ETV Bharat / state

ಎಲ್ಲ ಶಾಸಕರ ಮನಸ್ಸಿನಲ್ಲೂ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂಬ ಆಶಯವಿದೆ: ಶಾಸಕ ಶಿವಗಂಗಾ ಬಸವರಾಜ್ - Shivaganga Basavaraj - SHIVAGANGA BASAVARAJ

ಡಿ.ಕೆ.ಶಿವಕುಮಾರ್ ಅವರು ನೂರಕ್ಕೆ ನೂರು ರಾಜ್ಯದ ಸಿಎಂ ಆಗುತ್ತಾರೆ ಎಂದು ಚನ್ನಗಿರಿ ಕಾಂಗ್ರೆಸ್​ ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದ್ದಾರೆ.

mla-shivaganga-basavaraj
ಶಾಸಕ ಶಿವಗಂಗಾ ಬಸವರಾಜ್ (ETV Bharat)
author img

By ETV Bharat Karnataka Team

Published : Jun 28, 2024, 8:30 PM IST

ಶಾಸಕ ಶಿವಗಂಗಾ ಬಸವರಾಜ್ ಪ್ರತಿಕ್ರಿಯೆ (ETV Bharat)

ದಾವಣಗೆರೆ: ಜಾತಿಗೊಂದು ಡಿಸಿಎಂ ಮಾಡಲಿ ಎಂದು ಸಚಿವರು ಹೇಳ್ತಿದ್ದಾರೆ. ಮೂರು ಡಿಸಿಎಂ‌ ಅಲ್ಲ ಒಂದು ಡಜನ್ ಡಿಸಿಎಂ ಮಾಡಿ. ಮೊದಲು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಲಿ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಅವರು, ಡಿಕೆಶಿ ಅವರು ಸಿಎಂ ಆಗಲೆಂದು ನಾನೊಬ್ಬ ಹೇಳ್ತಿಲ್ಲ. ಚಂದ್ರಶೇಖರನಾಥ ಸ್ವಾಮೀಜಿ ಕೂಡ ಧ್ವನಿಗೂಡಿಸಿದ್ದಾರೆ. ಎಲ್ಲಾ ಶಾಸಕರ ಮನಸ್ಸಿನಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂಬ ಆಶಯವಿದೆ. ಆದರೆ ಕೆಲವು ಶಾಸಕರು ಮಾತನಾಡಲ್ಲ, ನಾನು ಮಾತನಾಡ್ತೀನಿ ಎಂದರು.

ಸಿಎಂ ಸಿದ್ದರಾಮಯ್ಯ ಅವರು ಚೆನ್ನಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ, ಡಿಸಿಎಂ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಕೆಲವು ಸಚಿವರು ಮೂರು ಡಿಸಿಎಂ ಮಾಡಿ, ಜಾತಿಗೊಂದು ಡಿಸಿಎಂ ಮಾಡಿ ಎಂದೆಲ್ಲಾ ಹೇಳ್ತಿದ್ದಾರೆ ಎಂದು ಹೇಳಿದರು.

ಮಾಧ್ಯಮದವರ ಮುಂದೆ ಯಾರೂ ಮಾತನಾಡ್ಬೇಡಿ ಎಂದು ಹೈಕಮಾಂಡ್ ಹೇಳಿತ್ತು. ಆದ್ದರಿಂದ‌ ನಾವು ಸುಮ್ಮನೆ ಇದ್ವಿ. ಆದರೆ ಇದೇ ಸಚಿವರು ಡಿಸಿಎಂ ಸೃಷ್ಟಿ ವಿಚಾರ ತೆಗೆದಿದ್ದಾರೆ. ನಾನೂ ಕೂಡ ಪಕ್ಷದ ಶಾಸಕ. ಪಕ್ಷದ ಅಳಿವು ಉಳಿವಿನ ಬಗ್ಗೆ ಏನು ಮಾತಾಡ್ಬೇಕೋ ಮಾತನಾಡುತ್ತಿದ್ದೇನೆ ಎಂದರು.

ಇದನ್ನೂ ಓದಿ: ಸ್ವಾಮೀಜಿ ಹೇಳಿದ್ರೆ ಸಿಎಂ ಬದಲಾವಣೆ ಮಾಡಲು ಆಗುವುದಿಲ್ಲ : ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ - MLA Shamanur Shivashankarappa

ETV Bharat Logo

Copyright © 2025 Ushodaya Enterprises Pvt. Ltd., All Rights Reserved.