ಶಿವಮೊಗ್ಗ: ನಮ್ಮ ಮೊಬೈಲ್ ಟವರ್ ಕಾಣೆಯಾಗಿದೆ ಎಂದು ಕಂಪನಿಯೊಂದು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಮೊಬೈಲ್ ಟವರ್ಗಳನ್ನು ನೋಡಿಕೊಳ್ಳುವ ಜಿಟಿಎಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಕಂಪನಿ 2008ರಲ್ಲಿ ಶಿವಮೊಗ್ಗ ನಗರದ ಟಿಪ್ಪು ನಗರದ ಸರ್ವೆ ನಂಬರ್ 163/3ರ ಅಬ್ದುಲ್ ಗಫಾರ್ ಎಂಬವರಿಗೆ ಸೇರಿದ ಜಾಗದಲ್ಲಿ ಟವರ್ ಸ್ಥಾಪಿಸಿತ್ತು. ಆದರೆ, ಕೋವಿಡ್ ವೇಳೆ ಟವರ್ ನೋಡಿಕೊಳ್ಳಲು ಸಾಧ್ಯವಾಗಿರಲಿಲ್ಲ. 2021ರಲ್ಲಿ ಸ್ಥಳಕ್ಕೆ ಬಂದಾಗ ಅಲ್ಲಿ ಮೊಬೈಲ್ ಟವರ್ ಹಾಗೂ ಅದಕ್ಕೆ ಬಳಸಿದ ವಸ್ತುಗಳೆಲ್ಲವೂ ಕಾಣೆಯಾಗಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಟವರ್ ಹಾಗೂ ಅದರ ಇತರೆ ವಸ್ತುಗಳನ್ನು ಹುಡುಕಿಕೊಡುವಂತೆ ಕಂಪನಿಯ ಅಧಿಕಾರಿ ಸಂದೀಪ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಪೊಲೀಸರು ನೇರವಾಗಿ ಪಡೆಯದ ಹಿನ್ನೆಲೆಯಲ್ಲಿ ಕಂಪನಿ ಕೋರ್ಟ್ ಮೊರೆ ಹೋಗಿತ್ತು. ಬಳಿಕ ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊಬೈಲ್ ಟವರ್ ಹಾಗೂ ಇತರೆ ವಸ್ತುಗಳ ಅಂದಾಜು ಮೌಲ್ಯ 46,30,647 ಲಕ್ಷ ರೂ ಆಗಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: ಅಡಕೆ ತೋಟದ ಮಾಲೀಕರೇ ಹುಷಾರ್!: ದಾವಣಗೆರೆಯಲ್ಲಿ ಐದಾರು ಕ್ವಿಂಟಾಲ್ ಹಸಿ ಅಡಕೆ ಕಳ್ಳತನ