ಬೆಂಗಳೂರು : ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ನಮ್ಮ ನಿರೀಕ್ಷೆ ಶೂನ್ಯ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಉದ್ಯೋಗ ಸೃಷ್ಟಿಆಗಿದ್ಯಾ? 10 ಸಾವಿರ ಜನ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಯಾಕೆ?. ರೈತರ ಆದಾಯ ದುಪ್ಪಟ್ಟು ಮಾಡಿದ್ರಾ? ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಷ್ಟ್ರ ಬಡತನ ರೇಖೆಯಲ್ಲಿ 111ನೇ ಸ್ಥಾನದಲ್ಲಿದೆ. ಹಸಿವಿನಲ್ಲಿ 113 ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರದಲ್ಲಿ 93 ನೇ ಸ್ಥಾನದಲ್ಲಿದೆ. ಹೀಗಾಗಿ ಬಜೆಟ್ನಲ್ಲಿ ನಮ್ಮ ನಿರೀಕ್ಷೆ ಶೂನ್ಯವಾಗಿದೆ. ಈ ಬಗ್ಗೆ 9 ವರ್ಷಗಳ ಟ್ರಾಕ್ ರೆಕಾರ್ಡ್ಗಳು ಹೇಳುತ್ತಿವೆ. ಕೇಂದ್ರದಿಂದ ಕನ್ನಡಿಗರಿಗೆ ಅನ್ಯಾಯ ಆಗ್ತಾನೇ ಇದೆ. ಜಿಎಸ್ಟಿ ಮರುಪಾವತಿಯಲ್ಲಿ ಅನ್ಯಾಯವಾಗಿದೆ. ಕಲಬುರಗಿಯಲ್ಲಿ ಇಂಡಸ್ಟ್ರೀಸ್ ಮಾಡುತ್ತೇವೆ ಎಂದರು ಆಯ್ತಾ?, ಕಲಬುರಗಿ ರೈಲ್ವೇ ಡಿವಿಜನ್ ಮಾಡಲು ಆಗಿಲ್ಲ. ಮೋದಿ ಗ್ಯಾರೆಂಟಿಯಲ್ಲಿ 50% ಕನ್ನಡಿಗರ ಬೆವರಿದೆ. ಜಲಜೀವನ್ ಮಿಷನ್ನಲ್ಲೂ 50% ಬೆವರಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬಿಜೆಪಿಗರು ದೊಡ್ಡ ದೊಡ್ಡ ಮಾತು ಹೇಳುವುದಷ್ಟೇ. ಬಡವರಿಗೆ ಯಾವ ಯೋಜನೆ ತಂದಿದ್ದಾರೆ. ಫೈನಾನ್ಸ್ ಮಿನಿಸ್ಟರ್ ಕರ್ನಾಟಕದಿಂದ ಆಯ್ಕೆ ಆಯ್ಕೆ ಆದವರು. ಆದರೆ ಕರ್ನಾಟಕಕ್ಕೆ ಅವರ ಕೊಡುಗೆಯೇನು? ಎಂದು ಕೇಂದ್ರ ಬಜೆಟ್ ವಿರುದ್ಧ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ್ದು ಚುನಾವಣಾ ಬಜೆಟ್ ಅಷ್ಟೇ: ಮತ್ತೊಂದೆಡೆ ಕೇಂದ್ರ ಬಜೆಟ್ ವಿಚಾರವಾಗಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಕೇಂದ್ರದ ಬಜೆಟ್ ಚುನಾವಣೆ ಬಜೆಟ್ ಅಷ್ಟೇ. ಕರ್ನಾಟಕದ ಬಜೆಟ್ನ್ನು ಫಾಲೋ ಮಾಡುವ ಸ್ಥಿತಿ ಇದೆ. 10 ವರ್ಷ ಏನು ಮಾಡಲು ಸಾಧ್ಯವಾಗದೆ ಇರುವವರು ಇವಾಗ ಮಾಡುತ್ತಾರಾ. ಕೃಷಿ ಇಲಾಖೆಗೆ ಹೆಚ್ಚು ಒತ್ತು ಕೊಟ್ಟರೆ ಅಭಿನಂದನೆ ಸಲ್ಲಿಸುತ್ತೇನೆ. ಬರ ಪರಿಹಾರಕ್ಕೆ ಮನವಿ ಮಾಡಿದರೂ ಪರಿಹಾರವನ್ನು ಈವರೆಗೆ ನೀಡಿಲ್ಲ. 50 ಲಕ್ಷ ಹೆಕ್ಟೇರ್ ಬೆಳೆ ನಷ್ಟ ಆದರೂ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ರಾಜ್ಯದ ಜನತೆಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ ಸಿಗಲಿದೆ:ಆರ್.ಅಶೋಕ್