ಬೆಂಗಳೂರು: ಕ್ಯಾಬ್ ಚಾಲಕನೋರ್ವ ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಮೃತದೇಹದ ಮುಂದೆ ಕಣ್ಣೀರಿಡುತ್ತಾ ತಾಯಿಯೂ ಸಹ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿಪುರದಲ್ಲಿ ಇಂದು ನಡೆದಿದೆ.
ಅರುಣ್ ಕುಮಾರ್ (37) ಆತ್ಮಹತ್ಯೆಗೆ ಶರಣಾದ ಕ್ಯಾಬ್ ಚಾಲಕ. ಸರಸ್ವತಿ (78) ಮೃತ ತಾಯಿ. ಕ್ಯಾಬ್ ಚಾಲಕನಾಗಿದ್ದ ಅರುಣ್ ಕುಮಾರ್ ಸಾಲ ಮಾಡಿಕೊಂಡಿದ್ದರು. ಅಲ್ಲದೆ ಕಳೆದ 1 ವರ್ಷದ ಹಿಂದೆ ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದ ತಾಯಿ ಹಾಸಿಗೆ ಹಿಡಿದಿದ್ದರು. ಸಹೋದರರು ಬೇರೆಡೆ ವಾಸವಿದ್ದುದರಿಂದ ತಾಯಿಯ ಯೋಗಕ್ಷೇಮವನ್ನ ತಾನೇ ನೋಡಿಕೊಳ್ಳುತ್ತಿದ್ದ ಅರುಣ್ ಕುಮಾರ್ ಖಿನ್ನತೆಗೊಳಗಾಗಿದ್ದರು.
![Arun Kumar T](https://etvbharatimages.akamaized.net/etvbharat/prod-images/25-08-2024/kn-bng-06-suicide-7211560_25082024180907_2508f_1724589547_22.jpg)
ಇಂದು ಮಧ್ಯಾಹ್ನ ಡೆತ್ ನೋಟ್ ಬರೆದಿಟ್ಟು, ಮನೆಯ ರೂಮಿನಲ್ಲಿ ಅರುಣ್ ಕುಮಾರ್ ನೇಣಿಗೆ ಶರಣಾಗಿದ್ದಾರೆ. ಬಳಿಕ ಮಗನ ಮೃತದೇಹದ ಮುಂದೆ ತಾಯಿಯೂ ಕೊನೆಯುಸಿರೆಳದಿದ್ದಾರೆ. ಮೃತನ ಸಹೋದರ ನೀಡಿರುವ ದೂರಿನನ್ವಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ವರದಿಯಾಗಿದೆ.
ಇದನ್ನೂ ಓದಿ : ಬೆಂಗಳೂರು: ಹೀಲಿಯಂ ಅನಿಲ ಸೇವಿಸಿ ಟೆಕ್ಕಿ ಆತ್ಮಹತ್ಯೆ - Techie Commits Suicide