ETV Bharat / state

ಮಂಗಳೂರು: ಕಾಲೇಜಿನ ಮಹಿಳೆಯರ ಶೌಚಗೃಹದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಣ; ಅಪ್ರಾಪ್ತ ವಶಕ್ಕೆ - Secret Filming In Washroom

ಮೆಡಿಕಲ್ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿರುವ ಆರೋಪದಡಿ ಅಪ್ರಾಪ್ತನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Mangaluru washroom filming
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : May 8, 2024, 9:25 AM IST

ಮಂಗಳೂರು: ನಗರದ ಮೆಡಿಕಲ್ ಕಾಲೇಜೊಂದರ ಮಹಿಳಾ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅಪ್ರಾಪ್ತನೋರ್ವನನ್ನು ಪೊಲೀಸ್​ ವಶಕ್ಕೆ ಪಡೆದಿದ್ದಾರೆ.

ಕಾಲೇಜಿನ ಸೆಕ್ಯುರಿಟಿ ಫೀಲ್ಡ್ ಮ್ಯಾನೇಜರ್ ರಾಜು ಎಂಬವರಿಗೆ ಮೇ 06ರ ಸಂಜೆ 3:30ರ ಸುಮಾರಿಗೆ 1ನೇ ಮಹಡಿಯ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್​ ರಿಂಗಣಿಸಿದ್ದು ಕೇಳಿಸಿದೆ. ತಕ್ಷಣ ಹೋಗಿ ನೋಡಿದಾಗ ಶೌಚಾಲಯದ ಒಳಗೆ ಮೇಲ್ಭಾಗದ ಕ್ಯಾಸ್ಟ್ ಪ್ಯಾನ್ ಬಳಿ ಮೊಬೈಲ್ ಫೋನ್ ಇಟ್ಟಿರುವುದು ಪತ್ತೆಯಾಗಿದೆ. ಯಾರೋ ಮೊಬೈಲ್ ಫೋನ್ ಇಟ್ಟು ಮಹಿಳೆಯರು ಶೌಚ ಮಾಡುವ ದೃಶ್ಯ ಸೆರೆಹಿಡಿಯಲು ಇರಿಸಿದಂತೆ ಕಂಡುಬರುತ್ತಿತ್ತು. ಅನುಮಾನ ಬಂದು ಅವರು ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್‌ವಾಲ್ "ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಶೌಚಾಲಯದಲ್ಲಿ ಯಾರೂ ಇಲ್ಲದ ವೇಳೆಯೂ ಮೊಬೈಲ್ ರಿಂಗಾಗುತ್ತಿದ್ದುದನ್ನು ಕಾಲೇಜಿನ ಭದ್ರತಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಫೋನ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಆರೋಪಿ 17 ವರ್ಷದ ಅಪ್ರಾಪ್ತನಾಗಿದ್ದು, ರೋಗಿಯ ವೇಷದಲ್ಲಿ ಕಾಲೇಜಿಗೆ ಬಂದಿದ್ದ. ಆತನನ್ನು ಬಂಧಿಸಿ ಬಾಲ ನ್ಯಾಯಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಜೈಲಿನ​ ಕೈದಿಯ ಹೊಟ್ಟೆಯಲ್ಲಿ ಮೊಬೈಲ್: ಆಪರೇಷನ್ ಮಾಡಿ ಹೊರತೆಗೆದ ವೈದ್ಯರು - Prisoner Swallow Mobile

ETV Bharat Logo

Copyright © 2024 Ushodaya Enterprises Pvt. Ltd., All Rights Reserved.