ETV Bharat / state

ಬೆಳೆಗಳಿಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆಗೆ ಸಚಿವ ಸತೀಶ ಜಾರಕಿಹೊಳಿ ಚಾಲನೆ - Satish Jarkiholi

author img

By ETV Bharat Karnataka Team

Published : Aug 17, 2024, 10:46 PM IST

ಸೋಯಾ ಅವರೆ ಬೆಳೆಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆ ಕಾರ್ಯಕ್ಕೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.

Belagavi  Satish Jarkiholi
ಬೆಳೆಗಳಿಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆಗೆ ಸಚಿವ ಸತೀಶ ಜಾರಕಿಹೊಳಿ ಚಾಲನೆ (ETV Bharat)
ಸಚಿವ ಸತೀಶ ಜಾರಕಿಹೊಳಿ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿದರು. (ETV Bharat)

ಬೆಳಗಾವಿ: ''ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆಯು ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ವಿನೂತನ ಪದ್ಧತಿಯಾಗಿದೆ. ರೈತ ಬಾಂಧವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ'' ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ರೋಟರಿ ಕ್ಲಬ್ ವತಿಯಿಂದ ಹತ್ತರಗಿ ಬಳಿಯ ಕೃಷಿ ಜಮೀನಿನಲ್ಲಿ ಆಯೋಜಿಸಲಾದ ಸೋಯಾ ಅವರೆ ಬೆಳೆಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

''ಹೊಸ ತಂತ್ರಜ್ಞಾನ ಬಳಕೆ ಮೂಲಕ ಎಲ್ಲ ರೈತರು ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ವೇಗವಾಗಿ ನಿರ್ವಹಿಸಲು ಸಹಾಯಕವಾಗಿದೆ. ಇದರಿಂದ ಸಮಯ, ಹಣ ಉಳಿತಾಯವಾಗಲಿದೆ. 8 ನಿಮಿಷದಲ್ಲಿ 1 ಎಕರೆ ಜಮೀನಿನಲ್ಲಿ ಔಷಧಿ ಸಿಂಪಡಣೆ ಮಾಡಬಹುದಾಗಿದೆ. ಇಂತಹ ವೈಜ್ಞಾನಿಕ ಪದ್ಧತಿಯನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ರೈತರು ಮತ್ತಷ್ಟು ಅಭಿವೃದ್ಧಿ ಹೊಂದಬೇಕು'' ಎಂದು ಸತೀಶ್ ಜಾರಕಿಹೊಳಿ ಕರೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ''ಸೋಯಾ ಅವರೆ ಬೆಳೆಗೆ ಪೋಷಕಾಂಶಗಳ ಸಿಂಪಡಣೆಗೆ ಸುಮಾರು 37 ಡ್ರೋನ್​ಗಳು ಬಳಕೆ ಮಾಡಲಾಗುತ್ತಿದೆ. ರೈತರು ಬೆಳೆದ ವಿವಿಧ ಬೆಳೆಗಳಿಗೆ ಪೋಷಕಾಂಶ ಮತ್ತು ರಸಗೊಬ್ಬರಗಳನ್ನು ಸಿಂಪಡಣೆ ಮಾಡಲು ಈ ವಿಧಾನ ಸುಲಭವಾಗಿದೆ'' ಎಂದು ಹೇಳಿದರು.

''ಪ್ರತಿ ಎಕರೆ ಸಿಂಪರಣೆಗೆ ಸುಮಾರು 400 ರೂಪಾಯಿ ಖರ್ಚು ತಗುಲುತ್ತದೆ. ಡ್ರೋನ್ ಮೂಲಕ ವಿವಿಧ ಬೆಳೆಗಳಿಗೆ ಕೀಟನಾಶಕ, ರಸಗೊಬ್ಬರ ಸಿಂಪಡಣೆ ಮಾಡಬಹುದು. ರೈತರಿಗೆ ತಾಂತ್ರಿಕತೆಯ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಆಯಾ ರೈತ ಸಂಪರ್ಕ ಕೇಂದ್ರದಲ್ಲಿ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಡ್ರೋನ್ ಬಳಕೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಕಿತ್ತೂರು ಬೈಲಹೊಂಗಲ ಬಾಗೇವಾಡಿಯಲ್ಲಿ ಕಬ್ಬು ಬೆಳೆಗೆ ಈಗಾಗಲೇ ಬಳಕೆ ಮಾಡಲಾಗುತ್ತಿದೆ'' ಎಂದರು.

''ವಿವಿಧ ಖಾಸಗಿ ಉದ್ಯಮಗಳ ರೈತ ಸ್ನೇಹಿ ಯೋಜನೆ ಇದಾಗಿದೆ. ರೈತರಿಗೆ ತಲುಪಿಸಲು ಕೃಷಿ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದರಿಂದ ರೈತರಿಗೆ ಸಮಯ, ಶ್ರಮ ಉಳಿತಾಯದ ಜೊತೆಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಈ ಕುರಿತು ಕೃಷಿ ಇಲಾಖೆಯಿಂದ ರೈತರಿಗೆ ತಿಳುವಳಿಕೆ ಕೂಡ ಮೂಡಿಸಲಾಗುತ್ತದೆ'' ಎಂದು ಶಿವನಗೌಡ ಪಾಟೀಲ ಮಾಹಿತಿ ನೀಡಿದರು.

ಈ ವೇಳೆ ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎಚ್.ಡಿ. ಕೋಳೆಕರ, ಡಾ.ಕೊಂಗವಾಡ, ಹುಕ್ಕೇರಿ ತಹಶೀಲ್ದಾರ್, ಮಂಜುಳಾ ನಾಯಕ, ರೋಟರಿ ಜಿಲ್ಲಾ ಗವರ್ನರ್ ಶರದ್ ಪೈ, ರೋಟರಿ ಅಧ್ಯಕ್ಷ ಸುಹಾಸ್ ಚಿಂಡಕ್, ಚೇರಮನ್ ಪ್ರಶಾಂತ ಹಾಲಪ್ಪನವರ, ಡಾ.ಶಿಲ್ಪಾ ಕೋಡಕಣಿ, ಮುಕುಂದ ಬಾಂಗ್, ಡಾ.ಸಂತೋಷ ಪಾಟೀಲ, ಸಂದೀಪ್ ನಾಯ್ಕ, ನಿತೀನ್ ಗುಜ್ಜರ್, ಡಾ.ಶಂಕರ್ ಗೋಯೆಂಕಾ, ಚಂದ್ರಕಾಂತ ಪಾಟೀಲ(ಬೇಡಕಿಹಾಳ) ಹಾಗೂ ಇಫ್ಕೋ ಕಂಪನಿಯ ಅಧಿಕಾರಿಗಳು‌ ಮತ್ತಿತರರು ಇದ್ದರು.

ಇದನ್ನೂ ಓದಿ: ಮುಂಗಾರು ಮಳೆ ಚುರುಕು: ಭಾನುವಾರ ಈ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - Rain alert

ETV Bharat Logo

Copyright © 2024 Ushodaya Enterprises Pvt. Ltd., All Rights Reserved.