ETV Bharat / state

44ನೇ ರೈತ ಹುತಾತ್ಮ ದಿನಾಚರಣೆ; ರೈತ ಹುತಾತ್ಮ ಸ್ಮಾರಕಕ್ಕೆ ಶಾಸಕ ಕೋನರೆಡ್ಡಿ ಸೇರಿ ಹಲವರಿಂದ ಗೌರವ ನಮನ - tribute to the Farmer Martyrs - TRIBUTE TO THE FARMER MARTYRS

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿರುವ ರೈತ ಹುತಾತ್ಮ ಸ್ಮಾರಕಕ್ಕೆ ಶಾಸಕ ಎನ್ ಹೆಚ್​ ಕೋನರೆಡ್ಡಿ ಸೇರಿದಂತೆ ನೂರಾರು ಮುಖಂಡರು ಗೌರವ ನಮನ ಸಲ್ಲಿಸಿದ್ದಾರೆ.

Farmer leaders
ರೈತ ಮುಖಂಡರು (ETV Bharat)
author img

By ETV Bharat Karnataka Team

Published : Jul 21, 2024, 9:50 PM IST

ಶಾಸಕ ಕೋನರೆಡ್ಡಿ (ETV Bharat)

ಧಾರವಾಡ : 44ನೇ ರೈತ ಹುತಾತ್ಮ ದಿನಾಚರಣೆ ಹಿನ್ನೆಲೆ ನವಲಗುಂದ ರೈತ ಹುತಾತ್ಮ ಸ್ಮಾರಕಕ್ಕೆ ಶಾಸಕ ಎನ್. ಹೆಚ್ ಕೋನರೆಡ್ಡಿ, ಪರಿಸರವಾದಿ ಸುರೇಶ ಹೆಬ್ಳೀಕರ್ ಸೇರಿದಂತೆ ವಿವಿಧ ರೈತ ಮುಖಂಡರು ಗೌರವ ನಮನ ಸಲ್ಲಿಸಿದರು.

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿರುವ ರೈತ ಹುತಾತ್ಮ ಸ್ಮಾರಕದ ಬಳಿ ಜಮಾಯಿಸಿದ ನೂರಾರು ಮುಖಂಡರು ಹಾಗೂ ಅನ್ನದಾತರು ಹುತಾತ್ಮರಾದ ರೈತರನ್ನು ಸ್ಮರಿಸಿದರು.

ಬಳಿಕ ರೈತರ ಮೆರವಣಿಗೆ ನಡೆಯಿತು. ಮೆರವಣಿಗೆ ನವಲಗುಂದದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ಹುತಾತ್ಮ ರೈತರನ್ನು ನೆನೆದ ಅನ್ನದಾತರು ರೈತರ ಎಲ್ಲಾ ಸಮಸ್ಯೆಗಳನ್ನು ಆಲಿಸಿ, ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಪ್ರಲ್ಹಾದ್​ ಜೋಶಿ ಕೇಂದ್ರದ ಮೇಲೆ ಒತ್ತಡ ತರಬೇಕು: ಬಳಿಕ ನವಲಗುಂದ ಶಾಸಕ ಎನ್. ಹೆಚ್‌ ಕೋನರೆಡ್ಡಿ ಮಾತನಾಡಿ, ನಮ್ಮದು ಹೋರಾಟದ ಕಿಚ್ಚಿನ ನಾಡು. ಮಹದಾಯಿ ಮುಂದಿನ ವರ್ಷದೊಳಗೆ ಆಗಬೇಕು. ಇದಕ್ಕಾಗಿ ನಾವು ಹೋರಾಟದ ಸಂಕಲ್ಪ ಮಾಡುತ್ತೇವೆ. ವನ್ಯಜೀವಿ ಮಂಡಳಿ ನೆಪವನ್ನು ಕೇಂದ್ರ ಸರ್ಕಾರ ಹೇಳುತ್ತಿದೆ. ರಾಜ್ಯದ ಎಲ್ಲ ಸಂಸದರಿಗೂ ಮನವಿ ಮಾಡಿಕೊಳ್ಳುತ್ತೇವೆ. ಹಿಂದೆ ದಿ‌‌. ಅನಂತಕುಮಾರ ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದ್ದರು. ಈಗ ಆ ಜವಾಬ್ದಾರಿಯನ್ನು ಕೇಂದ್ರ ಸಚಿವರಾಗಿರುವ ಧಾರವಾಡ ಜಿಲ್ಲೆಯ ಸಂಸದ ಪ್ರಲ್ಹಾದ್ ಜೋಶಿ ಅವರು ತೆಗೆದುಕೊಳ್ಳಬೇಕು. ಮಹದಾಯಿಗೆ ಕ್ಲಿಯರೆನ್ಸ್ ಕೊಡಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಶಂಕರ್ ಅಂಬಲಿ‌ ಮಾತನಾಡಿ, ಮಹದಾಯಿಗಾಗಿ ಮುಂದಿನ ಹೋರಾಟ ಉಗ್ರವಾಗಲಿದೆ. ರೈತರು ಪ್ರಾಣ ಕಳೆದುಕೊಂಡಿದ್ದೇವೆ. ಆದರೆ ರೈತರ ಸಮಸ್ಯೆಗಳು ಮಾತ್ರ ಜೀವಂತ ಆಗಿವೆ. ಮಹದಾಯಿ ಬೇಡಿಕೆ ಇನ್ನೂ ಹೀಗೆ ಇದೆ. ರೈತ ಸಂಘಟನೆಗಳು ಮಹದಾಯಿಗಾಗಿ ಮಹಾವೇದಿಕೆ ಅಡಿ ಹೋರಾಟ ಮಾಡುತ್ತೇವೆ. ಮಹದಾಯಿ ಬೇಡಿಕೆ ಶೀಘ್ರ ಈಡೇರಿಸಲು ಒತ್ತಡ ಹಾಕುತ್ತೇವೆ ಎಂದರು.

ಪ್ರಹ್ಲಾದ್ ಜೋಶಿ ಚುನಾವಣೆ ಬಳಿಕ ಈಡೇರಿಸುತ್ತೇವೆ ಎಂದಿದ್ದರು. ಆದರೆ ಈಗಲೂ ಮೀನಾಮೇಷ ಎಣಿಸುತ್ತಿದ್ದಾರೆ. ಇವತ್ತು ಹುತಾತ್ಮ ದಿನಾಚರಣೆಯಲ್ಲಿ ಹೋರಾಟದ ರೂಪುರೇಷೆ ನಿರ್ಣಯಿಸುತ್ತೇವೆ, ಮುಂದಿನ ಪ್ರತಿಭಟನೆ ಉಗ್ರವಾಗಿ ಇರಲಿದೆ. ಅದಕ್ಕೆ ಸಂಬಂಧಿಸಿದಂತೆಯೇ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಎಲ್ಲ ರೈತ ಸಂಘಟನೆಗಳು ಒಗ್ಗೂಡಿ ಮಹದಾಯಿ ಹೋರಾಟ ಮಾಡುತ್ತೇವೆ. ರಾಜ್ಯಾದ್ಯಂತ ಎಲ್ಲ ಸಂಘಟನೆಗಳು ಹೋರಾಟಕ್ಕೆ ಕೈ ಜೋಡಿಸಲಿವೆ ಎಂದು ಹೇಳಿದರು.

ಇದನ್ನೂ ಓದಿ : ಹಾವೇರಿ: ರೈತ ಹುತಾತ್ಮ ದಿನಾಚರಣೆ - Farmer Martyrs Day

ETV Bharat Logo

Copyright © 2025 Ushodaya Enterprises Pvt. Ltd., All Rights Reserved.