಿಬಿಐ ತನಿಖೆಗೆ ಕೊಡಿ ಅಂತ ಹೇಳುತ್ತೇವೆ. ಇ.ಡಿ ಬಂದ ಮೇಲೆ ಹೊಸ ವಿಚಾರಗಳು ಹೊರಗೆ ಬರುತ್ತಿವೆ. ಅದಕ್ಕಾಗಿ ಸಿಬಿಐ ತನಿಖೆಗೆ ಕೊಡಿ, ಆಗ ಎಲ್ಲ ನಿಜಾಂಶ ಹೊರಗೆ ಬರುತ್ತದೆ. ಇದರಿಂದ ಸಿದ್ದರಾಮಯ್ಯನವರ ಬಣ್ಣ ಬಯಲು ಆಗುತ್ತೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 200 ಕೋಟಿಯಷ್ಟು ಅಪರಾತಪರಾ ಆಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಈಗಾಗಲೇ ಇಡಿ ಹಾಗೂ ಸಿಬಿಐ ತನಿಖೆ ನಡೆಯುತ್ತಿದೆ. ಎಸ್ಐಟಿಯಿಂದ ನಾಗೇಂದ್ರ ಅವರನ್ನು ಅರೆಸ್ಟ್ ಮಾಡಲು ಆಗ್ತಾನೇ ಇರಲಿಲ್ಲ. ಇಷ್ಟೆಲ್ಲ ಅಪರಾತಪರಾ ನಡೆದರೂ ಸಿಎಂ ಹಾಗೂ ಇಡೀ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕುವಂತ ಕೆಲಸ ಮಾಡಿತ್ತು. ಆದರೆ, ಇಡಿ ತನಿಖೆ ಆರಂಭವಾಗ್ತಿದ್ದಂತೆ ಹೊಸ ವಿಚಾರಗಳು ಹೊರ ಬರುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಅಕ್ರಮ ವಿಚಾರವನ್ನು ಪ್ರಸ್ತಾಪಿಸಿದ ಶೆಟ್ಟರ್, ಈ ವಿಚಾರವಾಗಿ ಬಿಜೆಪಿ ಹೋರಾಟ ಮಾಡುತ್ತಿದೆ. ತಾರ್ಕಿಕ ಅಂತ್ಯದ ವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ್ದು: ಕುಮಾರಸ್ವಾಮಿ - HD Kumaraswamy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.