ETV Bharat / state

ಸರ್ಕಾರ ಬೀಳಲ್ಲ, ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ, ಸತೀಶ್​​​ ಜಾರಕಿಹೊಳಿ ಡಿಸಿಎಂ ಆಗಬಹುದು: ಲಖನ್ ಜಾರಕಿಹೊಳಿ - Lakhan Jarkiholi

ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಲಖನ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

MLC Lakhan Jarkiholi
ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ (ETV Bharat)
author img

By ETV Bharat Karnataka Team

Published : Jun 6, 2024, 2:53 PM IST

ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ (ETV Bharat)

ಬೆಳಗಾವಿ: "ಮಳೆ ಬೀಳಬಹುದು, ಸರ್ಕಾರ ಬೀಳಲ್ಲ. ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ" ಎಂದು ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ತಿಳಿಸಿದರು. ಇದೇ ವೇಳೆ, ಸತೀಶ್ ಜಾರಕಿಹೊಳಿ​​ ಕರ್ನಾಟಕದ ಏಕನಾಥ್ ಶಿಂಧೆ ಆಗುತ್ತಾರೆ, ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಬೀಳುತ್ತದೆ ಎಂಬುದು ಅಪಪ್ರಚಾರ. ಹಾಗೆಲ್ಲಾ ಆಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಸತೀಶ್​​ಗೆ ಡಿಸಿಎಂ ಸ್ಥಾನದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಮುಂದಿನ ದಿನಗಳಲ್ಲಿ ಕೊಡಬಹುದು. ಸೀನಿಯಾರಿಟಿ ಆಧಾರದ ಮೇಲೆ ಡಿಸಿಎಂ ಆಗಬಹುದು" ಎಂದರು.

ಲೋಕಸಭೆ ಚುನಾವಣೆ ಕುರಿತು ಮಾತನಾಡುತ್ತಾ, "ಬೆಳಗಾವಿಯಲ್ಲಿ ಜಗದೀಶ್​​ ಶೆಟ್ಟರ್ ಹಾಗೂ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿಗೆ ಬೆಂಬಲ ಕೊಟ್ಟಿದ್ದೆ. ಪಕ್ಷೇತರ ಅಭ್ಯರ್ಥಿಯಾಗಿ ಇಬ್ಬರನ್ನೂ ಬೆಂಬಲಿಸಿದ್ದೆ. ಈ ಇಬ್ಬರೂ ಗೆದ್ದಿರುವುದು ನಮಗೆ ಸಂತಸ ತಂದಿದೆ" ಎಂದು ಹೇಳಿದರು.

ಚಿಕ್ಕೋಡಿಯಲ್ಲಿ ಗೆಲುವು ಸಾಧಿಸುವ ಮೂಲಕ ಜಾರಕಿಹೊಳಿ ಸಹೋದರರು ಬಲಿಷ್ಠ ಎಂಬುದು ಮತ್ತೆ ಸಾಬೀತಾಯಿತೇ? ಎಂಬ ಮಾಧ್ಯಮಗಳ ಪ್ರಶ್ನೆಗೆ, "ಜನರು ಮತ್ತು ದೇವರ ಆಶೀರ್ವಾದ ಇರುವವರೆಗೂ ಜಾರಕಿಹೊಳಿ ಕುಟುಂಬ ಬಲಿಷ್ಠವಾಗಿರುತ್ತದೆ‌. ನಾವಿಷ್ಟು ಮೇಲೆ ಬರಲು ಇದೇ ಕಾರಣ. ಜನರ ಜೊತೆ ನಾವು ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದೇವೆ" ಎಂದರು.

ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಸೋಲಿಸುವ ತಂತ್ರಗಾರಿಕೆ ಮಾಡಿದ್ರು ಎಂಬ ಆರೋಪಕ್ಕೆ, "ರಾಜಕೀಯದಲ್ಲಿ ತಂತ್ರಗಾರಿಕೆ ಇದ್ದೇ ಇರುತ್ತದೆ. ಆದರೆ, ನಮ್ಮ ಮೇಲೆ ಜನರ ಆಶೀರ್ವಾದವಿದೆ" ಎಂದು ಹೇಳಿದರು.

ಅಥಣಿಯಲ್ಲಿ ಕಾಂಗ್ರೆಸ್ ಇದ್ದರೂ ಸಹ ಮತಗಳ ಸಂಖ್ಯೆ ಕಡಿಮೆಯಾದ ವಿಚಾರಕ್ಕೆ ಪ್ರತಿಕ್ರಿಯಿಸಿ, "ಈ ಬಗ್ಗೆ ಸಚಿವರಾಗಿರುವ ಸತೀಶ್​​​ ಜಾರಕಿಹೊಳಿ ನೋಡಿಕೊಳ್ಳುತ್ತಾರೆ. ಅಲ್ಲಿ 25 ಸಾವಿರ ಲೀಡ್ ಬರಬೇಕಿತ್ತು. ಪ್ರತೀ ಚುನಾವಣೆ ಬಂದಾಗ ನಮ್ಮ ವಿರುದ್ಧ ಟೀಂ ಬಂದು ಪ್ರಚಾರ ಮಾಡುತ್ತದೆಯಷ್ಟೇ" ಎಂದು ತಿಳಿಸಿದರು.

ಚಿಕ್ಕೋಡಿಯಲ್ಲಿ ಲೀಡ್ ಕಡಿಮೆ ಆಗಿದ್ದಕ್ಕೆ ಪ್ರತಿಕ್ರಿಯಿಸಿ, "ಇನ್ನೂ 50 ಸಾವಿರ ಲೀಡ್ ಬರಬೇಕಿತ್ತು. ಆದರೆ, ಅದು ಕಡಿಮೆ ಆಗಿದೆ. ಪ್ರಿಯಾಂಕಾ, ರಾಹುಲ್ ಇಬ್ಬರೂ ಕಾರ್ಯಕರ್ತರ ಜೊತೆ ಸೇರಿ ಕೆಲಸ ಮಾಡಿದ್ದಾರೆ. ಯಮಕನಮರಡಿಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಪ್ರಿಯಾಂಕಾ 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಾರಕಿಹೊಳಿ ಸಹೋದರರು ಹೆಬ್ಬಾಳ್ಕರ್ ಅವರನ್ನು ಸೋಲಿಸುವುದರ ಜೊತೆಗೆ ಸೇಡು ತೀರಿಸಿಕೊಂಡರು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಖನ್, "ಒಳ್ಳೆಯ ಕೆಲಸ ಮಾಡಿದವರಿಗೆ ಜನ ಮತ ಹಾಕುತ್ತಾರೆ. ಇದರಲ್ಲಿ ಸೇಡು ಎನ್ನುವ ಪ್ರಶ್ನೆಯೇ ಬರಲ್ಲ. ಹಿರಿಯರ ಬಗ್ಗೆ ಅಗೌರವದಿಂದ ಮಾತನಾಡಿದ್ದರಿಂದ ಈ ರೀತಿ ಆಗಿದೆ. ಅವರ ಸ್ವಭಾವ ನೋಡಿ ಜನ ನಿರ್ಧಾರ ಮಾಡಿದ್ದಾರೆ" ಎಂದರು.

ಇದನ್ನೂ ಓದಿ: 'ಲಕ್ಷ್ಮೀ ಹೆಬ್ಬಾಳ್ಕರ್ ಸುಧಾರಿಸಿಕೊಳ್ಳಬೇಕು, ಬಿಜೆಪಿ ರಾಜ್ಯ ನಾಯಕರು ಅಹಂಕಾರ ಬಿಡಬೇಕು': ರಮೇಶ್ ಜಾರಕಿಹೊಳಿ - Ramesh Jarkiholi

ಪಕ್ಷ, ಸರ್ಕಾರದ ಘನತೆ ಉಳಿಸಲು ಸ್ವಯಂ ಪ್ರೇರಣೆಯಿಂದ ನಾಗೇಂದ್ರ ರಾಜೀನಾಮೆಗೆ ಮುಂದಾಗಿದ್ದಾರೆ: ಡಿ.ಕೆ. ಶಿವಕುಮಾರ್ - Nagendra Will Resign

ಲಕ್ಷ್ಮೀ ಹೆಬ್ಬಾಳ್ಕರ್ ನಾಲ್ಕು ದಿನ ವಾಸ್ತವ್ಯ ಹೂಡಿ ಪ್ರಚಾರ ಮಾಡಿದರೂ ಗೆಲ್ಲಲು ಆಗದಿರುವುದಕ್ಕೆ, "ಗೋಕಾಕ, ಅರಭಾವಿಯಲ್ಲಿ ಜನ ಶಾಸಕರ ಪರವಾಗಿ ಕೆಲಸ ಮಾಡುತ್ತಾರೆ. ವೋಟ್ ಹಾಕ್ತಾರೆ" ಎಂದ ಲಖನ್, "ಬೀಗರಿದ್ದರೆ ಸಹ ವೋಟ್ ಹಾಕಬೇಕಲ್ಲವೇ? ಗೋಕಾಕ, ಅರಭಾವಿ, ಬೆಳಗಾವಿ ಜನ ವೋಟ್ ಹಾಕಬೇಕಲ್ಲವೇ?. ಆದ್ರಿಲ್ಲಿ ಜಾರಕಿಹೊಳಿ ಅಭಿಮಾನಿಗಳು, ಕಾರ್ಯಕರ್ತರ ಶಕ್ತಿ ಇದೆ. ಅವರ ಪ್ರೀತಿ, ವಿಶ್ವಾಸ ಇರೋದ್ರಿಂದ ನಮಗೆ ಏನೂ ಆಗಲ್ಲ" ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಸೋತಿದ್ದಕ್ಕೆ ಏನೂ ಕಮೆಂಟ್ ಮಾಡಲ್ಲ ಎಂದು ಲಖನ್ ಜಾರಕಿಹೊಳಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.