ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್, ಹಾಗೂ ಬಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ ದತ್ತ ಜಯಂತಿ ನಿಮಿತ್ತ ನಗರದಲ್ಲಿ ಶೋಭಾಯಾತ್ರೆ ಜರುಗಿತು.
ನಗರದ ಕಾಮಧೇನು ಗಣಪತಿ ದೇವಸ್ಥಾನದಿಂದ ಆರಂಭವಾದ ಶೋಭಾ ಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ದತ್ತಭಕ್ತರು ಭಾಗವಹಿಸಿದರು. ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕೂಡ ದತ್ತ ಭಕ್ತರೊಂದಿಗೆ ಹೆಜ್ಜೆ ಹಾಕಿದರು. ಯಾತ್ರೆಯಲ್ಲಿ ವೀರಗಾಸೆ ಕತ್ತಿ ಹಿಡಿದ ಸಿ.ಟಿ. ರವಿ ಮೇಲಿಂದ ಎಸೆದ ತೆಂಗಿನಕಾಯಿ, ನಿಂಬೆಹಣ್ಣನ್ನು ಅದೇ ಕತ್ತಿಯಿಂದ ಬೀಸಿದರು.
ಸಾವಿರಾರು ಭಕ್ತರು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು, ಇವರೊಂದಿಗೆ ರಸ್ತೆ ಉದ್ಧಕ್ಕೂ ಯುವಜನತೆ ಕುಣಿಯುತ್ತಾ ಸಾಗಿದ್ದು ವಿಶೇಷವಾಗಿತ್ತು.
ಮನೆ ಮನೆಗೆ ತೆರಳಿ ಸಿಟಿ ರವಿ ಭಿಕ್ಷಾಟನೆ: ಶಾಸಕರು ನಗರದ ನಾರಯಣಪುರ, ರಾಘವೇಂದ್ರ ಮಠದ ರಸ್ತೆ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಬಿಕ್ಷಾಟಣೆ ನಡೆಸಿದರು. ಈ ಮೂಲಕ ಮಾಲಾಧಾರಿಗಳಿಂದ ಪಡಿ ಸಂಗ್ರಹ ಮಾಡಲಾಯಿತು. ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವೀಳ್ಯದೆಲೆ ಅಡಿಕೆ - ಬೆಲ್ಲವನ್ನು ಸ್ಥಳೀಯರು ನೀಡಿದರು. ಇಂದು ಇರುಮುಡಿ ರೂಪದಲ್ಲಿ ದತ್ತಾತ್ರೇಯ ಸ್ವಾಮಿಗೆ ಇದೆಲ್ಲವನ್ನು ಅರ್ಪಣೆ ಮಾಡಲಾಗುವುದು. ಹಾಗೇ ಇಂದು 'ಇನಾಂ ದತ್ತಾತ್ರೇಯ' ಪೀಠದಲ್ಲಿ ದತ್ತಜಯಂತಿ ಅದ್ಧೂರಿಯಾಗಿ ಜರುಗಲಿದೆ.
ಇದನ್ನೂ ಓದಿ: ಚಿಕ್ಕಮಗಳೂರು: 'ಅನುಸೂಯ ಜಯಂತಿ'ಗೆ ಚಾಲನೆ; ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಭಾಗಿ