ETV Bharat / state

ಬಿಜೆಪಿಯವರು ಎಷ್ಟಾದ್ರೂ ಕೂಗಾಡ್ಲಿ, ಅರಚಾಡ್ಲಿ, ಬಟ್ಟೆ ಹರ್ಕೊಂಡ್ರೂ ಐ ಡೋಂಟ್ ಕೇರ್: ಪ್ರಿಯಾಂಕ್‌ ಖರ್ಗೆ

ಬಿಜೆಪಿ ಎಷ್ಟೇ ಕೂಗಾಡಿದ್ರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು.

ಸಚಿವ ಪ್ರಿಯಾಂಕ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ (ETV Bharat)
author img

By ETV Bharat Karnataka Team

Published : Oct 14, 2024, 5:43 PM IST

ಬೆಂಗಳೂರು: ಬಿಜೆಪಿಯವರು ಎಷ್ಟಾದರೂ ಕೂಗಾಡ್ಲಿ, ಅರಚಾಡ್ಲಿ, ಬಟ್ಟೆ ಹರ್ಕೊಳ್ಳಲಿ, ಐ ಡೋಂಟ್ ಕೇರ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ವಿಕಾಸಸೌಧದಲ್ಲಿಂದು ಮಾತನಾಡಿದ ಅವರು, ರಾಜ್ಯಪಾಲರಿಗೆ ಮೇಲ್ಮನೆ ಸದಸ್ಯರ ಬಗ್ಗೆ ದೂರು ಕೊಟ್ಟಿದ್ದೇವೆ. ಅದರ ಬಗ್ಗೆ ಚರ್ಚೆ ಮಾಡೋಕೆ ಹೇಳಿ. ಅದನ್ನು ಬಿಜೆಪಿ ನಾಯಕರು ರಾಜ್ಯಪಾಲರ ಹತ್ತಿರ ಉತ್ತರ ತೆಗೆದುಕೊಂಡು ಬರಲಿ. ಪದೇ ಪದೆ ರಾಜ್ಯಪಾಲರ ಮುಂದೆ ಹೋಗಿ ಅವರು ಕೈ ಕಟ್ಕೊಂಡು ನಿಲ್ತಾರೆ, ಪಾಪ ಅನ್ಸುತ್ತೆ ಎಂದು ಲೇವಡಿ ಮಾಡಿದರು.

"ರಾಜ್ಯಪಾಲರ ಹತ್ತಿರ ಯಾಕೆ ಹೋಗ್ತೀರಾ?. ಪ್ರಧಾನಿ ಹಾಗೂ ರಾಷ್ಟ್ರಪತಿ ಹತ್ತಿರ ಹೋಗಿ ದೂರು ಕೊಡ್ಲಿ. ನನಗೆ ನಿಜವಾಗಿಯೂ ಕುತೂಹಲವಿದೆ. ಇವರು ಹೇಗೆ ಅಕ್ರಮ ದೃಢಪಡಿಸ್ತಾರೆ ಅಂತ ನೋಡೋಣ" ಎಂದು ಸವಾಲು ಹಾಕಿದರು.

ಕ್ಯಾಬಿನೆಟ್​​ನಲ್ಲಿ ಕೇಸ್ ವಾಪಸ್ ಪಡೆದ ಹಿನ್ನೆಲೆಯಲ್ಲಿ ಸರ್ಕಾರದ ಸಚಿವರು ಭಯೋತ್ಪಾದಕರು ಎಂಬ ಬಿಜೆಪಿ ನಾಯಕರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "60 ಪ್ರಕರಣದ ಪೈಕಿ 43 ಪ್ರಕರಣವನ್ನು ಕ್ಯಾಬಿನೆಟ್ ಉಪಸಮಿತಿಯ ನಿರ್ಧಾರದ ಮೇಲೆ ವಾಪಸ್ ಪಡೆದಿದ್ದೇವೆ. ಎಲ್ಲವೂ ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಮಾಡಿ ವಾಪಸ್ ಪಡೆದಿದ್ದೇವೆ. ಇದರಲ್ಲಿ ತಪ್ಪೇನಿದೆ?. ವಿ.ಸೋಮಣ್ಣ ಅವರದು ನಾಲ್ಕೈದು ಕೇಸ್ ವಾಪಸ್ ಪಡೆದಿದ್ದೇವೆ. ಸಿ.ಟಿ.ರವಿ ಹಾಗೂ ಸುಕುಮಾರ್ ಶೆಟ್ಟಿ, ಮೈಸೂರು ಮಹಿಳಾ ಮೋರ್ಚಾ ಕೇಸ್ ವಾಪಸ್ ಪಡೆದಿದ್ದೇವೆ. ಇವರೆಲ್ಲರೂ ದೇಶದ್ರೋಹಿಗಳಾ?. ಇವರೆಲ್ಲರೂ ಭಯೋತ್ಪಾದನೆ ನಡೆಸುತ್ತಾರಾ?. ಏನಾದರೂ ಲಾಜಿಕ್ ಇರಬೇಕಲ್ವಾ? ಬಿಜೆಪಿಗೆ ಯಾವುದೇ ವಿಷಯ ಸಿಗ್ತಿಲ್ಲ, ಸುಮ್ಮನೆ ಹಿಟ್ ಆ್ಯಂಡ್ ರನ್ ಮಾಡ್ತಾರೆ. ಅವರ ಒಳಜಗಳ ಮುಚ್ಚಿ ಹಾಕಲು ಈ ರೀತಿಯಾಗಿ ಮಾತಾಡ್ತಾರೆ" ಎಂದು ಆರೋಪಿಸಿದರು.

"ಹಿಂದಿನ ಸರ್ಕಾರದಲ್ಲಿ ಯಾರೆಲ್ಲ ಎಷ್ಟು ಕೇಸ್ ವಾಪಸ್ ಪಡೆದಿದ್ದಾರೆ ಪಟ್ಟಿ ಮಾಡಲಿ. ಯಡಿಯೂರಪ್ಪ ಸರ್ಕಾರ 100ಕ್ಕಿಂತ ಹೆಚ್ಚು ಕೇಸ್ ವಾಪಸ್ ಪಡೆದಿತ್ತು. ಈಗ ಬಿಜೆಪಿ ಮಾಡಿದ್ದು ಎಷ್ಟು ಪ್ರತಿಭಟನೆ ಆಯ್ತು?. ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಗೆ ಪವರ್ ಇದೆ. UIP ಹಾಕಿದ್ದು NIA ಅವರಲ್ಲ. ಗೃಹ ಇಲಾಖೆ ಹಾಕಿದ್ರು, ಅವರೇ ತೆಗೆಯುತ್ತಾರೆ. ಬಿಜೆಪಿಗೆ ಕಾನೂನು ಗೊತ್ತಿಲ್ಲ" ಎಂದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್​ಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, "ಅವರ ಲಾಜಿಕ್ ಪ್ರಕಾರ ಸಿ.ಟಿ.ರವಿ, ವಿ.ಸೋಮಣ್ಣ ಟೆರರಿಸ್ಟಾ?. ಸುಮ್ಮನೆ ಮಾತನಾಡಬಾರದು, ವಿರೋಧ ಪಕ್ಷದ ನಾಯಕರ ಮಾತಿಗೆ ತೂಕ ಇರಬೇಕು. ಬಲವಾದ ಮೂಲ ಇದ್ರೆ ಅಮಿತ್ ಶಾಗೆ ದೂರು ಕೊಡ್ಲಿ. 10 ವರ್ಷದಿಂದ ಅವರದೇ ಸರ್ಕಾರ ಇತ್ತಲ್ವಾ?. ಭಯೋತ್ಪಾದನೆ ನಿರ್ಮೂಲನೆಗೆ ಏನು ಮಾಡಿದ್ದಾರೆ?. ಬೆಂಗಳೂರಿಗೆ ಪಾಕಿಸ್ತಾನಿಗಳು ಬರ್ತಾರೆ ಅಂದ್ರೆ, ಅವ್ರು ಎಲ್ಲಿಂದ ಬರ್ತಾರೆ?. ನಿಮಗೆ ಅಲ್ಲಿ ಬಾರ್ಡರ್ ಮೆಂಟೇನ್ ಮಾಡೋಕೆ ಆಗ್ತಿಲ್ಲ. ನಮಗೆ ಇಲ್ಲಿ ಪಾಠ ಮಾಡ್ತೀರಾ?. ಈ ಅಜಿತ್ ದೊವಾಲ್​, ವಿದೇಶಾಂಗ ಸಚಿವ ಜೈಶಂಕರ್ ಜೊತೆಗೆ ಮಾತಾಡಿ ಹೇಗೆ ಭಾರತಕ್ಕೆ ಬಂದ್ರು ಅಂತಾ ಪ್ರಶ್ನಿಸಿ" ಎಂದು ಕಿಡಿಕಾರಿದರು.

ಛಲವಾದಿ ನಾರಾಯಣಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿ, "ಶೆಡ್ ನಾರಾಯಣಸ್ವಾಮಿ ಅಂತ ನಾನು ಹೇಳಿಲ್ಲ. ಹಿರಿಯರು, ಕಿರಿಯರು ಅನ್ನೋದನ್ನು ನಾನು ರಾಜಕೀಯದಲ್ಲಿ ನೋಡಿದ್ದೇನೆ. ಚುನಾವಣೆಯಲ್ಲಿ ನಿಂತು ಬಂದಿದ್ದೇನೆ. ಛಲವಾದಿ ನಾರಾಯಣಸ್ವಾಮಿ ಎಷ್ಟು ಸಲ ಚುನಾವಣೆಯಲ್ಲಿ ನಿಂತು ಬಂದಿದ್ದಾರೆ?. ಖರ್ಗೆ ಅವರ ಬಗ್ಗೆ ಮಾತಾಡಿದ್ರೆ ಮಾಸ್ಟರ್ ಸ್ಟ್ರೋಕ್. ರಾಜೀವ್ ಚಂದ್ರಶೇಖರ್ ಸಹ ಖರ್ಗೆ ಬಗ್ಗೆ ಮಾತಾಡಿದ್ರು. ರಾಜೀವ್ ಚಂದ್ರಶೇಖರ್ ಯಾರು?. ಅವರ ಕೊಡುಗೆ ಕರ್ನಾಟಕಕ್ಕೆ ಏನಿದೆ?. ಮಿನಿಸ್ಟರ್ ಆಗಿದ್ದಾಗ ರಾಜ್ಯಕ್ಕೆ ಅವರ ಕೊಡುಗೆ ಏನು?. ಅವರೆಲ್ಲ ಮಾತಾಡಬಹುದು ಪ್ರಿಯಾಂಕ್ ಖರ್ಗೆ ಮಾತನಾಡಬಾರದಾ?. ಲೀಗಲ್ ಆಗಿ ಸೈಟ್ ವಾಪಸ್ ಕೊಟ್ರೂ ಕಷ್ಟ. ಇವರ ಬಿರಿಯಾನಿ ಅಂಗಡಿ ಏನಾಯ್ತು" ಎಂದು ಪ್ರಶ್ನಿಸಿದರು.

ಇದನ್ನೂ ಓದಿ: 5 ಎಕರೆ ಸಿಎ ನಿವೇಶನ KIADBಗೆ ಹಿಂದಿರುಗಿಸಲು ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ ಟ್ರಸ್ಟ್ ತೀರ್ಮಾನ

ವಾಸ್ತವವಾಗಿ ಬಿಜೆಪಿಯೇ ಒಂದು ಉಗ್ರಗಾಮಿಗಳ ಪಕ್ಷವಾಗಿದೆ : ಮಲ್ಲಿಕಾರ್ಜುನ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.