ETV Bharat / state

'ವಿಚಿತ್ರ, ವಿಕೃತ ಹಾಗೂ ಅಸಹ್ಯ': ಸೂರಜ್​ ಪ್ರಕರಣದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ - Priyank Kharge

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರದ್ದು ವಿಚಿತ್ರ, ವಿಕೃತ ಹಾಗೂ ಅಸಹ್ಯವಾದ ಪ್ರಕರಣ. ಪ್ರಜ್ವಲ ರೇವಣ್ಣ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸೂರಜ್ ಅವರ ಪ್ರಕರಣದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ (ETV Bharat)
author img

By ETV Bharat Karnataka Team

Published : Jun 23, 2024, 8:16 PM IST

Updated : Jun 23, 2024, 10:11 PM IST

ಸಚಿವ ಪ್ರಿಯಾಂಕ್ ಖರ್ಗೆ (ETV Bharat)

ಕಲಬುರಗಿ: ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರದ್ದು ವಿಚಿತ್ರ, ವಿಕೃತ ಹಾಗೂ ಅಸಹ್ಯವಾದ ಪ್ರಕರಣ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ ರೇವಣ್ಣ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸೂರಜ್ ಅವರ ಪ್ರಕರಣದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.

''ಯಾರು ಮಾಡಿದ್ದಾರೆ ಅವರಿಗೂ ಏನು ಅನಿಸುತ್ತಿಲ್ಲ. ಎಲ್ಲರೂ ಬೇರೆಯವರ ರಾಜೀನಾಮೆ ಕೇಳುತ್ತಿದ್ದಾರೆ. ಅವರು ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ. ‌ದೊಡ್ಡಮನೆ, ದೊಡ್ಡ ಮನೆತನ, ಎಲ್ಲರೂ ಅಧಿಕಾರದಲ್ಲಿದ್ದಾರೆ. ಅವರನ್ನು ಕೇಳುವುದನ್ನು ಬಿಟ್ಟು ನನ್ನನ್ನು ಕೇಳುತ್ತಿರಿ. ಅವರ ಮೇಲೆ ಏನು ಜವಾಬ್ದಾರಿ ಇದೆ. ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಾರೆ. ನಾವು ಜವಾಬ್ದಾರಿಯುತ ಕುಟುಂಬದಿಂದ ಬಂದಿದ್ದೇವೆ. ಈ ಕಪ್ಪುಚುಕ್ಕೆ ಅಳಿಸಿ ಹಾಕುವ ತನಕ ಅಧಿಕಾರ ಬಿಟ್ಟಿರುತ್ತೇವೆ. ಸಮಾಜದಲ್ಲಿ ಒಳ್ಳೆಯ ನಾಗರಿಕರಾಗುತ್ತೇವೆ ಎಂದು ಅವರು ಎಲ್ಲೂ ಹೇಳುತ್ತಿಲ್ಲ. ಈ ಪ್ರಕರಣಗಳ ಬಗ್ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ'' ಎಂದು ಸಚಿವ ಖರ್ಗೆ ಹೇಳಿದರು.

''ನಾನು ಹೆಚ್​ ಡಿ ಕುಮಾರಸ್ವಾಮಿ, ಹೆಚ್​ ಡಿ ದೇವೇಗೌಡ, ಹೆಚ್​ ಡಿ ರೇವಣ್ಣ ಅವರ ಬಗ್ಗೆ ಮಾತನಾಡುವುದಿಲ್ಲ. ಏನು ಮಾಡುತ್ತಾರೆ ಎಂಬುದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ. ಅವರನ್ನು ನಂಬಿಕೊಂಡು ಪಕ್ಷದಲ್ಲಿ ಲಕ್ಷಾಂತರ ಜನ ಇದ್ದಾರೆ. ಅವರನ್ನು ನಂಬಿಕೊಂಡು ಎನ್​ಡಿಎ ನಡೆಯುತ್ತಿದೆ. ಈ ವಿಚಾರದಲ್ಲಿ ಬಿಜೆಪಿಯವರ ಸ್ಮಶಾನ ಮೌನ ಯಾಕೆ ಎಂಬುದು ಗೊತ್ತಾಗುತ್ತಿಲ್ಲ. ಉಳಿದ ಸಮಯದಲ್ಲಿ ಬೇಟಿ ಬಚಾವೊ, ಬೇಟಿ ಪಢಾವೋ ಎಂದು ಜಪ ಮಾಡುತ್ತಾರೆ. ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವಾಗ ಸಂವಿಧಾನಕ್ಕೆ ತಲೆಬಾಗಿ ನಮಿಸಿ ಮುಂದುವರಿಯುತ್ತಾರೆ. ಆದರೆ, ಸಂವಿಧಾನ ಉಲ್ಲಂಘನೆಯಾದಾಗ, ಕಾನೂನು ಉಲ್ಲಂಘನೆ ಆದಾಗ ಅವರು ಮಾತನಾಡುವುದೇ ಇಲ್ಲ. ಸ್ವಂತ ಪಕ್ಷದವರೇ ಪೋಕ್ಸೋ ಪ್ರಕರಣದಲ್ಲಿದ್ದರೆ ಅವರ ಬಗ್ಗೆ ಮಾತನಾಡುವುದಿಲ್ಲ. ರಾಜ್ಯದ ವಿರೋಧ ಪಕ್ಷದಲ್ಲಿ ವಿಚಿತ್ರವಾದ ವಾತಾವರಣ ಇದೆ'' ಎಂದು ಟೀಕಿಸಿದರು.

ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲಾಗುವುದು: ಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ. ಅಧಿಕಾರಿ ವರ್ಗ ಚುನಾವಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರಿಂದ ಅಕ್ರಮ ಮರಳು ಸಾಗಣೆ ದಂಧೆ ಜೋರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಿದೆ. ಕಠಿಣ ನಿರ್ಬಂಧಗಳನ್ನು ಹೇರಿ ಮುಂದಿನ 15 ರಿಂದ 20 ದಿನಗಳಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲಾಗುವುದು. ಅಕ್ರಮ ಮರಳು ಸಂಗ್ರಹಣೆ ಮಾಡುವವರಿಗೆ ಹಾಗೂ ಸಂಗ್ರಹ ಮಾಡಲು ಜಮೀನು ನೀಡಿ ಸಹಕರಿಸುವವರಿಗೆ ನೋಟಿಸ್ ನೀಡಿ ಎಚ್ಚರಿಸಲಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಸೂರಜ್​ ರೇವಣ್ಣ ಪ್ರಕರಣ ; ಈ ರೀತಿಯ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದ ಹೆಚ್​ಡಿಕೆ - SURAJ REVANNA

Last Updated : Jun 23, 2024, 10:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.