ETV Bharat / state

ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಫಲಿತಾಂಶದ ಸುಧಾರಣೆಗೆ ಶಿಕ್ಷಣ ಕೋಪೈಲಟ್ ಯೋಜನೆ: ಸಚಿವ ಮಧು ಬಂಗಾರಪ್ಪ - QUALITY OF EDUCATION

ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶದ ಸುಧಾರಣೆಗಾಗಿ ಶಿಕ್ಷಣ ಕೋಪೈಲಟ್ ಎಂಬ ಯೋಜನೆ ಜಾರಿಗೆ ತರಲಾಗಿದೆ.

MINISTER MADHU BANGARAPPA GREEN SIGNAL TO EDUCATION COPILOT PROGRAM
ಶಿಕ್ಷಣ ಕೋಪೈಲಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು (ETV Bharat)
author img

By ETV Bharat Karnataka Team

Published : Oct 18, 2024, 2:18 PM IST

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯೊಂದಿಗೆ ಶಿಕ್ಷಣ ಕೋಪೈಲಟ್ ಯೋಜನೆ ಜಾರಿಗೆ ತರಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶಿಕ್ಷಣ ಕೋಪೈಲಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸ್ಥಳೀಯ ಪಠ್ಯಕ್ರಮ, ಭಾಷೆ ಮತ್ತು ಸಂದರ್ಭವನ್ನು ಆಧರಿಸಿ ಸಮಗ್ರ ಬೋಧನಾ ಸಂಪನ್ಮೂಲಗಳು ಮತ್ತು ಕಲಿಕೆಯ ಅನುಭವಗಳನ್ನು ರಚಿಸಲು ಶಿಕ್ಷಣ ಕೋಪೈಲಟ್ ಯೋಜನೆ ಶಿಕ್ಷಕರನ್ನು ಸಶಕ್ತಗೊಳಿಸುತ್ತದೆ. ಕರ್ನಾಟಕ ರಾಜ್ಯದ ನಗರ ಮತ್ತು ಗ್ರಾಮೀಣ ಭಾಗಗಳ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲಿ 750ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಂದ ಆಯ್ದ 1000 ಶಿಕ್ಷಕರಿಗೆ ಶಿಕ್ಷಣ ಕೋಪೈಲಟ್ -AI ಚಾಲಿತ ಡಿಜಿಟಲ್ ಸಹಾಯವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

ಶಿಕ್ಷಣ ಕೋಪೈಲಟ್ ಉತ್ತಮ ಗುಣಮಟ್ಟದ ವೈಯಕ್ತೀಕರಿಸಿದ ವಿಷಯವನ್ನು ರಚಿಸಲು ಶಿಕ್ಷಕರನ್ನು ಸಬಲೀಕರಣಗೊಳಿಸುತ್ತದೆ. ಶಿಕ್ಷಕರ ಹಿಮ್ಮಾಹಿತಿ ಆಧಾರದ ಮೇಲೆ ಚಟುವಟಿಕೆಗಳು, ಮೌಲ್ಯಮಾಪನಗಳು, ನೈಜ - ಪ್ರಪಂಚದ ಉದಾಹರಣೆಗಳು, ಅನ್ವಯಗಳು, ಕಿರು ವಿಡಿಯೋಗಳು ಮತ್ತು ಸಮಗ್ರ ಪಾಠ ಯೋಜನೆಗಳಂತಹ ಬೋಧನಾ ಸಂಪನ್ಮೂಲಗಳನ್ನು ರಚಿಸಲು ಶಿಕ್ಷಣ ಕೋಪೈಲಟ್ ಸಹಾಯ ಮಾಡುತ್ತದೆ. ಇದು ಸ್ವಯಂ ಕಲಿಕೆ ಮತ್ತು ಸಂವಾದಾತ್ಮಕ ವಿಷಯ ರಚನೆಗಾಗಿ ಶಿಕ್ಷಕರಿಗೆ ಚಾಟ್ - ಬಾಟ್ ಅನ್ನು ಸಹ ಒದಗಿಸುತ್ತದೆ ಎಂದು ಸಚಿವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಡಾ. ಕೆ.ವಿ.ತ್ರಿಲೋಕಾಚಂದ್ರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: "ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ" ಕಾರ್ಯಕ್ರಮದ ಲೋಗೋ ಅನಾವರಣ: ಸರ್ಕಾರಿ ಶಾಲೆ ಅಭಿವೃದ್ಧಿಗೆ ದಾನಿಗಳಿಗೆ ಕರೆ - Our school our responsibility

ETV Bharat Logo

Copyright © 2025 Ushodaya Enterprises Pvt. Ltd., All Rights Reserved.