ETV Bharat / state

ಕನ್ವರ್ಷನ್ ಮಾಫಿಯಾ ಅಥವಾ ಡಿಎನ್‍ಎ ಕಾರಣಕ್ಕೆ ರಾಹುಲ್ ಹಿಂದೂ ವಿರೋಧಿ ಹೇಳಿಕೆ: ಸಿ.ಟಿ. ರವಿ ಕಿಡಿ - MLC C T RAVI

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

author img

By ETV Bharat Karnataka Team

Published : Jul 2, 2024, 7:18 PM IST

MLC CT Ravi
ವಿಧಾನಪರಿಷತ್ ಸದಸ್ಯ ಸಿ ಟಿ ರವಿ (ETV Bharat)

ಬೆಂಗಳೂರು: ರಾಹುಲ್ ಗಾಂಧಿಯವರು ಕನ್ವರ್ಷನ್ ಮಾಫಿಯಾದ ಕೈಗೊಂಬೆಯಾಗಿ ಸದನದಲ್ಲಿ ಹಿಂದೂ ವಿರೋಧಿ ಹೇಳಿಕೆ ಕೊಟ್ಟಿರುವ ಸಾಧ್ಯತೆ ಇದೆ. ಅಥವಾ ಅವರ ಕುಟುಂಬದ ಡಿಎನ್‍ಎ ಕೂಡ ಕಾರಣ ಇರಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವರ ಮುತ್ತಾತ ದಿವಂಗತ ಜವಾಹರ ಲಾಲ್ ನೆಹರೂ ಅವರು 'ನನ್ನನ್ನು ಕತ್ತೆ ಎಂದು ಬೇಕಾದರೂ ಕರೆಯಿರಿ. ಹಿಂದೂ ಎಂದು ಕರೆಯಬೇಡಿ' ಎಂದಿದ್ದರು. ಆ ಡಿಎನ್‍ಎ ಪ್ರಭಾವವೂ ಇರಬಹುದು; ಅಥವಾ ಕನ್ವರ್ಷನ್ ಮಾಫಿಯಾದ ಕೈಗೊಂಬೆಯಾಗಿರುವ ಕಾರಣಕ್ಕೂ ಇರಬಹುದು. ವಿರೋಧ ಪಕ್ಷದ ನಾಯಕನಾಗಿ ಸಾಂವಿಧಾನಿಕ ಹುದ್ದೆಯಲ್ಲಿದ್ದು ಹಿಂದೂ ದ್ವೇಷವನ್ನು ತೋರಿಸಿದ್ದಾರೆ ಎಂದು ಟೀಕಿಸಿದರು.

1947ರಲ್ಲಿ ಭಾರತದ ವಿಭಜನೆಗೆ ಕಾರಣವಾದ ಸಿದ್ಧಾಂತ ಯಾವುದು? ಕೋಟ್ಯಂತರ ಜನರನ್ನು ನಿರ್ವಸಿತರನ್ನಾಗಿ ಮಾಡಿದ್ದು, ಲಕ್ಷಾಂತರ ಜನರ ಮಾರಣಹೋಮಕ್ಕೆ ಕಾರಣವಾದ ಸಿದ್ಧಾಂತ ಯಾವುದು? ತನ್ನ ರಾಜಕೀಯ ಲಾಭ, ಸ್ವಾರ್ಥಕ್ಕಾಗಿ ದೇಶ ವಿಭಜನೆಗೆ ಸಹಿ ಹಾಕಿದ ಪಾರ್ಟಿ ಯಾವುದು? ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಿದ ಪಕ್ಷ ಯಾವುದು? ಅಲ್ಲಿನ ಮೂಲನಿವಾಸಿಗಳು ನಿರಾಶ್ರಿತರಾಗಲು ಕಾರಣರು ಯಾರು? ಪಂಜಾಬ್‍ನಲ್ಲಿ ಭಿಂದ್ರನ್‍ವಾಲೆಯನ್ನು ಬೆಳೆಸಿ, ಖಲಿಸ್ಥಾನ್ ಚಳವಳಿಗೆ ಶಕ್ತಿ ಕೊಟ್ಟ ವ್ಯಕ್ತಿ ಮತ್ತು ಪಕ್ಷ ಯಾವುದು? ದಕ್ಷಿಣದಲ್ಲಿ ಎಲ್‍ಟಿಟಿಇಯಂಥ ಭಯೋತ್ಪಾದಕ ಸಂಘಟನೆಗೆ ಶಕ್ತಿ ಕೊಟ್ಟು, ಅದನ್ನು ಬೆಳೆಸಿದ ಪಕ್ಷ ಯಾವುದು?- ಇದೆಲ್ಲದಕ್ಕೂ ಉತ್ತರ ಹುಡುಕಿದರೆ ಕಾಂಗ್ರೆಸ್ ಪಕ್ಷ, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಕಣ್ಮುಂದೆ ಬರುತ್ತಾರೆ. ಇವರೆಲ್ಲರೂ ನಿಮ್ಮ ಕಾಂಗ್ರೆಸ್ ಪಕ್ಷದವರು. ಇವರ್ಯಾರೂ ಆರ್​ಎಸ್​ಎಸ್​ ನವರಲ್ಲ ಎಂದು ಸಿ ಟಿ ರವಿ ತಿರುಗೇಟು ನೀಡಿದರು.

ಇದನ್ನೂ ಓದಿ: ಕಡತದಿಂದ ಭಾಷಣ ಕಡಿತ: ಲೋಕಸಭಾ ಸ್ಪೀಕರ್​ಗೆ ರಾಹುಲ್ ​ಗಾಂಧಿ ಪತ್ರ - Rahul Writes To Lok Sabha Speaker

ಸರ್ವಾಧಿಕಾರದ ಕಾರಣಕ್ಕೆ ತುರ್ತು ಪರಿಸ್ಥಿತಿ: 1975ರಲ್ಲಿ ತುರ್ತು ಪರಿಸ್ಥಿತಿ ಹೇರಿ, 1.20 ಲಕ್ಷಕ್ಕೂ ಹೆಚ್ಚು ಜನರನ್ನು ಮೀಸಾ ಬಂಧಿಗಳನ್ನಾಗಿ ಮಾಡಿ, ಮೂರೂವರೆ ಸಾವಿರಕ್ಕೂ ಹೆಚ್ಚು ಪತ್ರಕರ್ತರನ್ನು ಮೀಸಾ ಬಂಧಿಗಳನ್ನಾಗಿ ಮಾಡಿ, ನಾಗರಿಕ ಹಕ್ಕುಗಳನ್ನು ದಮನ ಮಾಡಿ, ಸಂವಿಧಾನವನ್ನು ಬುಡಮೇಲು ಮಾಡಿ, ಸರ್ವಾಧಿಕಾರ ಹೇರಿದ ಪಕ್ಷ ಯಾವುದು ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದರು. ಇದಕ್ಕೆ ಆರೆಸ್ಸೆಸ್ ಕಾರಣವೇ ಅಥವಾ ನಿಮ್ಮ ಮುತ್ತಜ್ಜಿಯ ಸ್ವಾರ್ಥ, ದುರಾಸೆ, ಸರ್ವಾಧಿಕಾರದ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಿದರೇ? ಹುಡುಕಿದಾಗ ಇದಕ್ಕೆ ನಿಮ್ಮ ಅಜ್ಜಿಯೇ (ಇಂದಿರಾ ಗಾಂಧಿ), ನಿಮ್ಮ ಪಾರ್ಟಿಯೇ ಕಾರಣ ಎಂಬ ಉತ್ತರ ಲಭಿಸುತ್ತದೆ ಎಂದು ಟೀಕಿಸಿದರು.

1984ರಲ್ಲಿ ದೆಹಲಿ ಮತ್ತು ದೇಶದ ಅನೇಕ ಕಡೆ ನಡೆದ ಸಿಖ್ಖರ್ ಮೇಲಿನ ದೌರ್ಜನ್ಯವನ್ನು ಆರೆಸ್ಸೆಸ್ ಮಾಡಿದ್ದಲ್ಲ. ನಿಮ್ಮ ಪಾರ್ಟಿಯ ಇಂದಿರಾ ಬ್ರಿಗೇಡ್‍ನವರು, ಯೂತ್ ಕಾಂಗ್ರೆಸ್ಸಿನವರು, ಎನ್‍ಎಸ್‍ಯುಐ, ನಿಮ್ಮ ಕುಟುಂಬದ ಗುಲಾಮರಂತೆ ವರ್ತಿಸುವ ಜನರ ದಬ್ಬಾಳಿಕೆ ಅದು. ಆರೆಸ್ಸೆಸ್ ಮಾಡಿದ್ದಲ್ಲ ಎಂದು ಬಿಜೆಪಿ ವಿಧಾನ ಪರಿಷತ್​ ಸದಸ್ಯ ಸಿ ಟಿ ರವಿ ಹರಿಹಾಯ್ದರು.

ಇದನ್ನೂ ಓದಿ: ಕಳೆದ 10 ವರ್ಷಗಳಲ್ಲಿ ದೇಶ 'ಸಬ್​ ಕಾ ಸಾಥ್, ಸಬ್​ ಕಾ ವಿಕಾಸ' ಕಂಡಿದೆ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ - Modi speech in Lok Sabha

ETV Bharat Logo

Copyright © 2024 Ushodaya Enterprises Pvt. Ltd., All Rights Reserved.