ETV Bharat / state

'ರಾಜಕಾರಣಕ್ಕೆ ಮೋದಿ ದೇವರಿದ್ದಂತೆ, ಕಾಂಗ್ರೆಸ್​ನವರು ಬೇಕಾದ್ರೆ ಮೋದಿ ಫೋಟೋ ಬಳಸಲಿ' - Radha Mohan Das

ನಾವು ಈಶ್ವರಪ್ಪರನ್ನು ಇಂದಿಗೂ ಭಿನ್ನಮತೀಯ ಎಂದುಕೊಂಡಿಲ್ಲ. ಅವರು ನಾಮಪತ್ರ ಸಲ್ಲಿಸಿಯೂ ವಾಪಸ್​ ತೆಗೆದುಕೊಳ್ಳದೇ ಇದ್ದರೆ ಭಿನ್ನಮತೀಯ ಎಂದು ಪರಿಗಣಿಸುತ್ತೇವೆ ಎಂದು ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗ್ರವಾಲ್ ತಿಳಿಸಿದರು.

author img

By ETV Bharat Karnataka Team

Published : Apr 7, 2024, 10:36 PM IST

Radha Mohan Das Agrawal spoke to the media.
ರಾಧಾ ಮೋಹನ್ ದಾಸ್ ಅಗ್ರವಾಲ್ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗ್ರವಾಲ್

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗ್ರವಾಲ್​ ಅವರು ದೇವರಿಗೆ ಹೋಲಿಸಿದ್ದಾರೆ. ಚಾಮರಾಜನಗರದಲ್ಲಿ ಇಂದು ಬಿಜೆಪಿ ಮುಖಂಡರ ಸಭೆ ಬಳಿಕ, ಈಶ್ವರಪ್ಪನವರು ಮೋದಿ ಫೋಟೋ ಬಳಸುವ ವಿಚಾರಕ್ಕೆ ಮಾಧ್ಯಮವರೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಹಾಗೂ ಬಿಜೆಪಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ ಮಾಡಲಿ. ಇದರಿಂದ ಶಿವಮೊಗ್ಗದಲ್ಲಿ ರಾಘವೇಂದ್ರ ಅತ್ಯಧಿಕ ಮತಗಳಿಂದ ಗೆಲ್ಲುತ್ತಾರೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ದೇಶದ ಪ್ರಧಾನಿ. ರಾಜಕಾರಣಕ್ಕೆ ದೇವರು ಇದ್ದಂತೆ. ಈಶ್ವರಪ್ಪ ಮೋದಿ ಫೋಟೋ ಬಳಸುತ್ತಿದ್ದಾರೆ. ಕಾಂಗ್ರೆಸ್‌ನವರೂ ಬೇಕಾದರೆ ಮೋದಿ ಫೋಟೋ ಬಳಸಲಿ. ರಾಹುಲ್ ಗಾಂಧಿ ಫೋಟೊ ಬಳಸಿದರೆ ಬೇಲ್ ಸಿಗಲ್ಲ. ಬೇಲ್ ಸಿಕ್ಕಿದರೂ ಕೂಡ ರದ್ದಾಗುತ್ತದೆ. ದೇವರು ಎಲ್ಲರಿಗೂ ಒಂದೇ. ಒಂದು ಪಾರ್ಟಿಗೆ ಸೀಮಿತವಲ್ಲ ಎಂದರು.

ಕಾಂಗ್ರೆಸ್‌ನ ಶೇ.50ರಷ್ಟು ಕಾರ್ಯಕರ್ತರು ಬಿಜೆಪಿಗೆ ಮತ ಹಾಕುತ್ತಾರೆ. ಆದ್ರೆ ಸದ್ಯ ಅವರು ಓಡಾಡುತ್ತಿರುವುದು ಕಾಂಗ್ರೆಸ್ ಜತೆಗೆ ಮಾತ್ರ. ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಪರ ಸುಮಲತಾ ಪ್ರಚಾರ ಮಾಡುತ್ತಾರೆ. ಎಚ್​ಡಿಕೆ ಹಾಗೂ ಸುಮಲತಾ ಪರಸ್ಪರ ಸಮಾಲೋಚನೆ ನಡೆಸಿದ್ದಾರೆ. ಸುಮಲತಾ ಮಂಡ್ಯ ಹಾಗೂ ಬೇರೆ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂಓದಿ: ಆರ್‌ಎಸ್‌ಎಸ್‌ ಬಗ್ಗೆ ತಿಳಿದುಕೊಳ್ಳದೆ ಮಾತನಾಡಿರುವುದಕ್ಕೆ ಕ್ಷಮಿಸಿ: ಪ್ರಜ್ವಲ್ ರೇವಣ್ಣ - Prajwal Revanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.