ETV Bharat / state

ರಾಜ್ಯಪಾಲರಿಂದ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ: ಸಚಿವ ಪ್ರಿಯಾಂಕ್ ಖರ್ಗೆ - Priyank Kharge

author img

By ETV Bharat Karnataka Team

Published : Aug 19, 2024, 5:18 PM IST

Updated : Aug 19, 2024, 7:37 PM IST

ರಾಜ್ಯಪಾಲರೇ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ದೂರಿದರು.

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ (ETV Bharat)
ಸಚಿವ ಪ್ರಿಯಾಂಕ್ ಖರ್ಗೆ (ETV Bharat)

ಬೆಂಗಳೂರು: ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರೇ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ. ಹಲವರ ವಿರುದ್ಧ ದೂರು ಇದ್ದರೂ ಔಟ್ ಆಫ್ ದಿ ವೇ ಹೋಗಿ ಸಿದ್ದರಾಮಯ್ಯ ವಿಚಾರದಲ್ಲಿ ಮಾತ್ರ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳಿ ಇಂದು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಮೊದಲು ಬಿಎಸ್​ವೈ ರಾಜೀನಾಮೆ ಕೊಡಬೇಕು. ವಿಜಯೇಂದ್ರರದ್ದು ಸುಪ್ರೀಂ ಕೋರ್ಟ್​ನಲ್ಲಿ ಡಿಎ (Disproportionate Asset Case) ಇದ್ಯೋ ಇಲ್ವೋ?. ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಇದ್ಯೋ ಇಲ್ವೋ?. ನಿಜವಾಗಲೂ ನೈತಿಕತೆ ಇದ್ದರೆ ಇವರಿಬ್ಬರೂ ರಾಜೀನಾಮೆ ಕೊಡಬೇಕು. ಇವರಿಬ್ಬರ ರಾಜೀನಾಮೆ ನಂತರ ರಾಜ್ಯಪಾಲರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಸಂವಿಧಾನವನ್ನು ಗಾಳಿಗೆ ತೂರಿ ರಾಜಭವನವನ್ನ ಜಗನ್ನಾಥ ಭವನ ಮಾಡಿಕೊಂಡಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ. ಮೊದಲು ಅವರು ರಾಜೀನಾಮೆ ಕೊಡಲಿ. ವಿಜಯೇಂದ್ರ ಮತ್ತು ಬಿಜೆಪಿಯವರು ಮೊದಲು ಪೋಕ್ಸೋ ಕೇಸ್ ಬಗ್ಗೆ ಮಾತಾಡಲಿ. ಸಾಬೀತಾಗಿದೆ ಅಲ್ವಾ?. ಯಾವ ಎವಿಡೆನ್ಸ್ ಇದೆ. ರಾಜ್ಯಪಾಲರು ಯಾವುದಾದರೂ ಪುರಾವೆ ಕೊಟ್ಟಿದಾರಾ? ಸೆಕ್ಷನ್ 17A ಪ್ರೊಸೀಜರ್ ಫಾಲೋ ಮಾಡಿದಾರಾ?. ಇದೆಲ್ಲಾ ಸಾಕ್ಷಿ ಬಿಟ್ಟು ರಾಜೀನಾಮೆ ಕೇಳಲಿ. ಪೋಕ್ಸೋ ಕೇಸ್ ಸಾಬೀತಾಗಿದೆ. ವಿಜಯೇಂದ್ರ ವಿರುದ್ಧ ಡಿಎ ಕೇಸ್ ಪ್ರೊವ್​ ಆಗಿದೆ. ಇವರಿಬ್ಬರೂ ಬೇಲ್ ಮೇಲೆ ಓಡಾಡ್ತಿದಾರೆ .ಇವರಿಗೆ‌ ನೈತಿಕತೆ ಇದ್ಯಾ ರಾಜೀನಾಮೆ ಕೇಳೋಕೆ? ಎಂದು ಪ್ರಶ್ನಿಸಿದರು.

ಈಗ ತನಿಖೆ ಮಾಡಿಸುತ್ತಿದ್ದೇವೆ. ರಾಜ್ಯಪಾಲರು ಆರೋಪಕ್ಕೆ ಅಗಾಧ ಸಾಕ್ಷಿ ಇದೆ ಅಂತಾ ಹೇಳಿದಾರೆ. ಎಲ್ಲಿದೆ? ಹೇಗಿದೆ? ಆ ಎವಿಡೆನ್ಸ್​ನ ಯಾರು ಅನುಮೋದನೆ ಮಾಡಿದಾರೆ?. ಯಾವ ತನಿಖಾ ಸಂಸ್ಥೆ ತಪ್ಪಾಗಿದೆ ಅಂತಾ ವರದಿ ಕೊಟ್ಟಿದೆ?. ಯಾರೋ‌ ಖಾಸಗಿ ವ್ಯಕ್ತಿ ದೂರು ಕೊಟ್ಟಿದಾರೆ. ಅದನ್ನ ತಕ್ಷಣ ರಾಜ್ಯಪಾಲರು‌ ನಂಬಿದ್ದಾರೆ ಅಂದರೆ ಹೇಗೆ?. ಹಾಗಾದರೆ ನಾಳೆ ನಾವೂ ಖಾಸಗಿ ದೂರು ಕೊಡ್ತೇವೆ, ಕುಮಾರಸ್ವಾಮಿ ಮೇಲೆ‌ ಇರಬಹುದು, ನಿರಾಣಿ‌ ಇರಬಹುದು. ಕೇಂದ್ರ ಸಚಿವರ‌ ಮೇಲೆ ದೂರು‌ ಕೊಡ್ತಾ‌ ಹೋಗಬಹುದು. ಕಾನೂನು ಅಂತಾ ಇಲ್ವಾ?, ಸಂವಿಧಾನ ಅಂತಾ ‌ಇಲ್ವಾ? ಹೇಗೆ‌ ರಾಜ್ಯಪಾಲರಿಂದ ಸಂವಿಧಾನದ ಕಗ್ಗೊಲೆ ಆಗಿದೆ ಅಂತಾ ನಿನ್ನೆ ಸ್ಪಷ್ಟವಾಗಿ ಹೇಳಿದ್ದೇವೆ. ಯಾವುದೇ ಪ್ರೊಸಿಜರ್ ‌ಇಲ್ಲ, ಕಾನೂನಿಲ್ಲ. ಯಾವ ದುರುದ್ದೇಶಕ್ಕೆ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದಾರೆ?. ಏನು ಉದ್ದೇಶ ಇವರದ್ದು ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ತಡೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ನೋಡಿ ಏನಾದರೂ ಮಾಡಿದ್ರೆ ಕಾನೂನಾತ್ಮಕವಾಗಿ ಮಾಡಬೇಕು. ಏನೇ ಮಾಡಿದರು ನಾವು ಕಾನೂನು ಪಾಲನೆ ಮಾಡಲೇಬೇಕು. ಕಾನೂನು ಚೌಕಟ್ಟಿನಲ್ಲೇ ಮಾಡಬೇಕು. ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡ್ತಾರಾ ಅಂತ ಕಾಯ್ತಾ ಇದ್ದೇವೆ. ನೋಡೋಣ‌ ರಾಜ್ಯಪಾಲರು ಕೊಡ್ಲಿ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹೇಗೆ ಹಚ್ತಾರೆ ಗವರ್ನರ್ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನ್ಯಾಯಾಲಯದಲ್ಲಿ ಪರಿಹಾರ ಸಿಗುವ ಸಂಪೂರ್ಣ ವಿಶ್ವಾಸವಿದೆ: ಸಿಎಂ ಸಿದ್ದರಾಮಯ್ಯ - CM Siddaramaiah

Last Updated : Aug 19, 2024, 7:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.