ETV Bharat / state

ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್‌ ಧ್ವಜ ಹಾರಾಟದ ಬಗ್ಗೆ ಸಮಗ್ರ ತನಿಖೆಯಾಗಬೇಕು : ಸಿ.ಟಿ. ರವಿ - MLC C T RAVI - MLC C T RAVI

ಕಾಫಿ ನಾಡಲ್ಲಿ ದುಷ್ಕರ್ಮಿಗಳು ಪ್ಯಾಲೆಸ್ತೀನ್​ ಧ್ವಜ ಹಾರಿಸಿದ ವಿಡಿಯೋ ವೈರಲ್​ ಆಗಿರುವ ಬಗ್ಗೆ ವಿಧಾನ ಪರಿಷತ್​ ಸದಸ್ಯ ಸಿ ಟಿ ರವಿ ಖಂಡಿಸಿದ್ದಾರೆ. ಅಲ್ಲದೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

C.T.RAVI
ಸಿ.ಟಿ. ರವಿ (ETV Bharat)
author img

By ETV Bharat Karnataka Team

Published : Sep 16, 2024, 1:28 PM IST

Updated : Sep 16, 2024, 3:37 PM IST

ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್‌ ಧ್ವಜ ಹಾರಾಟದ ಬಗ್ಗೆ ಸಮಗ್ರ ತನಿಖೆಯಾಗಬೇಕು : ಸಿ.ಟಿ. ರವಿ (ETV Bharat)

ಮೈಸೂರು : ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್‌ ಧ್ವಜ ಹಾರಾಟ ಮಾಡಿದವರಿಗೆ ಕುಮ್ಮಕ್ಕು ಕೊಟ್ಟವರು ಯಾರು ಎಂಬ ವಿಚಾರದಲ್ಲಿ ಸಮಗ್ರ ತನಿಖೆಯಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ. ಟಿ. ರವಿ ಒತ್ತಾಯಿಸಿದರು.

ಇಂದು ನಗರದ ಖಾಸಗಿ ಹೋಟೆಲ್‌ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ಯಾಲೆಸ್ತೀನ್‌ ಧ್ವಜ ಹಾರಾಟದ ಬಗ್ಗೆ ಪ್ರತಿಕ್ರಿಯಿಸಿದರು. ರಾಷ್ಟ್ರಧ್ವಜ ಇವರ ಕೈಯಲ್ಲಿ ಇಲ್ಲ. ಇವರುಗಳಿಗೆ ಅಷ್ಟೊಂದು ಪ್ರೀತಿಯಿದ್ದರೆ ಪ್ಯಾಲೆಸ್ತೀನ್‌ ಅಥವಾ ಪಾಕಿಸ್ತಾನಕ್ಕೆ ಹೋಗಲಿ. ಅಲ್ಲಿ ಹೋರಾಟ ಮಾಡಿ ಸಾಯಲಿ. ಅದನ್ನ ಬಿಟ್ಟು ಇಲ್ಲಿ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಸರಿಯಲ್ಲ ಎಂದರು.

''ಮಂಗಳೂರಿನಲ್ಲಿ ಸನಾತನ ಧರ್ಮದ ಬಗ್ಗೆ ಸವಾಲು ಹಾಕಿದ್ದಾರೆ. ಆ ಸವಾಲನ್ನು ಸ್ವೀಕರಿಸಿಯೇ ನಾವು ದೇಶದಲ್ಲಿ ಸನಾತನ ಧರ್ಮವನ್ನು ಉಳಿಸಿಕೊಂಡಿದ್ದೇವೆ. ಈಗಲೂ ಸನಾತನ ಧರ್ಮದ ಬಗ್ಗೆ ಹಾಕಿರುವ ಸವಾಲನ್ನ ಸ್ವೀಕರಿಸಿದ್ದೇವೆ. ಸನಾತನ ಧರ್ಮದ ಮೇಲೆ ದಾಳಿ ಮಾಡಿದ ಘಜಿನಿ ಮೊಹಮ್ಮದ್​, ಘೋರಿ, ಟಿಪ್ಪು ಸುಲ್ತಾನ್​ ಎಲ್ಲಾರು ಮುಗಿದು ಹೋಗಿದ್ದಾರೆ. ಮತಾಂಧತೆಗೆ ಕುಮ್ಮಕ್ಕು ನೀಡುವ ಕಾಂಗ್ರೆಸ್‌ ಬದಲಾಗಬೇಕು. ಇಲ್ಲದಿದದ್ದರೆ ನಮ್ಮ ದೇಶಕ್ಕೆ ಉಳಿಗಾಲವಿಲ್ಲ. ಕಾಂಗ್ರೆಸ್‌ ನೀತಿ ಅಪಾಯಕಾರಿ'' ಎಂದು ಹೇಳಿದರು.

ಎನ್‌ ಐ ಎ ತನಿಖೆಗೆ ವಹಿಸಿ; ''ನಾಗಮಂಗಲದಲ್ಲಿ ಗಣೇಶ ನಿಮಜ್ಜನೆ ಸಂದರ್ಭದಲ್ಲಿ ಆದ ಗಲಭೆಯ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಈ ಗಲಭೆಯಲ್ಲಿ ಕೇರಳದ ಇಬ್ಬರು ಆರೆಸ್ಟ್‌ ಆಗಿರುವ ಬಗ್ಗೆ ಓದಿದ್ದೇನೆ. ಇದೊಂದು ಗಂಭೀರ ವಿಚಾರ, ಇವರ ಉದ್ದೇಶ ಭಯ ಹುಟ್ಟಿಸಿ, ಸಮಾಜ ಒಡೆಯುವುದು. ಗಲಾಟೆ ಸಂದರ್ಭದಲ್ಲಿ ಪೆಟ್ರೋಲ್‌ ಬಾಂಬ್‌ ಹಾಗೂ ಕಲ್ಲುಗಳನ್ನು ಇಟ್ಟುಕೊಂಡು ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಇದೊಂದು ಪೂರ್ವನಿಯೋಜಿತ ಕೃತ್ಯ, ಇಂತಹ ಘಟನೆಯನ್ನ ಗೃಹ ಸಚಿವರು ಸಣ್ಣ ಘಟನೆ ಎನ್ನುತ್ತಾರೆ. ಈ ಬಗ್ಗೆ ಕಾಂಗ್ರೆಸ್‌ ನವರ ಮನಸ್ಥಿತಿ ಬದಲಾಗಬೇಕು ಹಾಗೂ ನಾಗಮಂಗಲ ಗಲಾಟೆಯಲ್ಲಿ ಕೇರಳದವರ ಇಬ್ಬರ ಬಂಧನ ಹಾಗೂ ಕೆಲವು ಸಂಘಟನೆಗಳ ಪಾತ್ರದ ಬಗ್ಗೆ ತನಿಖೆಯನ್ನ ಎನ್‌ಐಎಗೆ ವಹಿಸಬೇಕು'' ಎಂದು ಸಿ.ಟಿ. ರವಿ ಆಗ್ರಹಿಸಿದರು.

ಟೂಲ್​ ಕಿಟ್​ ಕೈವಾಡ; ''ಮುನಿರತ್ನ ಆಡಿಯೋ ಪ್ರಕರಣದ ಹಿಂದೆ ಟೂಲ್‌ ಕಿಟ್‌ ಕೆಲಸ ಮಾಡಿದೆ. ಇದು ಹನುಮಂತಪ್ಪ ಆಡಿಯೋ ದಿಂದ ಬಹಿರಂಗವಾಗಿದೆ. ಕಾಂಗ್ರೆಸ್‌ ನವರು ನಮಗೊಂದು ನ್ಯಾಯ, ಬಿಜೆಪಿಯವರಿಗೊಂದು ನ್ಯಾಯ ಅನ್ನೋ ನೀತಿ ಅನುಸರಿಸುತ್ತಿದ್ದಾರೆ. ಮುನಿರತ್ನ ಅವರ ಮೇಲೆ ಎಫ್‌ಐಆರ್‌ ದಾಖಾಲಾದ ದಿನವೇ ಬಂಧಿಸಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು ಎಫ್‌ಎಸ್‌ಐಎಲ್‌ ವರದಿ ಬರುವ ಮುನ್ನವೇ ಮುನಿರತ್ನ ಬಂಧನ ಸರಿಯಲ್ಲ. ಕಾಂಗ್ರೆಸ್​ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ'' ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಬೈಕ್​ ರೈಡ್​: ಆರೋಪಿಗಳ ಬಂಧನಕ್ಕೆ ಪೊಲೀಸ್​ ತಂಡ ರಚನೆ - PALESTINIAN FLAG

ಇಬ್ಬರು ಅಪ್ರಾಪ್ತರು ವಶಕ್ಕೆ: ಪ್ಯಾಲೆಸ್ತೀನ್‌ ಧ್ವಜ ಹಿಡಿದು ಓಡಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ಯಾಲೆಸ್ತೀನ್‌ ಧ್ವಜ ಹಾಗೂ ಅಪ್ರಾಪ್ತರು ಬಳಸಿದ್ದ ಸ್ಕೂಟಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ ಎಂದು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Last Updated : Sep 16, 2024, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.