ETV Bharat / state

ಬಿರುಸಿನಿಂದ ಸಾಗುತ್ತಿದೆ ವಿಧಾನಪರಿಷತ್​​ ಚುನಾವಣೆ: ಶಿಕ್ಷಕರ ಕ್ಷೇತ್ರದಲ್ಲೇ ಹೆಚ್ಚಿನ ಪ್ರಮಾಣದ ಮತದಾನ - MLC Election

3 ಶಿಕ್ಷಕರ ಕ್ಷೇತ್ರ ಹಾಗೂ 3 ಪದವೀಧರರ ಕ್ಷೇತ್ರಕ್ಕೆ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, 12 ಗಂಟೆವರೆಗಿನ ಮತದಾನದ ಶೇಕಡಾವಾರು ಅಂಕಿ ಅಂಶ ಇಲ್ಲಿದೆ.

author img

By ETV Bharat Karnataka Team

Published : Jun 3, 2024, 1:54 PM IST

ವಿಧಾನಪರಿಷತ್​​ ಚುನಾವಣೆ
ವಿಧಾನಪರಿಷತ್​​ ಚುನಾವಣೆ (ETV Bharat)

ಬೆಂಗಳೂರು: ವಿಧಾನಪರಿಷತ್​​ 3 ಶಿಕ್ಷಕರ ಕ್ಷೇತ್ರ ಹಾಗೂ 3 ಪದವೀಧರರ ಕ್ಷೇತ್ರಕ್ಕೆ ಬಿರುಸಿನ ಚುನಾವಣೆ ನಡೆಯುತ್ತಿದೆ. ಪದವೀಧರ ಕ್ಷೇತ್ರಗಳಿಗಿಂತ ಶಿಕ್ಷಕರ ಕ್ಷೇತ್ರಗಳ ಮತದಾನದ ಪ್ರಮಾಣ ಉತ್ತಮವಾಗಿದೆ.

ಈಶಾನ್ಯ ಪದವೀಧರ, ನೈಋತ್ಯ ಪದವೀಧರ ಮತ್ತು ಬೆಂಗಳೂರು ಪದವೀಧರ, ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಕಣದಲ್ಲಿ ಒಟ್ಟು 78 ಅಭ್ಯರ್ಥಿಗಳಿದ್ದಾರೆ. ಈ ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಲಿದ್ದು, ಜೂನ್ 6 ರಂದು ಫಲಿತಾಂಶ ಹೊರಬೀಳಲಿದೆ.

ಡಾ. ಸಿ.ಎನ್.  ಅಶ್ವತ್ಥನಾರಾಯಣ್​ ​ಮತದಾನ
ಡಾ. ಸಿ.ಎನ್. ಅಶ್ವತ್ಥನಾರಾಯಣ್​ ​ಮತದಾನ (ETV Bharat)

ಬೆಳಗ್ಗೆ 8 ಗಂಟೆಗೆ ಉತ್ತಮ ಆರಂಭ ಪಡೆದ ಮತದಾನ ನಂತರ ಮಂದಗತಿಯಲ್ಲಿ ಸಾಗಿದೆ. ಮತದಾರರು ಮತಗಟ್ಟೆಗೆ ತೆರಳಲು ಮಳೆ ಅನಾಹುತಗಳ ಕಾರಣದಿಂದ ವಿಳಂಬವಾಗುತ್ತಿದೆ ಎನ್ನಲಾಗಿದೆ. ಚುನಾವಣಾ ಆಯೋಗ 4 ಗಂಟೆ ಅವಧಿಯ ಮತದಾನದ ಶೇಕಡಾವಾರು ಅಂಕಿ ಅಂಶ ಬಿಡುಗಡೆ ಮಾಡಿದ್ದು, ಅದರಲ್ಲಿ ಪದವೀಧರ ಕ್ಷೇತ್ರಗಳಿಗಿಂತ ಶಿಕ್ಷಕರ ಕ್ಷೇತ್ರಗಳ ಮತದಾನ ಪ್ರಮಾಣ ಹೆಚ್ಚಾಗಿರುವುದು ಸ್ಪಷ್ಟವಾಗಿದೆ.

12 ಗಂಟೆವರೆಗಿನ ಮತದಾನದ ಪ್ರಮಾಣ:

ಈಶಾನ್ಯ ಪದವೀಧರ ಕ್ಷೇತ್ರ: 26%

ನೈಋತ್ಯ ಪದವೀಧರ ಕ್ಷೇತ್ರ:33.49%

ಬೆಂಗಳೂರು ಪದವೀಧರ ಕ್ಷೇತ್ರ:28.37%

ಆಗ್ನೇಯ ಶಿಕ್ಷಕರ ಕ್ಷೇತ್ರ: 28.28%

ನೈಋತ್ಯ ಶಿಕ್ಷಕರ ಕ್ಷೇತ್ರ: 37.79%

ದಕ್ಷಿಣ ಶಿಕ್ಷಕರ ಕ್ಷೇತ್ರ: 38.32%

ಅಶ್ವತ್ಥನಾರಾಯಣ್​ ​ಮತದಾನ: ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ್​ ​ಮಲ್ಲೇಶ್ವರದ 18ನೇ ಅಡ್ಡ ರಸ್ತೆಯಲ್ಲಿನ ಸರಕಾರಿ ಬಾಲಕರ ಜೂನಿಯರ್ ಕಾಲೇಜಿನಲ್ಲಿ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಕುಟುಂಬದೊಂದಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಇದನ್ನೂ ಓದಿ: ಪದವೀಧರ, ಶಿಕ್ಷಕರ ಕ್ಷೇತ್ರಗಳ ಚುನಾವಣೆ: ಮತದಾನಕ್ಕೆ ಅಡ್ಡಿಯಾದ ಮಳೆ, ಕರೆಂಟ್​ - KARNATAKA MLC ELECTION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.