ETV Bharat / state

ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಚಿವರು; ಲೋಕಸಭೆ ಫಲಿತಾಂಶದ ಚರ್ಚೆ - Ministers Meets CM Siddaramaiah - MINISTERS MEETS CM SIDDARAMAIAH

ಇಂದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಸಚಿವರುಗಳು ಲೋಕಸಭೆ ಚುನಾವಣೆಯ ಸೋಲು-ಗೆಲುವಿನ ಕುರಿತು ಕೆಲಹೊತ್ತು ಚರ್ಚಿಸಿದರು.

MINISTERS MEETS CM
ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಚಿವರು (ETV Bharat)
author img

By ETV Bharat Karnataka Team

Published : Jun 5, 2024, 3:53 PM IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗಾಗಿ ಇಂದು ಕಾವೇರಿ ನಿವಾಸಕ್ಕೆ ಆಗಮಿಸಿದ ಸಚಿವರುಗಳು ಲೋಕಸಭೆ ಚುನಾವಣೆಯ ಸೋಲು, ಗೆಲುವಿನ ಬಗ್ಗೆ ಚರ್ಚಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್, ತುಮಕೂರು ಕ್ಷೇತ್ರದ ಸೋಲಿನ ಬಗ್ಗೆ ಚರ್ಚಿಸಿದರು. ಸಚಿವ ಜಮೀರ್ ಅಹಮ್ಮದ್ ಖಾನ್​ ಬೆಂಗಳೂರು ಕೇಂದ್ರದ ಸೋಲಿನ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಿದ್ದಾರೆ. ಸೋಲಿಗೆ ಕಾರಣಗಳ ಬಗ್ಗೆಯೂ ಚರ್ಚಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ಡಾ.ಪರಮೇಶ್ವರ್, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಿಬಿಐ ಎಫ್ಐಆರ್ ದಾಖಲಿಸಿರುವ ಬಗ್ಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಈ ಪ್ರಕರಣದ ಕುರಿತು ಯುನಿಯನ್ ಬ್ಯಾಂಕ್ ಅಧಿಕಾರಿಗಳು ಸಿಬಿಐಗೆ ದೂರು ನೀಡಿದ್ದರು.

ಬಿಜೆಪಿ ರೆಬೆಲ್ ಶಾಸಕರಾದ ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಕೂಡಾ ಸಿಎಂ ಭೇಟಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಈ ಇಬ್ಬರು ಶಾಸಕರು ಕಾಂಗ್ರೆಸ್ ಬೆಂಬಲಿಸಿದ್ದರು. ಹೀಗಿದ್ದರೂ ಅವರ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ.

ಉತ್ತರಾಖಂಡ್​ನಲ್ಲಿ ಕನ್ನಡಿಗರು ಸಿಲುಕಿರುವ ಘಟನೆ: ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಿಎಂ ಭೇಟಿ ಮಾಡಿ, ಉತ್ತರಾಖಂಡ್​ನಲ್ಲಿ ಕನ್ನಡಿಗರು ಸಿಲುಕಿರುವ ಬಗ್ಗೆ ಮಾಹಿತಿ ನೀಡಿದರು.‌ ಕನ್ನಡದ ಟ್ರೆಕ್ಕಿಂಗ್ ಟೀಂ ಸಂಕಷ್ಟದಲ್ಲಿರುವ ಬಗ್ಗೆ ವಿವರ ಒದಗಿಸಿದರು. ಇದಕ್ಕೆ ಸಿಎಂ, ನೀವೇ ಖುದ್ದು ತೆರಳಿ ಕಾರ್ಯಾಚರಣೆ ನೋಡಿಕೊಳ್ಳಿ ಎಂದು ಕೃಷ್ಣ ಭೈರೇಗೌಡರಿಗೆ ಸೂಚನೆ ನೀಡಿದರು.

ಇದನ್ನೂ ಓದಿ: ನನ್ನ ಗೆಲುವಿಗೆ ಬಿಜೆಪಿ ಎಷ್ಟು ಕಾರಣವೋ ಜೆಡಿಎಸ್ ಕೂಡ ಅಷ್ಟೇ ಕಾರಣ: ವಿ. ಸೋಮಣ್ಣ - V Somanna

ETV Bharat Logo

Copyright © 2025 Ushodaya Enterprises Pvt. Ltd., All Rights Reserved.