ETV Bharat / state

ಬೆಂಗಳೂರು; ಶಾಪಿಂಗ್ ಮುಗಿಸಿ ಕಾರಿನಲ್ಲಿ ಬರುವಾಗ ಕಲ್ಲು ಹೊಡೆದ ಪುಂಡರು, ಐದು ವರ್ಷದ ಮಗುವಿಗೆ ಗಾಯ

ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಮಕ್ಕಳೊಂದಿಗೆ ಪತಿ-ಪತ್ನಿ ಕಾರಿನಲ್ಲಿ ಶಾಪಿಂಗ್​ ಮುಗಿಸಿ ಬರುವಾಗ ಪುಂಡರು ಕಾರನ್ನು ಅಡ್ಡಗಟ್ಟಿ ಕಲ್ಲು ಹೊಡೆದಿದ್ದಾರೆ. ಪರಿಣಾಮ 5 ವರ್ಷದ ಬಾಲಕನಿಗೆ ಗಾಯವಾಗಿದೆ.

ಬೆಂಗಳೂರಲ್ಲಿ ಕಾರಿನ ಮೇಲೆ ದಾಳಿ
ಬೆಂಗಳೂರಲ್ಲಿ ಕಾರಿನ ಮೇಲೆ ದಾಳಿ (ETV Bharat)
author img

By ETV Bharat Karnataka Team

Published : 4 hours ago

ಬೆಂಗಳೂರು: ಮಕ್ಕಳ ಸಮೇತ ದಂಪತಿ ತೆರಳುತ್ತಿದ್ದ ಕಾರು ಅಡ್ಡಗಟ್ಟಿದ ಪುಂಡರು ದಾಳಿ ಮಾಡಿದ ಪರಿಣಾಮ ಕಾರಿನಲ್ಲಿದ್ದ ಬಾಲಕ ಗಾಯಗೊಂಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ (ಅ.30) ರಾತ್ರಿ ನಡೆದಿದೆ.

ನಿನ್ನೆ ರಾತ್ರಿ ಕಸವನಹಳ್ಳಿ ಅಮೃತ ಕಾಲೇಜು ಬಳಿ ಇಬ್ಬರು ಬೈಕ್​ನಲ್ಲಿ ಬಂದ ಪುಂಡರು ಹಲ್ಲೆ ನಡೆಸಿದ್ದಾರೆ‌‌‌. ದೀಪಾವಳಿ ಹಬ್ಬದ ಹಿನ್ನೆಲೆ ಶಾಪಿಂಗ್ ಮುಗಿಸಿ ಕಾರಿನಲ್ಲಿ ಬರುತ್ತಿದ್ದ ಕುಟುಂಬವನ್ನು ಬೈಕ್​ನಲ್ಲಿ ಹಿಂಬಾಲಿಸಿದ್ದರು. ಇಬ್ಬರು ಮಕ್ಕಳೊಂದಿಗಿದ್ದ ಅನೂಪ್ ದಂಪತಿಯ ಕಾರನ್ನು ಅಮೃತ ಕಾಲೇಜು ಬಳಿ ಆರೋಪಿಗಳು ಅಡ್ಡಗಟ್ಟಿದ್ದರು. ಬಳಿಕ ಕಾರಿನ ಗಾಜು ಇಳಿಸುವಂತೆ ಹೆದರಿಸಿದ್ದರಿಂದ ಆತಂಕಗೊಂಡ ಅನೂಪ್ ಅವರು ಗಾಜು ತೆರೆಯದೆ ಕಾರು ಓಡಿಸಿದ್ದಾರೆ.‌‌ ಆಕ್ರೋಶಗೊಂಡ ಆರೋಪಿಗಳು, ಕಲ್ಲಿನಿಂದ ಕಾರಿನ ಹಿಂಭಾಗದ ಗಾಜಿಗೆ ಹೊಡೆದಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳ ಪೈಕಿ ಐದು ವರ್ಷದ ಮಗುವಿನ ತಲೆಗೆ ಗಂಭೀರ ಗಾಯವಾಗಿದೆ. ಇದನ್ನು ಕಂಡು ಅನೂಪ್​ ಪತ್ನಿ ಚೀರಾಡುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂದು‌ ಪೊಲೀಸರು ತಿಳಿಸಿದ್ದಾರೆ.

ಶಾಪಿಂಗ್ ಮುಗಿಸಿ ಕಾರಿನಲ್ಲಿ ಬರುವಾಗ ಹಲ್ಲೆ (ETV Bharat)

ಈ ಕುರಿತು ಗಾಯಾಳು ಮಗುವಿನ ತಂದೆ ಅನೂಪ್ ಪ್ರತಿಕ್ರಿಯಿಸಿದ್ದು "ನಾನು ಮತ್ತು ನಮ್ಮ ಕುಟುಂಬಸ್ಥರು ಮನೆಗೆ ವಾಪಸ್​ ಬರುವಾಗ ಇಬ್ಬರು ಬೈಕ್​ನಲ್ಲಿ ಬಂದು ನಮ್ಮ ಕಾರು ನಿಲ್ಲಿಸಿದ್ದರು. ಏನೆಂದು ಕೇಳಿದಾಗ ಏನನ್ನು ಹೇಳದೆ ಮುಂದೆ ಹೋಗಿದ್ದರು. ಮತ್ತೆ ಹಿಂಬಾಲಿಸಿ ಕಾರು ನಿಲ್ಲಿಸಿದ್ದರು. ಕಾರಿನಿಂದ ಹೊರ ಬರುವಂತೆ ಧಮ್ಕಿ ಹಾಕಿದ್ರು. ಇಳಿಯದಿದ್ದಾಗ ಓರ್ವ ಆರೋಪಿ ಕಲ್ಲು ತೆಗೆದುಕೊಂಡು ಹಿಂಬದಿ ಸೀಟ್​ನ ಗಾಜಿಗೆ ಹೊಡೆದ. ಪರಿಣಾಮ ಐದು ವರ್ಷದ ಮಗುವಿಗೆ ಕಲ್ಲು ತಾಗಿದೆ.‌‌ ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಮಗುವಿಗೆ ತೀವ್ರ ರಕ್ತಸ್ರಾವವಾಗಿದ್ದು, ಮೂರು ಸ್ಟಿಚ್ ಹಾಕಲಾಗಿದೆ. ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ" ಎಂದು ತಮಗಾದ ಕಹಿ ಘಟನೆ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: ಲಾರಿ ಪಲ್ಟಿ; ಸ್ಕೂಟಿ ಸಹಿತ ಮಣ್ಣಿನಡಿ ಸಿಲುಕಿದ ಮಹಿಳೆಯ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.