ETV Bharat / state

"ಕಾವೇರಿಯ ಹಿತಾಸಕ್ತಿಗಿಂತ ಹೆಚ್​ಡಿಕೆಗೆ ಬಾಡೂಟವೇ ಮುಖ್ಯ": ಶಾಸಕ ಬಾಲಕೃಷ್ಣ ಟೀಕೆ - HC Balakrishna - HC BALAKRISHNA

ಕಾವೇರಿ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಚುನಾವಣೆಗಿಂತ ಮುಂಚೆ ಮತದಾರರಿಗೆ ಕೊಟ್ಟ ಮಾತು ಕುಮಾರಸ್ವಾಮಿ ಅವರು ಮರೆತಿದ್ದಾರೆ. ಅವರಿಗೆ ಕಾವೇರಿಯ ಹಿತಾಸಕ್ತಿಗಿಂತ ಬಾಡೂಟವೇ ಮುಖ್ಯ ಆಯ್ತು ಎಂದು ಶಾಸಕ ಬಾಲಕೃಷ್ಣ ಟೀಕಿಸಿದ್ದಾರೆ.

ಶಾಸಕ ಬಾಲಕೃಷ್ಣ
ಶಾಸಕ ಬಾಲಕೃಷ್ಣ (ETV Bharat)
author img

By ETV Bharat Karnataka Team

Published : Jul 15, 2024, 1:41 PM IST

"ಕಾವೇರಿಯ ಹಿತಾಸಕ್ತಿಗಿಂತ ಹೆಚ್​ಡಿಕೆಗೆ ಬಾಡೂಟವೇ ಮುಖ್ಯ": ಶಾಸಕ ಬಾಲಕೃಷ್ಣ ಟೀಕೆ (ETV Bharat)

ಬೆಂಗಳೂರು: 'ಹೆಚ್​ಡಿಕೆ ಮುಖ ಅನಾವರಣ ಆಗಿದೆ. ಅವರಿಗೆ ಕಾವೇರಿಯ ಹಿತಾಸಕ್ತಿಗಿಂತ ಬಾಡೂಟವೇ ಮುಖ್ಯ ಆಯ್ತು. ಕಾವೇರಿ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಚುನಾವಣೆಗಿಂತ ಮುಂಚೆ ಮತದಾರರಿಗೆ ಕೊಟ್ಟ ಮಾತು ಮರೆತಿದ್ದಾರೆ' ಎಂದು ಕಾವೇರಿ ಕುರಿತು ನಿನ್ನೆ ನಡೆದಿದ್ದ ಸಭೆಗೆ ಹೆಚ್​ಡಿ ಕುಮಾರಸ್ವಾಮಿ ಗೈರಾಗಿದ್ದಕ್ಕೆ ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, "ನಿನ್ನೆ ಸರ್ವಪಕ್ಷ ಸಭೆಗೆ ಹಾಜರಾಗಿ ಕುಮಾರಸ್ವಾಮಿ ಅವರು 'ಕಾವೇರಿ ವಿಚಾರದ ಬಗ್ಗೆ ಜವಬ್ದಾರಿ ತೆಗೆದುಕೊಳ್ಳುತ್ತೇನೆ. ನಾನು ಆ ಭಾಗದಲ್ಲಿ ಗೆದ್ದಿದ್ದೇನೆ. ನನಗೆ ಮತ ಹಾಕಿದಂತಹ ಮತದಾರರಿಗೆ ನ್ಯಾಯ ಒದಗಿಸಿ ಕೊಡುತ್ತೇನೆ' ಎಂಬ ಮಾತನ್ನು ಅವರು ಆಡುತ್ತಾರೆ ಎಂದು ಅಂದುಕೊಂಡಿದ್ದೆವು. ಆದರೆ, ಸಭೆಗೆ ಹಾಜರಾಗಿಲ್ಲ. ಇದರಿಂದ ನಮಗೂ ಕೂಡ ಭ್ರಮನಿರಸನವಾಗಿದೆ. ಇವತ್ತು ಅವರು ಮಾತಿಗೂ ಕೂಡ ತಪ್ಪಿದ್ದಾರೆ. ಆದ್ದರಿಂದ ಮಂಡ್ಯದ ಜನರಿಗೆ ಹೆಚ್​ಡಿಕೆ ಕ್ಷಮೆ ಕೇಳಬೇಕು ಎಂದು ಶಾಸಕರು ಆಗ್ರಹಿಸಿದರು.

ಮುಂದುವರೆದ ಶಾಸಕರು, "ಮೂಡ ಹಗರಣದಲ್ಲಿ ಯಾವ ಹೂರಣವೂ ಇಲ್ಲ. ಸುಮ್ಮನ್ನೆ ಅನಾವಶ್ಯಕವಾದಂತಹ ಚರ್ಚೆ ಮಾಡುತ್ತಿದ್ದಾರೆ. ಮೂಡ ಹಗರಣದಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ. ನಿನ್ನೆ ಲಕ್ಷ್ಮಣ್​​ ಅವರು ಪತ್ರಿಕಾಗೋಷ್ಠಿ ನಡೆಸಿ ಯಡಿಯೂರಪ್ಪ ಅವರು ಹೇಗೆ ಭಾಗಿಯಾಗಿದ್ದಾರೆ. ದೇವೇಗೌಡರ ಕುಟುಂಬ ಯಾವ ರೀತಿ ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಎಲ್ಲಾ ವಿಚಾರವನ್ನು ಹೇಳಿದ್ದಾರೆ. ಇಲ್ಲಿ ನಮ್ಮ ನಾಯಕರಾದಂತಹ ಸಿದ್ದರಾಮಯ್ಯ ಅವರಿಗೆ ನ್ಯಾಯಯುತ ವಾದ ಜಾಗವನ್ನು ತೆಗೆದುಕೊಂಡಿದ್ದಾರೆ ವಿನಃ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಘಂಟಾಘೋಷವಾಗಿ ಹೇಳಲು ನಾವು ಇಷ್ಟಪಡುತ್ತೇವೆ. ಎರಡೂ ಪಕ್ಷದ ನಾಯಕರು ಮಾತ್ರ ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ನಾಯಕರು, ನಮ್ಮ ಮುಖ್ಯಮಂತ್ರಿಗಳು ಅವರಿಗೆ ಸಲ್ಲಬೇಕಾದ ಜಾಗವನ್ನು ತೆಗೆದುಕೊಂಡಿದ್ದಾರೆ" ಎಂದರು.

"ಇನ್ನು ಸಿಬಿಐ ಅವರಿಗೆ ಅನೇಕ ಪ್ರಕರಣವನ್ನು ಕೊಟ್ಟಿದ್ದಾರೆ. ಸಿಬಿಐ ಅವರು ಯಾವುದಕ್ಕೆ ತಾರ್ಕಿಕ ಅಂತ್ಯವನ್ನು ಕೊಡಿಸಿದ್ದಾರೆಂದು ನಮ್ಮ ವಿರೋಧಿಗಳು ಹೇಳಬೇಕು. ಸಿಬಿಐ ಅವರಿಗೆ ಪ್ರಕರಣ ಕೊಡುವುದರಿಂದ ಪ್ರಯೋಜನವಾಗುವುದಿಲ್ಲ. ಇಲ್ಲೇ ಸ್ಥಳೀಯವಾಗಿ ತನಿಖೆ ಮಾಡಿದರೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ತಿರಗೇಟು ನೀಡಿ ತೆರಳಿದರು.

ರಾಜಕೀಯ ಸ್ಟಂಟ್: ಬಳಿಕ ಇದೇ ವಿಚಾರವಾಗಿ ಸಚಿವ ಎಂ.ಬಿ. ಪಾಟೀಲ್​ ಮಾತನಾಡಿ, "ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ. ಮುಡಾದಿಂದ ಸಿಎಂ ಪತ್ನಿಗೆ ಭೂಮಿ ಹಂಚಿಕೆಯಾಗಿದೆ. ಅದು ಕೊಟ್ಟಿರುವುದು ಬಿಜೆಪಿ ಕಾಲದಲ್ಲಿ. ಅವರ ಕಾಲದಲ್ಲಿ ತಪ್ಪು ಆಗಿಲ್ವಾ?‌. ಸಿಎಂ ರಾಜೀನಾಮೆ ಕೇಳೋದು ರಾಜಕೀಯ. ಅದೊಂದು ರಾಜಕೀಯ ಸ್ಟಂಟ್. ಇವರ ಕಾಲದಲ್ಲಿ ಯಾವ ಕೇಸ್ ಸಿಬಿಐಗೆ ಕೊಟ್ಟಿದ್ದರು. ಈಗ ಸಿಬಿಐ ಬಗ್ಗೆ ಮಾತನಾಡುತ್ತಾರೆ. ಎಲೆಕ್ಟೋರಲ್ ಬಾಂಡ್ಸ್ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ವಿಚಾರಣೆ ಮಾಡುವುದಕ್ಕೆ ಹೇಳಿದರು. ಒಂದು ಕಡೆ ಇಡಿ ರೇಡ್ ಆಗುತ್ತದೆ. ಈ ಕಡೆ ಹಣ ಜಮಾ ಆಗುತ್ತದೆ. ಇದಕ್ಕೆ ಉತ್ತರ ಕೊಡಲು ಹೇಳಿ ಮೊದಲು. ಅದು ದೇಶದ ದೊಡ್ಡ ಹಗರಣ. ಅದಕ್ಕೆಲ್ಲಾ ಸಾಕ್ಷಿ ಇದೆ. ಅದಕ್ಕೆ ‌ಉತ್ತರ ಕೊಡಲಿ" ಎಂದು ಸವಾಲು ಹಾಕಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ: ವಿಧಾನಸೌಧಕ್ಕೆ ಬಿಜೆಪಿ ನಾಯಕರ ಪಾದಯಾತ್ರೆ - BJP Leaders Protest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.