ETV Bharat / state

ಮಾರ್ಚ್​ 11, 12 ರಂದು ಐತಿಹಾಸಿಕ ಆನೆಗೊಂದಿ ಉತ್ಸವ: ಶಾಸಕ ಜನಾರ್ದನ ರೆಡ್ಡಿ - MLA janardana Reddy

ಆನೆಗೊಂದಿ ಉತ್ಸವ ಆಚರಣೆ ದಿನಾಂಕವನ್ನು ಶಾಸಕ ಜನಾರ್ದನ ರೆಡ್ಡಿ ಘೋಷಿಸಿದರು. ಸರ್ಕಾರ 3 ಕೋಟಿ ರೂಪಾಯಿ ಅನುದಾನ ನೀಡಲಿದೆ ಎಂದು ತಿಳಿಸಿದರು.

ಆನೆಗೊಂದಿ ಉತ್ಸವ
ಆನೆಗೊಂದಿ ಉತ್ಸವ
author img

By ETV Bharat Karnataka Team

Published : Feb 18, 2024, 7:13 AM IST

ಗಂಗಾವತಿ: ಆನೆಗೊಂದಿ ಉತ್ಸವವನ್ನು ಮಾರ್ಚ್​ 11 ಮತ್ತು 12 ರಂದು ಅದ್ಧೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ. ವಿಜಯನಗರದ ಮೊದಲ ರಾಜಧಾನಿಯಾದ ಐತಿಹಾಸಿಕ ಪ್ರಾಮುಖ್ಯದ ಆನೆಗೊಂದಿಯಲ್ಲಿ ಈ ಬಾರಿ ಉತ್ಸವ ಮತ್ತಷ್ಟು ಕಳೆಗಟ್ಟಲಿದೆ ಎಂದು ಶಾಸಕ ಜಿ. ಜನಾರ್ದರೆಡ್ಡಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಅನುಮತಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಮ್ಮತಿ ಸೂಚಿಸಿದ್ದಾರೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೆರವು ನೀಡುವ ಭರವಸೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಉತ್ಸವಕ್ಕೆ ಸುಮಾರು 2 ರಿಂದ 3 ಕೋಟಿ ರೂಪಾಯಿ ಅನುದಾನ ಸಿಗಲಿದ್ದು, ಅದ್ಧೂರಿಯಾಗಿ ಉತ್ಸವ ಆಚರಣೆ ಮಾಡುವ ಸಂಬಂಧ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದರು.

ಉತ್ಸವದ ಉದ್ಘಾಟನೆ, ಸಮಾರೋಪಕ್ಕೆ ಯಾರನ್ನು ಕರೆಯಬೇಕು. ವೇದಿಕೆ ಕಾರ್ಯಕ್ರಮಕ್ಕೆ ಯಾವೆಲ್ಲಾ ಕಲಾವಿದರನ್ನು ಕರೆಯಿಸಬೇಕು ಎಂಬುವುದರ ಬಗ್ಗೆ ಶೀಘ್ರವೇ ಪಟ್ಟಿ ತಯಾರಿಸಲಾಗುವುದು. ಆನೆಗೊಂದಿ ಉತ್ಸವಕ್ಕೆ ಲೋಕಸಭಾ ಚುನಾವಣೆಯ ಅಧಿಸೂಚನೆ ಅಥವಾ ನೀತಿ ಸಂಹಿತೆ ಪರಿಣಾಮ ಬೀರದು ಎಂದರು.

ಕಿಷ್ಕಿಂಧಾ ಜಿಲ್ಲೆಯ ಪ್ರಸ್ತಾಪ: ಕಿಷ್ಕಿಂಧಾ ಜಿಲ್ಲೆ ರಚನೆಯ ಬಗ್ಗೆ ಮಾತನಾಡಿದ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಸಂದರ್ಭದಲ್ಲಿಯೇ ಕಿಷ್ಕಿಂಧಾ ಜಿಲ್ಲೆಯ ಬಗ್ಗೆ ಪ್ರಸ್ತಾಪ ಮಾಡುವ ಉದ್ದೇಶವಿತ್ತು. ಆದರೆ, ತಾಂತ್ರಿಕ ಕಾರಣಕ್ಕೆ ಸಾಧ್ಯವಾಗಿಲ್ಲ. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಖಚಿತವಾಗಿ ಪ್ರಸ್ತಾಪಿಸುತ್ತೇನೆ. ರಾಜ್ಯದಲ್ಲಿ ಕಿಷ್ಕಿಂಧಾ, ಚಿಕ್ಕೋಡಿ, ಮಧುಗಿರಿ ಸೇರಿದಂತೆ ಇನ್ನು ಮೂರು-ನಾಲ್ಕು ಹೊಸ ಜಿಲ್ಲೆಗಳ ರಚನೆಯ ಬಗ್ಗೆ ಬೇಡಿಕೆ ಬಂದಿದೆ ಎಂದು ತಿಳಿಸಿದರು.

ಬಜೆಟ್​ ಸಭೆಯಲ್ಲಿ ಹೊಸ ಜಿಲ್ಲೆಗಳ ರಚನೆಯ ಪ್ರಸ್ತಾಪಗಳು ಸರ್ಕಾರದ ಕಾರ್ಯದರ್ಶಿ ಬಳಿ ಇದ್ದವು. ಆದರೆ, ಅದು ಸಭೆಯ ಕೊನೆಯಲ್ಲಿ ಈ ವಿಷಯ ಚರ್ಚೆಯಿಂದ ಹೊರಗುಳಿಯಿತು. ಹೀಗಾಗಿ, ಕಿಷ್ಕಿಂಧಾ ಜಿಲ್ಲೆಯ ಬಗ್ಗೆ ಪ್ರಸ್ತಾಪಿಸಲು ಸಾಧ್ಯವಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಹೊಸ ಜಿಲ್ಲೆಯ ಬಗ್ಗೆ ಪ್ರಸ್ತಾಪಿಸಿ ಸಿಎಂ ಗಮನ ಸೆಳೆಯುತ್ತೇನೆ ಎಂದು ರೆಡ್ಡಿ ಹೇಳಿದರು.

ಕ್ಷೇತ್ರಕ್ಕೆ ಹೆಚ್ಚಿನ ಅನುದಾನ: ಬಜೆಟ್​​ನಲ್ಲಿ ಗಂಗಾವತಿ ಕ್ಷೇತ್ರಕ್ಕೆ ನೂರಾರು ಕೋಟಿ ರೂಪಾಯಿ ಮೊತ್ತದ ಹೆಚ್ಚಿನ ಅನುದಾನ ಸಿಕ್ಕಿದೆ. ಯಾವ ವಲಯಕ್ಕೆ ಎಷ್ಟು ಸಿಕ್ಕಿದೆ ಎಂದು ಶೀಘ್ರ ಮಾಹಿತಿ ನೀಡಲಾಗುವುದು. ಅಂಜನಾದ್ರಿಯ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕ್ಷೇತ್ರದ ಕೆರೆಗಳನ್ನು ತುಂಬಿಸಲು 240 ಕೋಟಿ ರೂಪಾಯಿ ಮೊತ್ತದ ಅನುದಾನ ನೀಡಲಾಗಿದೆ. ಶಿಕ್ಷಣ, ಆರೋಗ್ಯ, ರಸ್ತೆ, ಪರಿಶಿಷ್ಟ ವರ್ಗದ ಕಲ್ಯಾಣ ಸೇರಿದಂತೆ ನಾನಾ ಯೋಜನೆಗಳಲ್ಲಿ ಸಾಕಷ್ಟು ಪ್ರಮಾಣದ ಅನುದಾನ ಬಜೆಟ್​ನಲ್ಲಿ ಮೀಸಲಿಡಲಾಗಿದೆ. ಕ್ಷೇತ್ರಕ್ಕೆ ಅಗತ್ಯವಿದ್ದಲ್ಲಿ ಹೆಚ್ಚುವರಿ ವಿಶೇಷ ಅನುದಾನ ಮಂಜೂರಿಗೂ ಪ್ರಯತ್ನಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದಲೂ ಹೆಚ್ಚುವರಿ ಅನುದಾನ ಗಂಗಾವತಿಗೆ ಸಿಗಲಿದೆ ಎಂದು ಶಾಸಕ ಜನಾರ್ದರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೊಂದಾಣಿಕೆ ಆಗುವುದಾದರೆ ನನ್ನ ಮೊದಲ ಆದ್ಯತೆ ಬಿಜೆಪಿಗೆ: ಗಾಲಿ ಜನಾರ್ದನ ರೆಡ್ಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.