ETV Bharat / state

ಜೈಲಿನಿಂದಲೇ ಅತ್ತೆಗೆ ಕೊಲೆ ಬೆದರಿಕೆ: ಪೊಲೀಸ್​ ಠಾಣೆಯಲ್ಲಿ ದೂರು ದಾಖಲು - Death threats from prison

author img

By ETV Bharat Karnataka Team

Published : May 6, 2024, 3:10 PM IST

ಹತ್ಯೆ ಆರೋಪದ ಮೇಲೆ ಜೈಲು ಸೇರಿರುವ ವಿಚಾರಣಾ ಕೈದಿ ಜೈಲಿನಿಂದಲೇ ತನ್ನ ಅತ್ತೆಗೆ ಕೊಲೆ ಮಾಡುವ ಬೆದರಿಕೆ ಹಾಕಿರುವು ಘಟನೆ ನಡೆದಿದೆ. ಈ ಸಂಬಂಧ ಅತ್ತೆ ಮೈಸೂರಿನ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Death threats  Mysuru
ಸಂಗ್ರಹ ಚಿತ್ರ (Etv Bharat)

ಮೈಸೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಯೊಬ್ಬರು ಜೈಲಿನಿಂದಲೇ ಅತ್ತೆಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಮೈಸೂರಿನ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿದೆ ಬಂದಿದೆ. ಈ ಸಂಬಂಧ ದೂರು ದಾಖಲಾಗಿದೆ.

ಘಟನೆಯ ವಿವರ: ಕೊಲೆ ಆರೋಪದಲ್ಲಿ ಜೈಲು ಸೇರಿರುವ ವಿಚಾರಣಾ ಕೈದಿ ಕೃಷ್ಣ ಎಂಬುವನೇ ತನ್ನ ಅತ್ತೆಗೆ ಜೈಲಿನಿಂದಲೇ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯಾಗಿದ್ದಾನೆ. ಈತ ರಮ್ಮನಹಳ್ಳಿಯ ದೇವಮ್ಮನ ಮಗಳು ಐಶ್ವರ್ಯ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆ ನಂತರ ದಾಂಪತ್ಯದಲ್ಲಿ ಕಲಹ ಉಂಟಾಗಿದ್ದು, ಇದರಿಂದ್ದ ಐಶ್ವರ್ಯ ತನ್ನ ತಾಯಿ ಮನೆ ರಮ್ಮನಹಳ್ಳಿಯಲ್ಲಿ ವಾಸವಾಗಿದ್ದಾರೆ. ಕೃಷ್ಣ ಸಹ ರಮ್ಮನಹಳ್ಳಿ ನಿವಾಸಿಯಾಗಿದ್ದಾನೆ.

ಈ ನಡುವೆ ಕೊಲೆ ಪ್ರಕರಣದಲ್ಲಿ ಕೃಷ್ಣ ಮೈಸೂರು ಜೈಲು ಸೇರಿದ್ದು, ವಿಚಾರಣಾ ಕೈದಿ ಆಗಿದ್ದಾನೆ. ಈತ ಜೈಲಿನಿಂದಲೇ ಅತ್ತೆ ದೇವಮ್ಮನಿಗೆ ಕರೆ ಮಾಡಿ, ನಾನು ಇನ್ನೂ ಮೂರು ತಿಂಗಳಿನಲ್ಲಿ ಜೈಲಿನಿಂದ ಹೊರಗೆ ಬರುತ್ತೇನೆ. ಆಗ ನನ್ನ ಹೆಂಡತಿಯನ್ನು ನನ್ನ ಜೊತೆ ಕಳಿಸಿಕೊಡಬೇಕು. ಇಲ್ಲ ಎಂದರೆ ಆಕೆಗೂ ನನಗೂ ಸಂಬಂಧವಿಲ್ಲ ಎಂದು ಪತ್ರದಲ್ಲಿ ಬರೆದುಕೊಡಬೇಕು. ಮತ್ತು ಮದುವೆ ಸಂದರ್ಭದಲ್ಲಿ ನೀಡಿರುವ ಚಿನ್ನ, ಆಭರಣಗಳನ್ನು ಕೇಳುವಂತಿಲ್ಲ ಎಂದು ಫೋನ್ ನಲ್ಲಿ ಧಮ್ಕಿ ಹಾಕಿದ್ದಾನೆ. ಇಲ್ಲ ಎಂದರೆ ನಾನು ಏನೂ ಮಾಡುವುದಿಲ್ಲ, ಯಾರ ಕೈಯಲ್ಲಿ ಏನು ಮಾಡಿಸಬೇಕು ಅವರ ಕೈಯಲ್ಲಿ ಮಾಡಿಸುತ್ತೇನೆ ಎಂದು ಅಳಿಯ ಜೈಲಿನಿಂದಲೇ ಬೆದರಿಕೆ ಹಾಕಿದ್ದಾನೆ ಎಂದು ಅತ್ತೆ ದೇವಮ್ಮ ಮೈಸೂರಿನ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಪೊಲೀಸ್​ ಅಧಿಕಾರಿ ಮೇಲೆ ಟ್ರ್ಯಾಕ್ಟರ್​ ಹತ್ತಿಸಿ ಹತ್ಯೆ - Police Officer Murder

ETV Bharat Logo

Copyright © 2024 Ushodaya Enterprises Pvt. Ltd., All Rights Reserved.